ಪುತ್ತೂರು: ನಿಯಂತ್ರಣದಲ್ಲಿ ಸಂಚಾರ; ರೈಲ್ವೇ ಗೇಟ್ ಬಂದ್‌ನಿಂದ ರೈತರಿಗೆ ಸಮಸ್ಯೆ
Team Udayavani, Apr 10, 2020, 10:22 AM IST
ಪುತ್ತೂರು: ನಗರವನ್ನು ಸಂಪ ರ್ಕಿಸುವ 8 ಒಳ ರಸ್ತೆಗಳನ್ನು ಬಂದ್ ಮಾಡುವ ಮೂಲಕ ಅನಗತ್ಯ ವಾಹನ ಸಂಚಾರ ತಡೆಯುವಲ್ಲಿ ಪೊಲೀ ಸರು ಯಶಸ್ವಿಯಾಗಿದ್ದಾರೆ. ಆದರೆ ಎಪಿಎಂಸಿ ರಸ್ತೆಯನ್ನು ರೈಲ್ವೇ ಗೇಟ್ ಬಳಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿರುವುದು ರೈತರಿಗೆ ಸಮಸ್ಯೆಯಾಗಿದೆ.
ಎಪಿಎಂಸಿಗೆ ಬರುವ ಜನತೆ ಪುತ್ತೂರು- ಉಪ್ಪಿನಂಗಡಿ ರಸ್ತೆಯ ಸಾಲ್ಮರದ ಮೂಲಕ ಬರಬೇಕಾಗಿದೆ. ಎಪಿಎಂಸಿಯ ರೈತಭವನದಲ್ಲಿ ಕೆಲವು ದಿನಗಳಿಂದ ಪಡಿತರ ವಿತರಣೆ ಯಾಗುತ್ತಿದ್ದು, ಗ್ರಾಮ ಮಟ್ಟಕ್ಕೆ ಆಹಾರ ಸಾಮಗ್ರಿಗಳನ್ನು ಒಯ್ಯಲು ಇದರಿಂದ ಸಮಸ್ಯೆ ಉಂಟಾಗುತ್ತಿದೆ.
ಶಾಸಕ ಸಂಜೀವ ಮಠಂದೂರು ಅವರು ಕೂಡ ಈ ರಸ್ತೆಯನ್ನು ಸಂಪೂರ್ಣ ಬಂದ್ ಮಾಡುವ ಬದಲು ಅಗತ್ಯ ಸಂದರ್ಭ ಬ್ಯಾರಿಕೇಡ್ ತೆಗೆಯಬೇಕು. ಈ ಕುರಿತು ಡಿವೈಎಸ್ಪಿ ದಿನಕರ್ ಶೆಟ್ಟಿ ಅವರೊಂದಿಗೆ ಚರ್ಚಿಸಿ ಪರ್ಯಾ ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಎರಡು ವಾರಗಳಿಂದ ಎಪಿ ಎಂಸಿಯಲ್ಲಿ ವಾರದ ಸಂತೆಯೂ ನಡೆಯುತ್ತಿದೆ. ಇದೀಗ ಸಂಕಷ್ಟಕ್ಕೀ ಡಾಗಿರುವ ರೈತ ವರ್ಗಕ್ಕೆ ಅಡಿಕೆಯನ್ನು ಎಪಿಎಂಸಿ ದಾಸ್ತಾನು ಕೊಠಡಿಯಲ್ಲಿ ಇಟ್ಟು ಶೇ.60ರಷ್ಟು ಹಣವನ್ನು ಮುಂಗಡವಾಗಿ
ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ರೈಲ್ವೇ ಗೇಟ್ ಬಂದ್ ಮಾಡಿದ ಕಾರಣ ಕೃಷಿಕರು ಸುತ್ತು ರಸ್ತೆಯ ಮೂಲಕ ಬರಬೇಕಾಗಿದೆ.
ಮಾಣಿ ಮೈಸೂರು ಹೆದ್ದಾರಿ ಯಿಂದಲೂ ನಗರ ಪ್ರವೇಶಿಸುವ ಒಳ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಗುರುವಾರ ನಗರದಲ್ಲಿ ಖಾಸಗಿ ವಾಹನಗಳ ಓಡಾಟ ಬಹುತೇಕ ಕಡಿಮೆಯಾಗಿದೆ.
ಬೆಲೆ ಏರಿಕೆ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಸಾಮಗ್ರಿಗಳ ಬೆಲೆ ಅಧಿಕ ಗೊಂಡಿದೆ. ಜನತೆಗೆ ಅಗತ್ಯವಾದ ಮೆಣಸು, ಕೊತ್ತಂಬರಿ, ಬೆಳ್ಳುಳ್ಳಿ, ಈರುಳ್ಳಿ ಮತ್ತಿತರ ಬೆಲೆಗಳು ಗಗನಕ್ಕೇ ರಲಾರಂಭಿಸಿದೆ. ಇದರ ಜತೆಗೆ ಗುಟ್ಕಾ, ಸಿಗರೇಟು ಬೆಲೆಯೂ ಅಧಿಕ ಗೊಂಡಿದೆ. ಕೆಲವರು ಗುಟ್ಕಾವನ್ನು ಕಾಳಸಂತೆಯಲ್ಲಿ 2 ಪಟ್ಟು ಹೆಚ್ಚು ಬೆಲೆಗೆ ಮಾರುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.