ಅವಿಭಜಿತ ಪುತ್ತೂರು ತಾ|ನಲ್ಲಿ 96 ಎಕ್ರೆ ಗುರುತು
Team Udayavani, Jun 4, 2021, 4:50 AM IST
ಪುತ್ತೂರು: ಭತ್ತದ ಉತ್ಪಾದನೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಡಿಲು ಬಿದ್ದಿರುವ ಗದ್ದೆಯಲ್ಲಿ ಭತ್ತದ ಬೇಸಾಯ ಮಾಡಲು ಕೃಷಿ ಇಲಾಖೆ ಯೋಜನೆ ರೂಪಿಸಿದ್ದು ಅವಿಭಜಿತ ಪುತ್ತೂರು ತಾಲೂ ಕಿನಲ್ಲಿ 96 ಎಕ್ರೆ ಹಡಿಲು ಗದ್ದೆಯನ್ನು ಗುರುತಿಸಲಾಗಿದೆ.
ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದ್ದು ಕೃಷಿ ಇಲಾಖೆ ವತಿಯಿಂದ ಆಯಾ ಭೂ- ಮಾಲಕರಿಗೆ, ಸಂಘ ಸಂಸ್ಥೆಗಳಿಗೆ ಭತ್ತದ ಕೃಷಿ ಮಾಡುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ.
ಏನಿದು ಯೋಜನೆ? :
ಕಳೆದ ಹಲವು ವರ್ಷಗಳಿಂದ ದ.ಕ.ಜಿಲ್ಲೆಯಲ್ಲಿ ಭತ್ತದ ಕೃಷಿ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು ಅನ್ಯ ಜಿಲ್ಲೆಯಿಂದಲೇ ಬರುವ ಅಕ್ಕಿಯನ್ನೇ ನಂಬಿ ಹಸಿವು ನೀಗಿಸಬೇಕಾದ ಸ್ಥಿತಿ ಇಲ್ಲಿನದು. ಅಡಿಕೆ, ರಬ್ಬರ್ ಕೃಷಿ ನೆಲೆ ಕಂಡುಕೊಳ್ಳುತ್ತಿದ್ದಂತೆ ಪ್ರಧಾನ ಬೆಳೆಯಾಗಿದ್ದ ಗದ್ದೆ ಬೇಸಾಯ ನೆಲೆ ಕಳೆದುಕೊಂಡಿತು. ಕೂಲಿ ಕಾರ್ಮಿಕರ ಸಮಸ್ಯೆ ಸೇರಿದಂತೆ ನಾನಾ ಕಾರಣಗಳು ಭತ್ತದ ಕೃಷಿಯ ನಿರಾಸಕ್ತಿಗೆ ಕಾರಣವಾಯಿತು. ಇದೀಗ ಭತ್ತದ ಕೃಷಿಗೆ ಮತ್ತೆ ಉತ್ತೇಜನ ನೀಡಿ ಸ್ವಾವಲಂಬಿ ಜಿಲ್ಲೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹಡಿಲು ಗದ್ದೆಯನ್ನು ಬಳಸುವ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶಿಸಿದ್ದು ಅದರಂತೆ ಕೃಷಿ ಇಲಾಖೆ ಪ್ರಯತ್ನ ನಡೆಸುತ್ತಿದೆ.
ಪುತ್ತೂರಿನಲ್ಲಿ 32, ಕಡಬದಲ್ಲಿ 64 ಎಕ್ರೆ :
ಪುತ್ತೂರು ತಾಲೂಕಿನಲ್ಲಿ 32 ಎಕ್ರೆ ಹಾಗೂ ಕಡಬ ತಾಲೂಕಿನಲ್ಲಿ 64.9 ಎಕ್ರೆ ಹಡಿಲು ಗದ್ದೆಯನ್ನು ಕೃಷಿ ಇಲಾಖೆ ಗುರುತಿಸಿದೆ. ಇದರಲ್ಲಿ ಶೇ.80 ರಷ್ಟು ಗದ್ದೆಯಲ್ಲಿ ಭತ್ತದ ಬೇಸಾಯ ಮಾಡುವ ಇರಾದೆ ಕೃಷಿ ಇಲಾಖೆಯದ್ದು. ಇಲ್ಲಿ ಕೃಷಿ ಇಲಾಖೆ ಬಿತ್ತನೆ ಬೀಜ ಒದಗಿಸಿದರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸೇವಾ ಕೇಂದ್ರದ ಮೂಲಕ ರಿಯಾಯಿತಿ ಬಾಡಿಗೆ ದರದಲ್ಲಿ ಉಳುಮೆ, ಕಟಾವು ಯಂತ್ರ ಸೇರಿದಂತೆ ಭತ್ತದ ಕೃಷಿಗೆ ಬೇಕಾದ ಯಂತ್ರೋಪಕರಣ ಒದಗಿಸಲು ನಿರ್ಧರಿಸಲಾಗಿದೆ. ಎನ್‌ಜಿಒ ಸಂಸ್ಥೆ ಅಥವಾ ಜಾಗದ ಮಾಲಕ ಭತ್ತದ ಬೇಸಾಯ ಮಾಡುವ ಜವಬ್ದಾರಿ ವಹಿಸಬೇಕು. ಇಲ್ಲಿ ಕೃಷಿ ಇಲಾಖೆ ಉತ್ತೇಜನ, ಕಾಲ ಕಾಲಕ್ಕೆ ಸೂಕ್ತ ಮಾಹಿತಿ ನೀಡುವ ಮೂಲಕ ಪ್ರೋತ್ಸಾಹ ನೀಡುವ ಕೆಲಸ ಮಾಡಲಿದೆ.
ಮೂರು ಕಡೆ ಬಿತ್ತನೆ ಬೀಜ ಲಭ್ಯ : ಉಭಯ ತಾಲೂಕಿನಲ್ಲಿ ಮೂರು ರೈತ ಸಂಪರ್ಕ ಕೇಂದ್ರಗಳಿವೆ. ಪುತ್ತೂರು ಕಸಬಾ ರೈತ ಸಂಪರ್ಕ ಕೇಂದ್ರ, ಕಡಬ ರೈತ ಸಂಪರ್ಕ ಕೇಂದ್ರ ಹಾಗೂ ಉಪ್ಪಿನಂಗಡಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯವಿದೆ. ರೈತರು ಆರ್‌ಟಿಸಿ, ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯೊಂದಿಗೆ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜವನ್ನು ಪಡೆಯಬಹುದು. ಪರಿ ಶಿಷ್ಟ ಜಾತಿ ಪಂಗ ಡ ದ ವರು ಜಾತಿ ಪ್ರಮಾಣ ಪತ್ರ ಒದ ಗಿ ಸ ಬೇಕು. ಸಹಾ ಯ ಧನ ಇರು ವುದು. ಮೂರು ಕೇಂದ್ರಗಳಲ್ಲಿ ತಲಾ 5 ಕಿಂಟ್ವಾಲ್‌ನಂತೆ ಒಟ್ಟು 15 ಕ್ವಿಂಟಾಲ್ ಎಂಒ4 (ಭದ್ರಾ) ತಳಿ ಭತ್ತದ ಬೀಜ ಸಂಗ್ರಹವಿದೆ.
350 ಹೆಕ್ಟೇರ್ :
ಪ್ರಸ್ತುತ 370 ಹೆಕ್ಟೇರ್‌ನಲ್ಲಿ ಭತ್ತದ ಕೃಷಿ ಮಾಡಲಾಗುತ್ತಿದ್ದು, ಹಡಿಲು ಬಿದ್ದ ಗದ್ದೆಯಲ್ಲಿ ಕೃಷಿಗೆ ಉತ್ತೇಜನ ನೀಡುವ ಯೋಜನೆ ಇಲ್ಲಿನದ್ದಾಗಿದೆ.
ಪುತ್ತೂರು, ಕಡಬದಲ್ಲಿ ಹಡಿಲು ಬಿದ್ದ ಗದ್ದೆಯನ್ನು ಗುರುತಿಸಲಾಗಿದೆ. ಭೂ-ತಕರಾರು ಇರುವ ಗದ್ದೆ ಹೊರತುಪಡಿಸಿ ಉಳಿದೆಡೆ ಗದ್ದೆ ಮಾಲಕರಿಗೆ ಅಥವಾ ಆಸಕ್ತ ಎನ್‌ಜಿಒಗಳಿಗೆ ಭತ್ತದ ಕೃಷಿ ಮಾಡುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ. –ನಾರಾಯಣ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕರು, ಪುತ್ತೂರು
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.