Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

12 ಕಿ.ಮೀ. ದೂರದ ವೀರಮಂಗಲಕ್ಕೆ ಪ್ರಯಾಣ, 18ಕ್ಕೂ ಅಧಿಕ ತಾಸಿನ ಸಂಚಾರ

Team Udayavani, Apr 19, 2024, 12:17 PM IST

8-ptr

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯ ಅಂಗವಾಗಿ ಗುರುವಾರ ಸಂಜೆ ಶ್ರೀ ದೇವರ ಅವಭೃಥ ಸವಾರಿ ವೀರಮಂಗಲ ಕುಮಾರಧಾರಾ ನದಿ ತಟಕ್ಕೆ ಸಾವಿರಾರು ಭಕ್ತರೊಂದಿಗೆ ತೆರಳಿತು.

ಶ್ರೀ ದೇವರು ಅಲ್ಲಲ್ಲಿ ಭಕ್ತರಿಂದ ಆರತಿ, ಹಣ್ಣುಕಾಯಿ ಮತ್ತು ಕಟ್ಟೆ ಪೂಜೆಗಳನ್ನು ಸ್ವೀಕರಿಸುತ್ತಾ ಎ.19 ರಂದು ಮುಂಜಾನೆ ವೀರಮಂಗಲ ನದಿ ತಟಕ್ಕೆ ತಲುಪಲಿದ್ದು ಅಲ್ಲಿ ಅವಭೃಥ ಸ್ನಾನ ನೆರವೇರಲಿದೆ. ಸುಮಾರು 18 ಗಂಟೆಗಳ ತನಕ ನಡಿಗೆಯಲ್ಲೇ ಕಟ್ಟೆಪೂಜೆ ಸ್ವೀಕರಿಸುತ್ತಾ ಅವಭೃಥ ಸ್ನಾನ ಮುಗಿಸಿ ದೇವರು ದೇವಾಲಯಕ್ಕೆ ಮರಳಿ ಬರುವುದು ಇಲ್ಲಿನ ವಿಶೇಷ.

ಬ್ರಹ್ಮರಥೋತ್ಸವದ ಬಳಿಕ

ಬುಧವಾರ ರಾತ್ರಿ ಶ್ರೀ ದೇವರ ರಥೋತ್ಸವ ಆದ ಅನಂತರ ಶ್ರೀ ದೇವರ ಬಂಗಾರ್‌ ಕಾಯರ್‌ಕಟ್ಟೆ ಸವಾರಿ ನಡೆದು ಶ್ರೀ ಉಳ್ಳಾಲ್ತಿ ದೈವಗಳನ್ನು ಬೀಳ್ಕೊಡುವ ಕಾರ್ಯ ಪೂರ್ವಶಿಷ್ಟ ಸಂಪ್ರದಾಯದಂತೆ ನಡೆಯಿತು. ಅನಂತರ ಭೂತ ಬಲಿ ನಡೆದು ಶ್ರೀ ದೇವರ ಶಯನ ನೆರವೇರಿತು.

ಕಟ್ಟೆ ಪೂಜೆ

ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ಕಟ್ಟೆ, ಗಾಂಧಿ ಕಟ್ಟೆ, ಸಿಟಿ ಹಾಸ್ಪಿಟಲ್‌ ಕಟ್ಟೆ, ಅರುಣಾ ಚಿತ್ರಮಂದಿರದ ವಠಾರದ ಕಟ್ಟೆ, ವಾಸುದೇವ್‌ ನಾಯಕ್‌ ನಿರ್ಮಿಸಿದ ಕಟ್ಟೆ, ಕೆನರಾ ಬ್ಯಾಂಕ್‌ ಎದುರಿನ ಕಟ್ಟೆ, ಯೆಳ್ತಿಮಾರ್‌ ಬಾಬಣ್ಣ ಶೆಣೈ ಅವರ ಕಟ್ಟೆ, ದಾಮೋದರ ಶೆಣೈ ಅವರ ಕಟ್ಟೆ, ಏಳು¾ಡಿ ನಾಗಪ್ಪ ಪೂಜಾರಿಯವರ ಕಟ್ಟೆ, ಕಲ್ಲಾರೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ, ರಾಘವೇಂದ್ರ ಮಠ, ಜೆ.ಕೆ. ಕಾಂಪ್ಲೆಕ್‌ ಕಟ್ಟೆ, ಕಲ್ಲಾರೆ ಆಳ್ವ ಗ್ಯಾರೇಜ್‌ ಕಟ್ಟೆ, ಧನ್ವಂತರಿ ಆಸ್ಪತ್ರೆಯ ವಠಾರದ ಕಟ್ಟೆ, ಕೆ.ಕೆ. ಶೆಣೈ ಕಾಂಪೌಂಡ್‌ ಕಟ್ಟೆ, ದರ್ಬೆ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಡಾಲ್ಫಿ ರೇಗೋ ವಠಾರದ ಕಟ್ಟೆ, ದರ್ಬೆ ಶ್ರೀ ಮಹಾಲಿಂಗೇಶ್ವರ ಭಕ್ತವೃಂದ ಸಾರ್ವಜನಿಕ ಕಟ್ಟೆ, ದರ್ಬೆ ವೃತ್ತದ ಬಳಿಯ ಕಟ್ಟೆ, ಗೋಪಾಲ ಪೈ ಕಟ್ಟೆ, ದಿ. ಮಹಾಲಿಂಗ ಪೈ ಕಟ್ಟೆ, ದರ್ಬೆ ಕಾವೇರಿಕಟ್ಟೆ, ಮುರಳಿ ಮೋಹನ ಶೆಟ್ಟಿಯವರ ವಠಾರದ ಕಟ್ಟೆ, ಶ್ರೀ ಮಹಾಲಿಂಗೇಶ್ವರ ಕಟ್ಟೆ, ಕೂರ್ನಡ್ಕ ಅಣ್ಣಪ್ಪ ಕಟ್ಟೆ, ಲಾರ್‌x ಮಹಾಲಿಂಗೇಶ್ವರ ಪೀಠಂ ಟ್ರಸ್ಟ್‌ ಕ್ಯಾಂಪ್ಕೋ ವಠಾರದ ಕಟ್ಟೆ, ಕೃಷ್ಣಯ್ಯ ಮಾಸ್ಟರ್‌ ವಠಾರದ ಕಟ್ಟೆ, ಮರೀಲ್‌ ಮಹಾಲಿಂಗೇಶ್ವರ ಕಟ್ಟೆ, ಮರೀಲ್‌ ಸಾರ್ವಜನಿಕ ಕಟ್ಟೆ, ಮಹಾಲಿಂಗೇಶ್ವರ ಭಟ್‌ ವಠಾರದ ಕಟ್ಟೆ, ಬೆದ್ರಾಳ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಶ್ರೀ ನಂದಿಕೇಶ್ವರ ಕಟ್ಟೆ, ದೇವರಕಟ್ಟೆ ಬೆದ್ರಾಳ, ಮುಕ್ವೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ, ಪಿ. ಗಣಪತಿ ಭಟ್‌ ಕಟ್ಟೆ, ಮಜಲುಮಾರು ಉಮಾಮಹೇಶ್ವರ ದೇವಸ್ಥಾನ, ಪದ್ಮಾವತಿ ಅಮ್ಮ ಕಟ್ಟೆ, ಪಾದೆ ಕಟ್ಟೆ, ಪುತ್ತೂರಾಯ ಕಟ್ಟೆ, ನರಿಮೊಗರು ಕಾಳಿಂಗಹಿತ್ಲು ಕಟ್ಟೆ, ದುಬ್ರಾಯ ಹೆಬ್ಟಾರ್‌ ಅವರ ಕಟ್ಟೆ, ಕೆರೆಮನೆ ಕಟ್ಟೆ, ಕೊಡಿನೀರು ಸಾರ್ವಜನಿಕ ಅಶ್ವತ್ಥ ಕಟ್ಟೆ, ಅತಿಶಯ ಕ್ಷೇತ್ರ ಕೈಪಂಗಳ ಕಟ್ಟೆ, ಪುತ್ತೂರು ಸಾವಂತ ಕಟ್ಟೆ, ಆನಾಜೆ ಹೆಬ್ಟಾರರ ಕಟ್ಟೆ, ವೀರಮಂಗಲ ಆನಾಜೆ ಸಾರ್ವಜನಿಕ ಕಟ್ಟೆ, ವೀರಮಂಗಲ ಗುತ್ತು, ವೀರಮಂಗಲ ದೇವಸ್ಥಾನ, ನದಿ ಕಿನಾರೆ ಕಟ್ಟೆಯಲ್ಲಿ ಶ್ರೀ ದೇವರಿಗೆ ಪೂಜೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ

ಅವಭೃಥಕ್ಕೆ ಸಾಗುವ ದಾರಿಯುದ್ದಕ್ಕೂ ಭಕ್ತರು ಅಲ್ಲಲ್ಲಿ ತಳಿರು ತೋರಣ, ವಿದ್ಯುತ್‌ ದೀಪಗಳ ಅಲಂಕಾರ ಮಾಡಿದ್ದರು. ಕಟ್ಟೆಗಳ ಶೃಂಗಾರ ಮಾಡಿದ್ದರು. ವಿವಿಧ ಕಟ್ಟೆಗಳಲ್ಲಿ ಶ್ರೀ ದೇವರಿಗೆ ಪೂಜೆ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತುಲಾಭಾರ ಸೇವೆ

ಎ. 18ರಂದು ಬೆಳಗ್ಗೆ ತುಲಾಭಾರ ಸೇವೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿ ತಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾದ ಹರಕೆ ಹೊತ್ತ ಭಕ್ತರು ತುಲಾಭಾರ ಸೇವೆ ಮಾಡಿಸಿದರು. ಅಕ್ಕಿ, ತೆಂಗಿನ ಕಾಯಿ, ಸಕ್ಕರೆ, ಬಾಳೆಗೊನೆ, ಸೀಯಾಳ, ತುಪ್ಪ, ಎಣ್ಣೆ ಮೊದಲಾದವುಗಳಲ್ಲಿ ತುಲಾಭಾರ ಸೇವೆ ಸಮರ್ಪಿಸಲಾಯಿತು.

ದೇವಾಲಯದಲ್ಲಿ ಇಂದು

ಎ.19 ರಂದು ಅವಭೃಥ ಸ್ನಾನದ ಬಳಿಕ ಶ್ರೀ ದೇವರು ಮರಳಿ ಬಂದು ದೇವಾಲಯದಲ್ಲಿ ಧ್ವಜಾವರೋಹಣ ನಡೆಯಲಿದೆ. ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ ನಡೆದು ಪಿಲಿಭೂತ, ರಕ್ತೇಶ್ವರಿ ನೇಮ ಜರಗಲಿದೆ.

ದೈವ-ದೇವರ ಭೇಟಿ: ಎ.18 ರಂದು ಅಪರಾಹ್ನ ದೇವಾಲಯದ ದೈವಗಳಾದ ಪಿಲಿಭೂತ, ಕಾಜುಕುಜುಂಬ ಅಂಙಣತ್ತಾಯ ದೈವಗಳ ಪ್ರತಿನಿಧಿ ದೈವವಾಗಿ ದೇವರೊಂದಿಗೆ ಹೋಗುವ ರಕ್ತೇಶ್ವರಿ ದೈವವು ದೇವರನ್ನು ರಥದ ಗದ್ದೆಯಲ್ಲಿ ಭೂತದ ಕಲ್ಲಿನ ಬಳಿಯಿಂದ ಬೀಳ್ಕೊಡುವ ಪದ್ಧತಿ ನಡೆಯಿತು. ಬಳಿಕ ಶ್ರೀ ದೇವರು ನಗರದ ರಾಜ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಾ ಭಕ್ತರಿಂದ ಪೂಜೆ ಸ್ವೀಕರಿಸುತ್ತಾ ವೀರಮಂಗಲ ಕುಮಾರಧಾರ ನದಿತಟಕ್ಕೆ ಅವಭೃಥಕ್ಕೆ ತೆರಳಿದರು.

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

1

Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.