ಅನುದಾನ ಸದ್ಬಳಕೆ: ಕ್ರಿಯಾಯೋಜನೆಗೆ ಗ್ರಾ.ಪಂ.ಗಳಿಗೆ ಸೂಚನೆ
ಪುತ್ತೂರು ತಾ.ಪಂ. ವಿಶೇಷ ಸಾಮಾನ್ಯ ಸಭೆ
Team Udayavani, May 27, 2020, 9:17 PM IST
ಪುತ್ತೂರು ತಾಪಂ ಸಭಾಂಗಣದಲ್ಲಿ ಸಭೆ ನಡೆಯಿತು.
ಪುತ್ತೂರು: ಕೇಂದ್ರ ಸರ್ಕಾರ ನೀಡುವ 15ನೇ ಹಣಕಾಸು ಯೋಜನೆಯಲ್ಲಿ ಜಿಪಂ ತಾಪಂ ಹಾಗೂ ಗ್ರಾಪಂಗಳಿಗೆ ಅನುದಾನ ಮಂಜೂರುಗೊಂಡಿದ್ದು, ಪುತ್ತೂರು ತಾಲೂಕಿಗೆ 1,13,60,487 ರೂ. ಹಾಗೂ ಕಡಬ ತಾಲೂಕಿಗೆ 1,05,38,373 ರೂ. ಅನುದಾನ ಮಂಜೂರು ಗೊಂಡಿದೆ. ಈ 15ನೇ ಹಣಕಾಸು ಯೋಜನೆಯಡಿಯಲ್ಲಿ ಮಂಜೂರುಗೊಂಡ ಅನುದಾನದಲ್ಲಿ ಶೇ 50 ಹಣವನ್ನು ಕುಡಿಯುವ ನೀರು ಹಾಗೂ ಸ್ವತ್ಛತೆಗೆ ಕಡ್ಡಾಯವಾಗಿ ಬಳಕೆ ಮಾಡಬೇಕು. ಶೇ ಪರಿಶಿಷ್ಟಜಾತಿ ಪಂಗಡ ನಿಧಿಗೆ ಮೀಸಲಾಗಿಡಬೇಕು. ಉಳಿದ ಶೇ.25 ರಷ್ಟು ಹಣ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಆ ಪ್ರಕಾರವಾಗಿ ತಾಪಂ ಹಾಗೂ ಗ್ರಾಪಂಗಳು ಕ್ರೀಯಾಯೋಜನೆ ತಯಾರಿಸಬೇಕು ಎಂದು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಶಿಷ್ಟ ಜಾತಿ-ಪಂಗಡದ ನಿಧಿಯಲ್ಲಿ ವೈಯುಕ್ತಿಕ ಸೌಲಭ್ಯ ನೀಡುವ ಬದಲು ಪೈಪ್ ಲೈನ್ ಗಳಂತಹ ಸಾಮೂಹಿಕ ಸೌಲಭ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಗುಣಮಟ್ಟದ ಕಾಮಗಾರಿಗೆ ಗಮನನೀಡಬೇಕು ಎಂದು ತಾಪಂ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ತಿಳಿಸಿದರು.
ಬೆಟ್ಟಂಪಾಡಿಯಲ್ಲಿ “ಇಲಿಜ್ವರ’…!
ಈಗಾಗಲೇ ಡೆಂಗ್ಯು ಹಾಗೂ ಮಲೇರಿಯಾ ಜ್ವರದಿಂದ ಕಂಗಾಲಾಗಿರುವ ಬೆಟ್ಟಂಪಾಡಿ ಭಾಗದಲ್ಲಿ ಇಲಿಜ್ವರ ಭಾದೆ ಕಂಡು ಬಂದಿದೆ ಎಂಬ ಮಾಹಿತಿ ಬಗ್ಗೆ ಅಧ್ಯಕ್ಷರು ತಾಲೂಕು ಆರೋಗ್ಯಾಧಿಕಾರಿ ಅವರನ್ನು ಪ್ರಶ್ನಿಸಿದರು. ಬೆಟ್ಟಂಪಾಡಿಯಲ್ಲಿ 3 ಡೆಂಗ್ಯೂ ಪ್ರಕರಣ ಖಚಿತಗೊಂಡಿದೆ. ಶಂಕಿತ ಡೆಂಗ್ಯೂ ಪೀಡಿತರ ಸಂಖ್ಯೆ 80ಕ್ಕೂ ಹೆಚ್ಚಾಗಿದೆ. ಈ ಬಗ್ಗೆ ಜಾಗೃತಿ ಕೆಲಸ ನಡೆಸಲಾಗಿದೆ. ಆದರೆ ಇಲಿಜ್ವರ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಡಾ|ಅಶೋಕ್ ಕುಮಾರ್ ರೈ ತಿಳಿಸಿದರು.
ವಿದ್ಯುತ್ ಬಿಲ್ ಸಮರ್ಪಕ
ಹೆಚ್ಚು ಬಿಲ್ ಹೆಚ್ಚು ಬಂದಿದೆ ಎಂದು ಜನತೆ ಆರೋಪಿಸುತ್ತಿದ್ದಾರೆ. ಆದರೆ ಬಳಕೆ ಹೆಚ್ಚಿದ್ದರಿಂದ ಬಿಲ್‌ಗಳು ಸಮರ್ಪಕವಾಗಿವೆ ಎಂದು ಮೆಸ್ಕಾಂ ಇಲಾಖೆಯ ಎಂಜಿನಿಯರ್ ರಾಮಚಂದ್ರ ತಿಳಿಸಿದರು. ರಾಜ್ಯ ಸರ್ಕಾರ ಆಟೋ ರಿಕ್ಷಾ ಚಾಲಕರ ಬದುಕಿಗೆಗಾಗಿ ನೀಡಿದ ಹಣ ಪಡೆಯಲಾಗದೆ ಸಮಸ್ಯೆ ಉಂಟಾಗಿದೆ. ಸಾಫ್ಟ್ವೇರ್‌ನಲ್ಲಿ ಅಪ್‌ಡೇಟ್ ಆಗದ ಕಾರಣ ಈ ಸಮಸ್ಯೆ ಕಾಡುತ್ತಿದೆ. ಮಾಲಕರ ಕೈ ಕೆಳಗೆ ದುಡಿವ ಚಾಲಕರಿಗೆ ಈ ಹಣ ಸಿಗುತ್ತಿಲ್ಲ. ಇದಕ್ಕೆ ಪರಿಹಾರ ಬೇಕಾಗಿದೆ ಎಂದು ಸದಸ್ಯ ರಾಮ ಪಾಂಬಾರು ಹೇಳಿದರು. ಕೇಂದ್ರ ಸರಕಾರ ಈ ಬಗ್ಗೆ ಹೊಸ ನಿಯಮ ತರಲಿದೆ. ಅನಂತರ ಸರಿಯಾಗಲಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿ ತಿಳಿಸಿದರು. ಉದ್ಯೋಗ ಖಾತರಿ ಯೋಜನೆಯಲ್ಲಿ ಚರಂಡಿ ದುರಸ್ಥಿ ನಡೆಸಲು ಅವಕಾಶ ಇದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅಧ್ಯಕ್ಷರು ಗ್ರಾಪಂ ಗಳಿಗೆ ಸೂಚಿಸಿದರು. ಬಡಗನ್ನೂರಿಗೆ ಅಭಿವೃದ್ಧಿ ಅಧಿಕಾರಿ ಇಲ್ಲ. ತಕ್ಷಣ ಅಭಿವೃದ್ಧಿ ಅಧಿಕಾರಿ ನೇಮಕವಾಗಬೇಕು ಎಂದು ಸದಸ್ಯೆ ಫೌಝಿಯಾ ಆಗ್ರಹಿಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಇದ್ದರು.
ಬಿಸಿಎಂ ಹಾಸ್ಟೆಲ್‌ನಲ್ಲಿ 320 ಕ್ವಿಂಟಾಲ್ ಅಕ್ಕಿ
ತಾಲೂಕಿನಲ್ಲಿರುವ 9 ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ 320 ಕ್ವಿಂಟಾಲ್ ಅಕ್ಕಿ ಇದೆ. ಆದರೆ ಇದನ್ನು ವಾಪಾಸು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಕ್ಕಿ ಹಾಳಾಗದಂತೆ ಸಂರಕ್ಷಣೆ ಮಾಡ ಲಾಗುತ್ತಿದೆ ಎಂದು ಅಧಿಕಾರಿ ಜೋಸೆಫ್ ತಿಳಿಸಿದರು. ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ರೈತ ಸದಸ್ಯರಿಗೆ ಸಾಲ ಮನ್ನಾದ ಯೋಜನೆಯ ಹಣ ಇನ್ನೂ ಬಂದಿಲ್ಲ. ಇದರಿಂದ ಹೊಸ ಸಾಲ ಪಡೆಯಲು ಕಷ್ಟವಾಗುತ್ತಿದೆ ಎಂದು ಸದಸ್ಯ ಪರಮೇಶ್ವರ ಹೇಳಿದರು. ಈ ಬಗ್ಗೆ ಸಹಕಾರಿ ಇಲಾಖೆ ಅಧಿಕಾರಿ ಮಾತನಾಡಿ, ಈಗಾಗಲೇ 13870 ಮಂದಿಯ ಖಾತೆಗೆ ಹಣ ಬಂದಿದೆ. 1493 ಮಂದಿ ರೈತ ಸಮಸ್ಯೆ ಪರಿಹಾರವಾಗಿದೆ. ಅವರಿಗೆ ಹಣ ಬರಲಿದೆ. ಇನ್ನುಳಿದ 2958 ಮಂದಿಗೆ ಪಡಿತರ ಕಾರ್ಡು, ಆಧಾರ್ ಕಾರ್ಡು ಸಹಿತ ದಾಖಲೆ ಪತ್ರಗಳು ಸಮರ್ಪಕವಾಗಿಲ್ಲದೆ ಹಣ ಬರಲು ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲಾ ಗುತ್ತಿದೆ. ಸಾಲಮನ್ನಾದ ಹಣ ಬಂದೇ ಬರುತ್ತದೆ. ಈ ಬಗ್ಗೆ ಸಂಶಯ ಬೇಡ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.