Puttur: ಟ್ರೀ ಪಾರ್ಕ್‌ ನಿರ್ಲಕ್ಷ್ಯಕ್ಕೆ ದುಡ್ಡಿನ ಕೊರತೆ ನೆಪ

ಉದಯವಾಣಿ ಸುದಿನ ವರದಿ ಬಳಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

Team Udayavani, Sep 25, 2024, 2:44 PM IST

3

ಪುತ್ತೂರು: ನಗರದ ಬೀರಮಲೆ ಸಾಲುಮರದ ತಿಮ್ಮಕ್ಕ ಪಾರ್ಕ್‌ ನಿರ್ವಹಣೆಗೆ ಬಿಡಿಗಾಸು ಅನುದಾನ ನೀಡುತ್ತಿಲ್ಲ ಅನ್ನುವ ಕಾರಣ ನೆಪವಾಗಿಟ್ಟುಕೊಂಡು ವೃಕ್ಷೋದ್ಯಾನವನ ಪಾಳು ಬಿದ್ದಿದೆ ಅನ್ನುವ ಅಂಶವೀಗ ಬೆಳಕಿಗೆ ಬಂದಿದೆ.

ಪಾರ್ಕ್‌ ಅವ್ಯವಸ್ಥೆಯ ಬಗ್ಗೆ ಸೆ.24 ರಂದು ಉದಯವಾಣಿ ಸುದಿನ ಪ್ರಕಟಿಸಿದ ಸಮಗ್ರ ವರದಿ ಸಂಚಲನ ಮೂಡಿಸಿದೆ. ಪರಿಸರ ಪ್ರೇಮಿಯೋರ್ವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪಾರ್ಕ್‌ ನಿರ್ವಹಣೆಗೆ ಅರಣ್ಯ ಇಲಾಖೆ ಕಾಳಜಿ ತೋರದಿರುವ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಅರಣ್ಯ ಇಲಾಖೆಗೆ ಕರೆ ಮಾಡಿ ನಿರ್ವಹಣೆ ಸಾಧ್ಯವಿಲ್ಲದಿದ್ದರೆ ಪಾರ್ಕ್‌ ಹೆಸರು ಬದಲಾಯಿಸುವಂತೆ ಆಗ್ರಹಿಸಿದ್ದಾರೆ.

ನಿರ್ವಹಣೆಗೆ ದುಡ್ಡಿಲ್ಲ
ನಿರ್ವಹಣೆ ವಿಚಾರದಲ್ಲಿ ಅರಣ್ಯ ಇಲಾಖೆಯೊಳಗೆ ಸಮನ್ವಯತೆ ಇಲ್ಲ ಅನ್ನುವ ಆರೋಪವೂ ಕೇಳಿ ಬಂದಿದೆ. ಒಂದು ಮೂಲಗಳ ಮಾಹಿತಿ ಪ್ರಕಾರ ನಿರ್ವಹಣೆಗೆ ದುಡ್ಡು ಬರುತ್ತಿದೆ. ಆದರೆ ಅದನ್ನು ಸಮರ್ಪಕವಾಗಿ ವಿನಿಯೋಗಿಸುತ್ತಿಲ್ಲ. ಅನುದಾನ ದುರ್ಬಳಕೆ ಆಗುತ್ತಿದೆ ಎನ್ನುವ ಆರೋಪ ಕೇಳಿ ಬಂದರೆ, ಇನ್ನೊಂದು ಮೂಲಗಳು ಕಳೆದ ಕೆಲ ವರ್ಷಗಳಿಂದ ನಿರ್ವಹಣೆಗೆ ಸರಕಾರದಿಂದ ದುಡ್ಡು ಬಂದಿಲ್ಲ. ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಬಿಡುಗಡೆಯಾಗಿಲ್ಲ ಎಂಬ ಮಾತು ಕೇಳಿ ಬಂದಿದೆ.

ದುರಸ್ತಿಗೂ ಅನುಮತಿ ಬೇಕಂತೆ..?
ಪಾರ್ಕ್‌ನಲ್ಲಿ ಏಜೆನ್ಸಿ ವತಿಯಿಂದ ಓರ್ವ ಸಿಬಂದಿ, ಅರಣ್ಯ ಇಲಾಖೆಯಿಂದ ಓರ್ವ ಸಿಬಂದಿಯನ್ನು ನಿಯೋಜಿಸಲಾಗಿದೆ. ಈ ಸಿಬಂದಿ ಪ್ರವಾಸಿಗರ ಮೇಲೆ ನಿಗಾ ಇರಿಸುವುದಷ್ಟೇ. ನಿರ್ವಹಣೆ ಜವಾಬ್ದಾರಿ ಯಾರು ಎನ್ನುವ ಬಗ್ಗೆ ಯಾರಲ್ಲೂ ಸ್ಪಷ್ಟ ಮಾಹಿತಿ ಇಲ್ಲ. ವಾಕಿಂಗ್‌ ಪಾಥ್‌ಗೆ ಮರ ಬಿದ್ದು ಸಂಪರ್ಕವೇ ಕಡಿತಗೊಂಡಿದ್ದರೂ ಅರಣ್ಯ ಇಲಾಖೆಯ ಸ್ಥಳೀಯ ಸಿಬಂದಿಗೆ ತೆರವು ಮಾಡುವ ಅಧಿಕಾರ ಇಲ್ಲ. ಮಹಜರು ನಡೆಸಿ ಡಿಎಫ್‌ಒಗೆ ವರದಿ ಸಲ್ಲಿಸಿ ಅಲ್ಲಿಂದ ಅನುಮತಿಗೆ ಕಾಯಬೇಕು. ಇಂತಹ ದುಃಸ್ಥಿತಿಯಿಂದ ದುರಸ್ತಿ ಕಾರ್ಯ ಬೇಗ ಆಗದು ಅನ್ನುವ ಪರಿಸ್ಥಿತ ಇದೆ.

ಸಾಲು ಮರದ ತಿಮ್ಮಕ್ಕ ಪಾರ್ಕ್‌ ದುಸ್ಥಿತಿಯ ಬಗ್ಗೆ ಅರಣ್ಯ ಇಲಾಖೆಯ ಡಿಎಫ್‌ಒ ಅವರ ಬಳಿ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.
-ಮುಲ್ಲೈ ಮುಗಿಲನ್‌ ಜಿಲ್ಲಾಧಿಕಾರಿ ದ.ಕ.

ಪಾರ್ಕ್‌ ನಿರ್ವಹಣೆ ಸಮಸ್ಯೆಯ ವಿಚಾರ ಗಮನಕ್ಕೆ ಬಂದಿದೆ. ಅನುದಾನ ಕಡಿಮೆ ಇರುವ ಕಾರಣ ಕೆಲಸ ಆಗಿಲ್ಲ. ಬೇರೆ ಮೂಲಗಳನ್ನು ಬಳಸಿಕೊಂಡು ದುರಸ್ತಿಗೆ ಬಗ್ಗೆ ಯೋಜನೆ ರೂಪಿಸಲಾಗುವುದು.
-ಸುಬ್ಬಯ್ಯ ಎಸಿಎಫ್‌,ಪುತ್ತೂರು ಉಪ ವಲಯ ಅರಣ್ಯ ವಿಭಾಗ

ಟ್ರೀ ಪಾರ್ಕ್‌ ನಮ್ಮ ವ್ಯಾಪ್ತಿಗೆ ಬರುತ್ತಿದ್ದು ದುರಸ್ತಿ ನಡೆಸಲು ಅನುದಾನ ಬಂದಿಲ್ಲ. ಪಾರ್ಕ್‌ನ ಸ್ವಂತ ಆದಾಯದಿಂದಲೇ ನಿರ್ವಹಣೆ ಮಾಡಬೇಕು. ಆದರೆ ಅಷ್ಟು ಆದಾಯ ಅಲ್ಲಿ ಸಂಗ್ರಹವಾಗುತ್ತಿಲ್ಲ .ಅಲ್ಲಿನ ಕೆಲವು ಅಗತ್ಯಗಳ ಬಗ್ಗೆ ಪಟ್ಟಿ ಮಾಡಿ ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಬಿಡುಗಡೆಯಾದ ಬಳಿಕ ಕೆಲಸ ಪ್ರಾರಂಭಗೊಳ್ಳಲಿದೆ.
-ಉಲ್ಲಾಸ್‌, ಉಪವಲಯ ಅರಣ್ಯಾಧಿಕಾರಿ

ಟಾಪ್ ನ್ಯೂಸ್

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

1-deee

Siddaramaiah ವಿರುದ್ಧ ಹರಿಯಾಣದಲ್ಲಿ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ

00025

Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

siddaramaiah

Siddaramaiah ಬೆಂಬಲಿಸಿ ಅಹಿಂದದಿಂದ ಹುಬ್ಬಳ್ಳಿ-ಬೆಂಗಳೂರು ಜಾಗೃತಿ ಜಾಥಾ

Kalaburagi: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಸರಕಾರಗಳ ಮೇಲೆ ಒತ್ತಡ, ಬೃಹತ್ ಸಮ್ಮೇಳನ

Kalaburagi: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಸರಕಾರಗಳ ಮೇಲೆ ಒತ್ತಡ, ಬೃಹತ್ ಸಮ್ಮೇಳನ

Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು

Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(2)

Vitla: ಟ್ರಾಫಿಕ್‌ ಜಾಮ್‌ ವಿಟ್ಲ ಪೇಟೆಯಲ್ಲಿ ನಿತ್ಯ ಸಂಕಟ

6-belthanagdy

ಬೆಳ್ತಂಗಡಿ:ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ‘ಕುತ್ಲೂರು ಗ್ರಾಮ’ ರಾಷ್ಟ್ರಪ್ರಶಸ್ತಿಗೆ ಆಯ್ಕೆ

Bantwal: ಮುಂಬಯಿ ಪೊಲೀಸರೆಂದು ಹೇಳಿ ವಂಚನೆ

Bantwal: ಮುಂಬಯಿ ಪೊಲೀಸರೆಂದು ಹೇಳಿ ವಂಚನೆ

sulliaHindu ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು; ಸುಳ್ಯದಲ್ಲಿ ಭಾರೀ ಪ್ರತಿಭಟನೆ

Hindu ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲು; ಸುಳ್ಯದಲ್ಲಿ ಭಾರೀ ಪ್ರತಿಭಟನೆ

Belthangady ಹೃದಯಾಘಾತ: ಶಾಮಿಯಾನ ಉದ್ಯಮಿ ಸಾವು

Belthangady ಹೃದಯಾಘಾತ: ಶಾಮಿಯಾನ ಉದ್ಯಮಿ ಸಾವು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

14-tourism

Netravati Trek: ದಿ ನೆಕ್ಸ್ಟ್ ಸ್ಟಾಪ್‌ ಈಸ್‌ ನೇತ್ರಾವತಿ ಪೀಕ್‌!

9(1)

Mangaluru: ಟ್ರಾಫಿಕ್‌ ಸಮಸ್ಯೆ: ಶಾಲಾ ಸಮಯ ವ್ಯತ್ಯಾಸ ಸೂತ್ರ ಮತ್ತೆ ಚರ್ಚೆಗೆ

13-

ವಿದ್ಯುತ್ ಪರಿವರ್ತಕದ ಬಳಿ ಮೇಯುತ್ತಿದ್ದ 2 ಎಮ್ಮೆಗಳಿಗೆ ವಿದ್ಯುತ್ ಪ್ರವಹಿಸಿ ಸಾವು

Kollur: ಸಂಪೂರ್ಣ ಹದಗೆಟ್ಟ ವಂಡ್ಸೆ- ಕೊಲ್ಲೂರು ಮುಖ್ಯ ರಸ್ತೆ; ವಾಹನ ಸಂಚಾರವೇ ಕಷ್ಟ

Kollur: ಸಂಪೂರ್ಣ ಹದಗೆಟ್ಟ ವಂಡ್ಸೆ- ಕೊಲ್ಲೂರು ಮುಖ್ಯ ರಸ್ತೆ; ವಾಹನ ಸಂಚಾರವೇ ಕಷ್ಟ

1-deee

Siddaramaiah ವಿರುದ್ಧ ಹರಿಯಾಣದಲ್ಲಿ ಪ್ರಧಾನಿ ಮೋದಿ ತೀವ್ರ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.