Puttur ಸರಣಿ ಕಳ್ಳತನ: ಸ್ಥಳೀಯರ ಬಲೆಗೆ ಬಿದ್ದ ಆರೋಪಿ!
Team Udayavani, Dec 6, 2023, 12:21 AM IST
ಪುತ್ತೂರು: ಕೆದಿಲದಲ್ಲಿ ನ. 22ರಂದು ನಡೆದ ಸರಣಿ ಕಳ್ಳತನದ ಆರೋಪಿಯನ್ನು ಸ್ಥಳೀಯರು ಡಿ. 4ರಂದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೂಲತಃ ವಿಟ್ಲ ಸಮೀಪದ ಕಡಂಬು ನಿವಾಸಿ ಹಾಲಿ ಚಿಕ್ಕಮಗಳೂರು ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬ್ಬಕರ್ ಬಂಧಿತ. ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಡಿ. 19ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಕೆದಿಲದ ರಮ್ಲ ಕುಂಞಿ ಮನೆಯಲ್ಲಿ ಕಳ್ಳತನಗೈದಿದ್ದ ಆರೋಪಿ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವುಗೈದಿದ್ದ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಕ್ಕಿ ಬಿದ್ದದ್ದು ಹೀಗೆ
ಆರೋಪಿಯು ಕಳವು ಗೈದ ದ್ವಿಚಕ್ರವಾಹನ ಗುಡ್ಡ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ. ಅದನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸೋಮವಾರ ಅಬೂಬ್ಬಕರ್‌ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಖರೀದಿಸಿದನು. ಇದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಉಂಟಾಗಿ ಅವರು ಆತನ ಬೆನ್ನ ಹಿಂದೆ ಬಿದ್ದರು. ಆತ ಬೈಕ್ ಅಡಗಿಸಿಟ್ಟಿದ್ದ ಗುಡ್ಡಕ್ಕೆ ತೆರಳಿದಾಗ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಿಸಿದ್ದು, ಆತ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಆತನನ್ನು ಠಾಣೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಒಂದೇ ದಿನ 2 ಕಳ್ಳತನ
ರಮ್ಲ ಕುಂಞಿ ಬೆಂಗಳೂರು ಕಂಬಳಕ್ಕೆ ವ್ಯಾಪಾರಕ್ಕೆಂದು ನ. 22ರಂದು ರಾತ್ರಿ 8 ಗಂಟೆಗೆ ಮನೆಗೆ ಬೀಗ ಹಾಕಿ ತೆರಳಿದ್ದು, ಕೆದಿಲ ಮಿತ್ತಪಡ್ಪು ನಿವಾಸಿ ಹಮೀದ್ ನ. 23ರಂದು ಬೆಳಗ್ಗೆ ಹೋಗಿ ನೋಡುವ ಸಂದರ್ಭದಲ್ಲಿ ಬೀಗ ಮುರಿದಿದ್ದು ಪತ್ತೆಯಾಗಿತ್ತು. ಕಪಾಟಿನಲ್ಲಿದ್ದ ಸುಮಾರು 2 ಲಕ್ಷ ಕಳವಾಗಿತ್ತು. ಇದರ ಜತೆಗೆ ಕೋಡಿ ನಿವಾಸಿ ಉಮ್ಮರ್‌ಫಾರೂಕ್ ಅವರಿಗೆ ಸೇರಿದ ದ್ವಿಚಕ್ರವಾಹನ ಮನೆಯ ಅಂಗಳದಿಂದ ಕಳವಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.