ಸ್ವಾಭಿಮಾನದ ಬದುಕಿಗಾಗಿ ಹತ್ತಾರು ಯೋಜನೆ
Team Udayavani, Feb 17, 2019, 7:57 AM IST
ಪುತ್ತೂರು: ಸ್ವಾಭಿಮಾನದ ಬದುಕಿಗಾಗಿ ಹತ್ತಾರು ಯೋಜನೆಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಿ ಜಾರಿಗೆ ತಂದಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸದ ನಳಿನ್ ಕುಮಾರ್ ಕಟೀಲು ಮನವಿ ಮಾಡಿದರು.
ದ.ಕ. ಜಿಲ್ಲಾಡಳಿತ, ಪುತ್ತೂರು ನಗರಸಭೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಗಳ ಆಶ್ರಯದಲ್ಲಿ ಪುತ್ತೂರು ಪುರಭವನದಲ್ಲಿ ಫೆ. 16ರಂದು ನಡೆದ ಶಹರಿ ಸಮೃದ್ಧಿ ಉತ್ಸವದಲ್ಲಿ ಫಲಾನುಭವಿಗಳಿಗೆ ಚೆಕ್ ಹಾಗೂ ಪ್ರಮಾಣಪತ್ರ
ವಿತರಿಸಿ ಮಾತನಾಡಿದರು.
ತಂದೆಯವರ ಜತೆಗೆ ಚಹಾ ಮಾರಲು ಮೋದಿ ಹೋಗುತ್ತಿದ್ದರು. ಬೆಳಗ್ಗೆ ಬಡ್ಡಿಗೆ 100 ರೂ. ಪಡೆದು ವ್ಯಾಪಾರ ನಡೆಸ ಬೇಕಾಗಿತ್ತು. ಸಂಜೆ 160 ರೂ.ಗಳನ್ನು ಬಡ್ಡಿಯ ವ್ಯಕ್ತಿಗೆ ನೀಡಿ, ಉಳಿದ ಹಣ ಮನೆಗೊಯ್ಯುತ್ತಿದ್ದರು. ಇಂಥ ಕಷ್ಟವನ್ನು ಮುಂದೆ ಯಾರೂ ಅನುಭವಿಸಬಾರದು ಎಂದು ಪ್ರಧಾನಿಯವರು ಜನ್‌ಧನ್ ಯೋಜನೆಯನ್ನು ರೂಪಿಸಿದರು. ಇದಕ್ಕೆ ಅಭಿವೃದ್ಧಿಯ ಚಿಂತನೆಗಳನ್ನು ಪೋಣಿಸುತ್ತಾ ಬಂದರು. ನಾಲ್ಕು ವರ್ಷಗಳಲ್ಲಿ 32 ಕೋಟಿ ಮಂದಿ ಖಾತೆ ಪಡೆದುಕೊಂಡಿದ್ದಾರೆ ಎಂದರು.
ಜನಪರ ಯೋಜನೆಗಳು
ಉಜ್ವಲ ಪ್ಲಸ್ ಯೋಜನೆಯಡಿ ಎಲ್ಲರಿಗೂ ಗ್ಯಾಸ್ ವಿತರಿಸಲಾಗುತ್ತಿದೆ. ಬಂಟ್ವಾಳದಲ್ಲಿ ನಡೆದ ಸಮಾವೇಶದಲ್ಲಿ 19 ಸಾವಿರ ಮಂದಿಗೆ ಗ್ಯಾಸ್ ವಿತರಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ40 ಸಾವಿರ ಫಲಾನುಭವಿಗಳಿದ್ದಾರೆ. ಸ್ವಚ್ಚ ಭಾರತದಡಿ 4 ವರ್ಷಗಳಲ್ಲಿ 6 ಕೋಟಿ ದೇಶವಾಸಿಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಪುತ್ತೂರು ನಗರದಲ್ಲೇ 200 ಮನೆಗಳನ್ನು ನೀಡಲಾಗಿದೆ. ಮುಂದೆ ಎಲ್ಲರಿಗೂ ಮನೆ ನೀಡಲಾಗುವುದು. ದೀನ್ ದಯಾಳ್ ಯೋಜನೆಯಡಿ ಹಳ್ಳಿಹಳ್ಳಿಗೂ ವಿದ್ಯುತ್, ಆಯುಷ್ಮಾನ್ ಭವ ಯೋಜನೆಯಡಿ ಔಷಧಗಳು, ಇಂದ್ರಧನುಷ್, ಜನರಿಕ್ ಮೆಡಿಕಲ್, ಇ-ಮಾರ್ಕೆಟಿಂಗ್ ಯೋಜನೆಗಳನ್ನು ಜನರಿಗೆ ನೀಡಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು, ಕೇಂದ್ರ ಸರ್ಕಾರದ ಯೋಜನೆಯನ್ನು ಪಾರದರ್ಶಕವಾಗಿ ಕಟ್ಟ ಕಡೆಯ ಜನರಿಗೂ ತಲುಪಿಸುವುದು ಪ್ರಧಾನಿ ಮೋದಿ ಅವರ ಉದ್ದೇಶ.
ಈ ನಿಟ್ಟಿನಲ್ಲಿ ನಗರದಲ್ಲಿ ಶಹರೀ ಸಮೃದ್ಧಿ ಉತ್ಸವವನ್ನು ನಡೆಸಲಾಗುತ್ತಿದೆ. ಇದು ನಗರಕ್ಕೆ ಸೀಮಿತವಾಗಿರದೆ ಗ್ರಾಮೀಣ ಭಾಗಗಳಿಗೂ ಮುಟ್ಟಿಸಲಾಗುತ್ತಿದೆ ಎಂದರು.
ದೇಶದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸ್ವತ್ಛ ಮಿಷನ್, ಆಯುಷ್ಮಾನ್ ಭಾರತ್ ಹಾಗೂ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆರೋಗ್ಯವಂತ ಭಾರತದ ಕಲ್ಪನೆಯನ್ನು ಈ ಯೋಜನೆಗಳ ಮೂಲಕ ಸಾಕಾರಗೊಳಿಸಲಾಗುತ್ತಿದೆ. ಬೇಟಿ ಪಡಾವೋ, ಬೇಟಿ ಬಚಾವೋ ಮೂಲಕ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ರಕ್ಷಣೆಯನ್ನು ಮಾಡಲಾಗುತ್ತಿದೆ. ಹೊಗೆ ಮುಕ್ತ ಸಮಾಜ ನಿರ್ಮಾಣ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.