ಕೇವಲ 8 ಅಡಿಗೆ ಅವಭೃತ ಕೆರೆ: ಪುತ್ತೂರ ಒಡೆಯನ ಸನ್ನಿಧಿಯಲ್ಲಿ ನಡೆಯಿತಾ ಪವಾಡ?
Team Udayavani, Apr 18, 2020, 4:47 PM IST
ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದ ಅಚ್ಚರಿಯೊಂದು ಬಹಳಷ್ಟು ಜನರನ್ನು ಚಕಿತಗೊಳಿಸಿದೆ. ಈ ಬಿರು ಬೇಸಿಗೆಯಲ್ಲೂ ಕೇವಲ ಎಂಟು ಅಡಿ ಆಳದಲ್ಲಿ ಕೆರೆಯೊಂದು ನಿರ್ಮಾಣವಾಗಿದೆ.
ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ಹಿನ್ನಲೆ ದೇವಳದ ಬಳಿ ತಾತ್ಕಾಲಿಕ ಕೆರೆ ನಿರ್ಮಾಣ ಮಾಡಲಾಗುತ್ತಿತ್ತು. ದೇವಳದ ಆವರಣದಲ್ಲಿರುವ ಅಯ್ಯಪ್ಪಸ್ವಾಮಿ ಗುಡಿ ಬಳಿ ಜೆಸಿಬಿ ಯಂತ್ರದ ಮೂಲಕ ಕೆರೆ ತೋಡಲಾಗುತ್ತಿತ್ತು.
ಗುಂಡಿ ತೋಡುತ್ತಿದ್ದಂತೆ ಕೇವಲ 8 ಅಡಿಗೆ ಬಹಳಷ್ಟು ನೀರಿನ ಒರತೆ ಕಂಡು ಸ್ಥಳೀಯರು ಬೆರಗಾಗಿದ್ದಾರೆ. ಈ ಬೇಸಿಗೆ ಕಾಲದಲ್ಲೂ ಮೇಲ್ಮೈಯಲ್ಲಿ ಅವಭೃತ ಸ್ನಾನಕ್ಕೆ ಬೇಕಾಗುವಷ್ಟು ನೀರು ಸಿಕ್ಕಿದೆ.
ಪ್ರತೀ ವರ್ಷವೂ ಜಾತ್ರಾ ಸಂದರ್ಭದ ತಾತ್ಕಾಲಿಕ ಕೆರೆ ನಿರ್ಮಿಸಲಾಗುತ್ತದೆ. ಈ ವರ್ಷ ಲಾಕ್ ಡೌನ್ ಕಾರಣ ಸಾಂಕೇತಿಕ ಜಾತ್ರೆ ನಡೆದಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.