Puttur: ಸರಕಾರಿ ಇಲಾಖೆಗಳಲ್ಲಿ ವಿಟಮಿನ್‌ ಎಸ್‌ ಕೊರತೆ!

ಪುತ್ತೂರು ತಾಲೂಕಿನ ಪ್ರಮುಖ ಇಲಾಖೆ ಕಚೇರಿಗಳಲ್ಲಿ ಸಿಬಂದಿ ಬಲಹೀನತೆ!

Team Udayavani, Dec 3, 2024, 12:48 PM IST

1

ಪುತ್ತೂರು: ಸರಕಾರಿ ಕಚೇರಿಗಳಲ್ಲಿ ತ್ವರಿತವಾಗಿ ಕೆಲಸ ನಡೆಯಬೇಕು ಎಂಬ ಬಗ್ಗೆ ಸರಕಾರವು ಸಕಾಲ ಸೇರಿದಂತೆ ಅನೇಕ ಉತ್ತರದಾಯಿ ವ್ಯವಸ್ಥೆಗಳನ್ನು ಮಾಡಿದೆ. ಆದರೆ, ಇಲಾಖೆಗಳು ಸಕಾಲದಲ್ಲಿ ಸೇವೆ ನೀಡಲು ಆವಶ್ಯಕವಾಗಿರುವ ಸಿಬಂದಿ ನೇಮಕಾತಿ ವಿಚಾರದಲ್ಲಿ ಅಸಡ್ಡೆ ವಹಿಸಿದೆ. ಸಿಬಂದಿ ಕೊರತೆಯಿಂದಾಗಿ ಜನರಿಗೆ ಸರಿಯಾದ ಸೇವೆ ದೊರೆಯುತ್ತಿಲ್ಲ ಎನ್ನುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಸಿಬಂದಿ ಕೊರತೆಯ ಹೊರೆ ಇರುವ ಸಿಬಂದಿ ಮೇಲೆ ಬಿದ್ದು ಅವರೂ ಹತಾಶೆಯ ಹಂತ ತಲುಪಿದ್ದಾರೆ. ಕೆಲಸದ ಒತ್ತಡ ನಿಭಾಯಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿ ವಿಟಮಿನ್‌ ಎಸ್‌ ಎಂದರೆ ಸ್ಟಾಫ್ ಅಥವಾ ಸಿಬಂದಿ ಕೊರತೆ ಮೇಲುಗೈ ಸಾಧಿಸಿದೆ.

ತಾಲೂಕಿನ ಶಕ್ತಿ ಕೇಂದ್ರದ ಪ್ರಮುಖ ಸರಕಾರಿ ಕಚೇರಿಗಳಲ್ಲಿ ಸಿಬಂದಿ ಸಾಮರ್ಥ್ಯ ಹೇಗಿದೆ ಅನ್ನುವ ಬಗ್ಗೆಯ ಉದಯವಾಣಿ ಸುದಿನ ರಿಯಾಲಿಟಿ ಚೆಕ್‌ ಮಾಡಿದಾಗ ಎಲ್ಲವೂ ಖಾಲಿಯದ್ದೇ ಕಥೆ. ಪರಿಣಾಮ ಸಾವಿರಾರು ಜನರ ನಿತ್ಯದ ಕೆಲಸ ಕಾರ್ಯಗಳು ಕ್ಲಪ್ತ ಸಮಯಕ್ಕೆ ಆಗುತ್ತಿಲ್ಲ. ಜನರು ಇಲಾಖೆಯ ಮೇಲೆ ಬೆರಳು ತೋರಿಸಿದರೆ, ಇಲಾಖೆಯವರು ಖಾಲಿ ಹುದ್ದೆಯ ಕಡೆ ಬೊಟ್ಟು ಮಾಡುತ್ತಾರೆ. ಹೊಸ ವರ್ಷದ ಹೊಸ್ತಿಲಿನಲ್ಲಾದರೂ ಕೊರತೆ ತುಂಬುವ ಪ್ರಯತ್ನ ನಡೆದು ಕಚೇರಿಗಳಲ್ಲಿ ಜನರ ಕೆಲಸಕ್ಕೆ ವೇಗ ಸಿಗುವಂತಾಗಲಿ. ಇದು ಸರಕಾರಿ ಕಚೇರಿಗಳ ಸಾಮರ್ಥ್ಯದ ಬಲಾಬಲದ ನೋಟ.

ಕೃಷಿ
ಸಹಾಯಕ ಕೃಷಿ ನಿರ್ದೇಶಕರ ಕಚೇರಿ
ಮಂಜೂರಾತಿ ಹುದ್ದೆ : 27
ಖಾಲಿ ಇರುವ ಹುದ್ದೆ :  23
ಕೊರತೆ ಪ್ರಮಾಣ: 85.18 ಶೇ.

ಖಾಲಿ ಇರುವ ಪ್ರಮುಖ ಹುದ್ದೆಗಳು: ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಖಾಲಿ ಇವೆ.
ಮುಖ್ಯಾಂಶ: ಕೃಷಿಕರಿಗೆ ಸಬ್ಸಿಡಿ ರೂಪದಲ್ಲಿ ಬರುವ ಬಹುತೇಕ ಸವಲತ್ತುಗಳು ಇಲ್ಲಿಯೇ ವಿಲೇ ಆಗುವುದು ಇಲ್ಲಿ. ತಾಲೂಕು ವ್ಯಾಪ್ತಿಗೆ ಇರುವ ಇಲಾಖೆಯ ಪ್ರಮುಖ ಹುದ್ದೆ ಸಹಾಯಕ ಕೃಷಿ ನಿರ್ದೇಶಕ. ಈ ಹುದ್ದೆಗೆ ಪೂರ್ಣಕಾಲಿಕ ಅಧಿಕಾರಿ ನೇಮಕ ಆಗಿಲ್ಲ. 5 ಕೃಷಿ ಅಧಿಕಾರಿ ಹುದ್ದೆಯಲ್ಲಿ 4, 11 ಸಹಾಯಕ ಕೃಷಿ ಅಧಿಕಾರಿ ಹುದ್ದೆಯಲ್ಲಿ 10 ಖಾಲಿ ಇದೆ. ಅಂದರೆ ಕ್ಷೇತ್ರ ಸಂಚಾರಕ್ಕೆ ಇಲ್ಲಿ ಅಧಿಕಾರಿಗಳ ಸಂಖ್ಯೆಯೇ ಶೂನ್ಯ. ಎಫ್‌ಡಿಎ, ಬೆರಳಚ್ಚುಗಾರ, ವಾಹನ ಚಾಲಕ, ಗ್ರೂಪ್‌ ಡಿ ಎಲ್ಲ ಹುದ್ದೆಗಳು ಖಾಲಿ ಇವೆ.

ಕಂದಾಯ
ತಾಲೂಕು ಕಚೇರಿ
ಮಂಜೂರಾತಿ ಹುದ್ದೆ : 79
ಖಾಲಿ ಇರುವ ಹುದ್ದೆ : 34
ಕೊರತೆ ಪ್ರಮಾಣ : 43.58 ಶೇ.

ಖಾಲಿ ಇರುವ ಪ್ರಮುಖ ಹುದ್ದೆಗಳು: ಗ್ರಾಮ ಲೆಕ್ಕಿಗರು, ತಹಶೀಲ್ದಾರ್‌ ಗ್ರೇಡ್‌-2, ಗ್ರೂಫ್‌ ಡಿ ಹುದ್ದೆ.
ಮುಖ್ಯಾಂಶ: ಭೂ ಸಂಬಂಧಿತ ಕೆಲಸಗಳು ಇಲ್ಲಿಯೇ ಆಗುವುದು. ಎಲ್ಲ ಇಲಾಖೆಗಳಿಗೆ ಹೋಲಿಸಿದರೆ ಇಲ್ಲಿ ದಿನನಿತ್ಯವೂ ಜನದಟ್ಟಣೆ ತಪ್ಪುವುದಿಲ್ಲ. ಹಾಗಂತ ಅದಕ್ಕೆ ಬೇಕಾದಷ್ಟು ಸೌಲಭ್ಯಗಳು ಇಲ್ಲಿಲ್ಲ. ತಹಶೀಲ್ದಾರ್‌ ಗ್ರೇಡ್‌-2 ಹುದ್ದೆ ಖಾಲಿ ಇದೆ. ಗ್ರೂಪ್‌ ಡಿಯಲ್ಲಿ 9 ರ ಪೈಕಿ 7 ಹುದ್ದೆ ಖಾಲಿ ಇವೆ. ಎಸ್‌ಡಿಎ 4, ಬೆರಳಚ್ಚುಗಾರ-2, ಗ್ರಾಮ ಲೆಕ್ಕಿಗ-14 ಹೀಗೆ ಬಹುತೇಕ ಎಲ್ಲವೂ ಖಾಲಿ ಖಾಲಿ ಇವೆ. ಕಂದಾಯ ಇಲಾಖೆಗೆ ಸಿಬಂದಿ ಶಕ್ತಿ ತುಂಬದಿದ್ದರೆ ಜನರ ಪರದಾಟಕ್ಕೆ ಮುಕ್ತಿ ಸಿಗಲಾರದು ಅನ್ನುತ್ತಿದೆ ಚಿತ್ರಣ.

ಪಂಚಾಯತ್ ರಾಜ್‌
ತಾ‌ಲ್ಲೂಕು ಪಂಚಾಯತ್‌ ಕಚೇರಿ
ಮಂಜೂರಾತಿ ಹುದ್ದೆ : 25
ಖಾಲಿ ಇರುವ ಹುದ್ದೆ : 21
ಕೊರತೆ ಪ್ರಮಾಣ : 84 ಶೇ

ಖಾಲಿ ಇರುವ ಪ್ರಮುಖ ಹುದ್ದೆಗಳು:ಯೋಜನಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರು
ಮುಖ್ಯಾಂಶ: ಗ್ರಾ.ಪಂ.ಗೆ ಸಂಬಂಧಿಸಿದ ಬಹುತೇಕ ನಿರ್ದೇಶನಗಳು ಇಲ್ಲಿಂದಲೇ ಹೋಗುವುದು. ಒಂದರ್ಥದಲ್ಲಿ ಗ್ರಾ.ಪಂ.ಕಾರ್ಯವೈಖರಿ ನಿರ್ಧಾರವಾಗುವ ಕೇಂದ್ರ. ತಾಲೂಕು ಯೋಜನಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ನಿರ್ದೇಶಕರು (ಗ್ರಾ.ಉ), ಸಹಾಯಕ ನಿರ್ದೇಶಕರು(ಪಂ.ರಾ.),ವ್ಯವಸ್ಥಾಪಕ, ಕಿರಿಯ ಎಂಜಿನಿಯರ್‌, ಎಫ್‌ಡಿಎ, ಪ್ರಗತಿ ಸಹಾಯಕರು, ಶೀಘ್ರ ಲಿಪಿಗಾರರು, ಎಸ್‌ಡಿಎ, ವಾಹನ ಚಾಲಕ ಹುದ್ದೆಗಳಲ್ಲಿ ಮಂಜೂರಾತಿಯ ಎಲ್ಲ ಹುದ್ದೆಗಳು ಖಾಲಿ ಇವೆ.

ನಗರಾಡಳಿತ
ನಗರಸಭೆ
ಮಂಜೂರಾತಿ ಹುದ್ದೆ: 238
ಖಾಲಿ ಇರುವ ಹುದ್ದೆ: 178
ಕೊರತೆ ಪ್ರಮಾಣ: 74.78 ಶೇ

ಖಾಲಿ ಇರುವ ಪ್ರಮುಖ ಹುದ್ದೆಗಳು: ಗ್ರೇಡ್‌ ಸಿ, ಗ್ರೇಡ್‌ ಡಿ ವಿಭಾಗದಲ್ಲಿ ಬಹುತೇಕ ಹುದ್ದೆಗಳು ಖಾಲಿ ಇವೆ.
ಮುಖ್ಯಾಂಶ: ಪುತ್ತೂರು ನಗರ ಜಿಲ್ಲಾಕೇಂದ್ರದ ನಿರೀಕ್ಷೆಯಲ್ಲಿ ಇರುವ ಪ್ರದೇಶ. ಕಳೆದ ಹತ್ತು ವರ್ಷಗಳಿಂದ ಶೇ.80ರಷ್ಟು ಸಿಬಂದಿ ಕೊರತೆ ಇಲ್ಲಿದೆ. ಗರಿಷ್ಠ ಹುದ್ದೆಗೆ ಕನಿಷ್ಠ ಸಿಬಂದಿ ಎನ್ನುವ ಸ್ಥಿತಿ ಇಲ್ಲಿನದು. ಸಮುದಾಯ ಸಂಘಟನಾ ಅಧಿಕಾರಿ, ಸಮುದಾಯ ಸಂಘಟಕರು, ಎಫ್‌ಡಿಎ ಈ ಎಲ್ಲ ಹುದ್ದೆಗಳು ಖಾಲಿ ಇವೆ. ಆರೋಗ್ಯ ನಿರೀಕ್ಷಕರ ಪೈಕಿ 4 ಹುದ್ದೆಗಳಿಗೆ ಸಿಬಂದಿ ಇಲ್ಲ. ಸಹಾಯಕ ಕಾರ್ಯಪಾಲಕ ಅಭಿಯಂತರು, ಕಿರಿಯ ಅಭಿಯಂತರು, ಕಚೇರಿ ವ್ಯವಸ್ಥಾಪಕ ಹೀಗೆ ನಾನಾ ಹುದ್ದೆಗಳು ಖಾಲಿ.

ತೋಟಗಾರಿಕೆ
ಸ.ತೋಟಗಾರಿಕಾ ನಿರ್ದೇಶಕರ ಕಚೇರಿ
ಮಂಜೂರಾತಿ ಹುದ್ದೆ :12
ಖಾಲಿ ಇರುವ ಹುದ್ದೆ :7
ಕೊರತೆ ಪ್ರಮಾಣ :58.33 ಶೇ.

ಖಾಲಿ ಇರುವ ಪ್ರಮುಖ ಹುದ್ದೆಗಳು: 3 ಸಹಾಯಕ ತೋಟಗಾರಿಕೆ ಹುದ್ದೆ, 3 ತೋಟಗಾ ರಿಕಾ ಸಹಾಯಕ ಹುದ್ದೆಗಳು ಖಾಲಿ ಇವೆ.
ಮುಖ್ಯಾಂಶ: ಅಡಿಕೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಪ್ರಕೃತಿ ವಿಕೋಪದ ವೇಳೆ ತೋಟಗಾರಿಕಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗ್ರಾಮ ಸಂಚಾರಕ್ಕೆ ಸಿಬಂದಿಯೇ ಇಲ್ಲ. ಎಲ್ಲ ಹೊಣೆಗಾರಿಕೆ ಹಿರಿಯ ತೋಟಗಾರಿಕೆ ನಿರ್ದೇಶಕರ ಹೆಗಲ ಮೇಲಿದೆ. ಆದರೆ ಶೇ.90 ರಷ್ಟು ಅಡಿಕೆ ಆಧಾರಿತ ಕೃಷಿ ಭೂಮಿಯ ಕಷ್ಟ ನಷ್ಟ ಆಲಿಸಲು ಒಬ್ಬ ಅಧಿಕಾರಿಯಿಂದ ಸಾಧ್ಯವೇ ಇಲ್ಲ. ಇನ್ನೂ ಕಚೇರಿಗೆ ಸಂಬಂಧಿಸಿ ಮಂಜೂರಾಗಿರುವ ಓರ್ವ ಅಟೆಂಡರ್‌ ಹುದ್ದೆಯು ಖಾಲಿ ಇದೆ.

ಆರೋಗ್ಯ
ತಾಲೂಕು ಆಸ್ಪತ್ರೆ
ಮಂಜೂರಾತಿ ಹುದ್ದೆ : 111
ಖಾಲಿ ಇರುವ ಹುದ್ದೆ : 61
ಕೊರತೆ ಪ್ರಮಾಣ : 54.95 ಶೇ

ಖಾಲಿ ಇರುವ ಪ್ರಮುಖ ಹುದ್ದೆಗಳು: ಡಿ ಗ್ರೂಪ್‌ ಮಂಜೂರಾತಿ ಹುದ್ದೆ 41. ಇದರಲ್ಲಿ ಇರುವುದು 3. ಖಾಲಿ 38
ಮುಖ್ಯಾಂಶ: ಮೂರು ತಾಲೂಕಿನಿಂದ ಪುತ್ತೂರು ಸರಕಾರಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯ ಸ್ವತ್ಛತೆ, ನಿರ್ವಹಣೆ, ಆಫೀಸ್‌ ಕೆಲಸಗಳು ಅತಿ ಹೆಚ್ಚು. ಆದರೆ ಅದನ್ನು ನಿರ್ವಹಿಸಲು ಡಿ ಗ್ರೂಪ್‌ ವಿಭಾಗದಲ್ಲಿ ಸಿಬಂದಿಗಳೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. 41 ಮಂಜೂರಾತಿ ಹುದ್ದೆಗಳಲ್ಲಿ ಲಭ್ಯ ಇರುವ 3 ಮಂದಿ ಈ ಜವಾಬ್ದಾರಿ ಹೊರಬೇಕು. ಇದು ಅತಿ ಆವಶ್ಯಕ ವಿಭಾಗ ಆಗಿರುವ ಕಾರಣ ತಾತ್ಕಾಲಿಕ ನೆಲೆಯಲ್ಲಿ ಸಿಬಂದಿ ನಿಯೋಜಿಸುವ ಬದಲು ಪೂರ್ಣಕಾಲಿಕ ಸಿಬಂದಿಗಳ ಅಗತ್ಯತೆ ಇಲ್ಲಿದೆ.

ಶಿಕ್ಷಣ
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ
ಮಂಜೂರಾತಿ ಹುದ್ದೆ : 23
ಖಾಲಿ ಇರುವ ಹುದ್ದೆ : 11
ಕೊರತೆ ಪ್ರಮಾಣ : 47.82 ಶೇ.

ಖಾಲಿ ಇರುವ ಪ್ರಮುಖ ಹುದ್ದೆಗಳು: ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ, ಶಿಕ್ಷಣ ಸಂಯೋಜಕ ಹುದ್ದೆಗಳು ಶೂನ್ಯ.
ಮುಖ್ಯಾಂಶ: ತಾಲೂಕು ಕ್ರೀಡಾಕೂಟ ಆಯೋಜನೆಯಂತಹ ಪ್ರಮುಖ ಜವಾಬ್ದಾರಿ ಈ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಿಗೆ ಇದೆ. ಇನ್ನೂ ಪ್ರಾಥಮಿಕ ಶಾಲಾ ಶಿಕ್ಷಣ ಸಂಯೋಜಕ ಎರಡೂ ಹುದ್ದೆಗಳು ಖಾಲಿ ಇವೆ. ವಲಯ ವ್ಯಾಪ್ತಿಯ ಶಾಲೆಗಳಲ್ಲಿನ ಪಠ್ಯ, ಪಠ್ಯೇತರ ಚಟುವಟಿಕೆಗಳ ಜವಾಬ್ದಾರಿ ಇವರ ಮೇಲಿದ್ದರೂ ಸಿಬಂದಿ ನೇಮಕ ಆಗಿಲ್ಲ. ಇನ್ನೂ ಎಫ್‌ಡಿಎ-2, ಎಸ್‌ಡಿಎ-2, ಡಾಟಾ ಎಂಟ್ರಿ ಆಪರೇಟರ್‌-1, ವಾಹನ ಚಾಲಕ-1, ಡಿಗ್ರೂಪ್‌-2 ಹುದ್ದೆ ಖಾಲಿ ಇವೆ. ಮುಖ್ಯವಾಗಿ ಬಿಇಓ ಅವರಿಗೆ ವಾಹನವೇ ಇಲ್ಲ.

-ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

DKShivakumar

Power sharing: ನಮ್ಮಲ್ಲಿ ಒಪ್ಪಂದ ನಿಜ: ಡಿ.ಕೆ.ಶಿವಕುಮಾರ್‌ ಪ್ರಥಮ ಹೇಳಿಕೆ

Loasabha–Jaishakar

Border Dispute: ಚೀನ ಜತೆಗಿನ ಗಡಿ ಸಮಸ್ಯೆ ಇತ್ಯರ್ಥಕ್ಕೆ ಬದ್ಧ: ವಿದೇಶಾಂಗ ಸಚಿವ ಜೈಶಂಕರ್‌

ED-Raid

MUDA Scam: ಸಿದ್ದರಾಮಯ್ಯ ಪತ್ನಿ ಸಹಿತ ಸಾವಿರ ಮುಡಾ ನಿವೇಶನ ಅಕ್ರಮ ಹಂಚಿಕೆ: ಇ.ಡಿ.

TN–Cyclone

Cyclone Fengal: ತಮಿಳುನಾಡಿನ 15 ಜಿಲ್ಲೆಯಲ್ಲಿ ಪ್ರವಾಹ: 721 ಮನೆ ನೆಲಸಮ

Bangala-Cris

Bangladesh Crisis: ದೂತಾವಾಸ ಕಚೇರಿ ಮೇಲೆ ದಾಳಿ: ಭಾರತ ವಿರುದ್ಧ ಬಾಂಗ್ಲಾ ಪ್ರತಿಭಟನೆ

Kundapura: ಪಾರಂಪರಿಕ ಆಚರಣೆಯ ತಲ್ಲೂರಿನ ಕಂಬಳ

Kundapura: ಪಾರಂಪರಿಕ ಆಚರಣೆಯ ತಲ್ಲೂರಿನ ಕಂಬಳ

Mob-BRAIN

Oxford University Press: ಆಕ್ಸ್‌ಫ‌ರ್ಡ್‌ನ 2024ರ ವರ್ಷದ ಪದ “ಬ್ರೈನ್‌ ರಾಟ್‌”


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kadaba: ಬಿಳಿನೆಲೆ ಸಂದೀಪ್‌ ಕೊಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ

Kadaba: ಬಿಳಿನೆಲೆ ಸಂದೀಪ್‌ ಕೊ*ಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ

14

Punjalkatte: ಮಳೆಗೆ ಮನೆಯ ಗೋಡೆ ಕುಸಿತ

courts

Puttur: ರಸ್ತೆ ಬದಿಯಲ್ಲಿ ಶವ ಇರಿಸಿದ ಪ್ರಕರಣ; ಮೂವರಿಗೆ ಜಾಮೀನು

Belthangady: Body of man who drowned in Netravati river found

Beltangady: ಬೆಳಾಲು ನೇತ್ರಾವತಿ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Kadaba: ನಾಪತ್ತೆಯಾಗಿದ್ದ ಸಂದೀಪ್‌ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

Kadaba: ನಾಪತ್ತೆಯಾಗಿದ್ದ ಸಂದೀಪ್‌ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

DKShivakumar

Power sharing: ನಮ್ಮಲ್ಲಿ ಒಪ್ಪಂದ ನಿಜ: ಡಿ.ಕೆ.ಶಿವಕುಮಾರ್‌ ಪ್ರಥಮ ಹೇಳಿಕೆ

Loasabha–Jaishakar

Border Dispute: ಚೀನ ಜತೆಗಿನ ಗಡಿ ಸಮಸ್ಯೆ ಇತ್ಯರ್ಥಕ್ಕೆ ಬದ್ಧ: ವಿದೇಶಾಂಗ ಸಚಿವ ಜೈಶಂಕರ್‌

ED-Raid

MUDA Scam: ಸಿದ್ದರಾಮಯ್ಯ ಪತ್ನಿ ಸಹಿತ ಸಾವಿರ ಮುಡಾ ನಿವೇಶನ ಅಕ್ರಮ ಹಂಚಿಕೆ: ಇ.ಡಿ.

TN–Cyclone

Cyclone Fengal: ತಮಿಳುನಾಡಿನ 15 ಜಿಲ್ಲೆಯಲ್ಲಿ ಪ್ರವಾಹ: 721 ಮನೆ ನೆಲಸಮ

Bangala-Cris

Bangladesh Crisis: ದೂತಾವಾಸ ಕಚೇರಿ ಮೇಲೆ ದಾಳಿ: ಭಾರತ ವಿರುದ್ಧ ಬಾಂಗ್ಲಾ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.