ಪುತ್ತೂರು ಐತಿಹಾಸಿಕ ವಾರದ ಸಂತೆಗೆ ಬೀದಿಯೇ ಗತಿ

ಸಂತೆಕಟ್ಟೆ ಕನಸು ಭಗ್ನ; ಒಂದು ಕೋಟಿ ರೂ. ಎತ್ತಂಗಡಿ

Team Udayavani, Sep 10, 2020, 4:16 AM IST

ಪುತ್ತೂರು ಐತಿಹಾಸಿಕ ವಾರದ ಸಂತೆಗೆ ಬೀದಿಯೇ ಗತಿ

ಕಿಲ್ಲೆ ಮೈದಾನ

ಪುತ್ತೂರು: ಸಂತೆಕಟ್ಟೆ ನಿರ್ಮಾಣಕ್ಕೆಂದು ಸ್ಥಳ ಕಾದಿರಿಸಿ, ಅನುದಾನ ಮೀಸಲಿಟ್ಟು ಮೂರು ವರ್ಷಗಳಾಯಿತು. ಆ ಕನಸು ಭಗ್ನ ಆಗಿದ್ದು, ಬೀದಿಯಲ್ಲೇ ಸಂತೆ ಉಳಿದುಕೊಳ್ಳಲಿದೆ. ಒಂದು ಕೋಟಿ ರೂ. ಸದ್ದಿಲ್ಲದೆ ಎತ್ತಂಗಡಿ ಯಾಗಿದೆ. ಮೀಸಲಿಟ್ಟ ಜಮೀನು ಕೂಡ ರೂಪಾಂತರಗೊಂಡಿದೆ. ಈ ಮೂಲಕ, ಶತಮಾನದ ಇತಿಹಾಸವಿರುವ ವಾರದ ಸಂತೆಗೆ ಶಾಶ್ವತ ಸಂತೆ ಮಾರುಕಟ್ಟೆ ಮಾಡುವ ಕನಸು ಕಮರಿದೆ.

ಪುತ್ತೂರು ಸಂತೆ
ಪುತ್ತೂರಿನ ಸೋಮವಾರದ ಸಂತೆ ಹತ್ತೂರಿಗೆ ಪ್ರಸಿದ್ಧಿ. ಆರ್ಥಿಕ ಚಟುವಟಿಕೆ ಮೇಲೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ಸಂತೆ ಕೊರೊನಾ ಲಾಕ್‌ಡೌನ್‌ ಬಳಿಕ ಆರಂಭಗೊಂಡಿಲ್ಲ. ಸುಮಾರು 100 ವರ್ಷಗಳಿಂದ ನಡೆಯುತ್ತಿದ್ದ ಸಂತೆಯ ಸ್ಥಳದಲ್ಲಿ 2002ರ ಬಳಿಕ ಅಂದಿನ ಪುರಸಭೆಗೆ ನೂತನ ಆಡಳಿತ ಕಟ್ಟಡ ಕಟ್ಟಲು ಆರಂಭಿಸಿದ ಕಾರಣ ಸಂತೆಯನ್ನು ತಾತ್ಕಾಲಿಕವಾಗಿ ಕಿಲ್ಲೆ ಮೈದಾನಕ್ಕೆ ಸ್ಥಳಾಂತರಿಸಲಾಯಿತು. ಕಟ್ಟಡ ನಿರ್ಮಾಣಗೊಂಡ ಬಳಿಕ ಪುರಸಭೆ ಆಡಳಿತ ಕಚೇರಿ ಅಲ್ಲೇ ಉಳಿದು, ಸಂತೆ ಮೈದಾನದಲ್ಲೇ ಉಳಿಯಿತು. 2016ರ ಆ. 11ರಂದು ಅಂದಿನ ಎ.ಸಿ. ಅವರ ಆದೇಶದಂತೆ ಸಂತೆಯನ್ನು ಎಪಿಎಂಸಿ ಯಾರ್ಡ್‌ ಗೆ ಸ್ಥಳಾಂತರಿಸಲಾಗಿತ್ತು. ಇದರ ವಿರುದ್ಧ ನಡೆದ ನಿರಂತರ ಹೋರಾಟದ ಫಲವಾಗಿ ಐದೇ ತಿಂಗಳಲ್ಲಿ ಮತ್ತೆ ಸಂತೆ ಕಿಲ್ಲೆ ಮೈದಾನಕ್ಕೆ ಮರಳಿತ್ತು. ಈ ನಡುವೆ ನಗರಸಭೆಯ ವಾರದ ಸಂತೆಯ 150ರಿಂದ 200 ವರ್ತಕರು ಮತ್ತು ಸಾವಿರಾರು ಗ್ರಾಹಕರಿಗಾಗಿ ಶಾಶ್ವತ ಸಂತೆ ಮಾರುಕಟ್ಟೆ ನಿರ್ಮಿಸುವ ಯೋಜನೆಯೂ ನನೆಗುದಿಗೆ ಬಿದ್ದಿದೆ. ಸಂತೆ ನಿರ್ಮಾಣಕ್ಕಾಗಿ ಯೋಜಿಸಿದ್ದ ಜಮೀನು ಹಾಗೂ ಅನುದಾನ ಅನ್ಯ ಬಳಕೆಗೆ ರೂಪಾಂತರಗೊಂಡಿದೆ.

ಹೇಗಿತ್ತು ಯೋಜನೆ ?
ಮಿನಿ ವಿಧಾನಸೌಧದ ಬಳಿಯ ಹಳೆ ಪುರಸಭಾ ಕಚೇರಿ ಸ್ಥಳದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲು ಹಿಂದಿನ ಜಯಂತಿ ಬಲಾ°ಡ್‌ ಅಧ್ಯಕ್ಷತೆಯ ನಗರಸಭಾ ಆಡಳಿತ ತೀರ್ಮಾನಿಸಿತ್ತು. ನಗರೋತ್ಥಾನ ಯೋಜನೆಯಲ್ಲಿ ಪುತ್ತೂರಿಗೆ ಮಂಜೂರಾಗಿದ್ದ 25 ಕೋಟಿ ರೂ.ಗಳಲ್ಲಿ 1 ಕೋಟಿ ರೂ.ಗಳನ್ನು ಮಾರುಕಟ್ಟೆ ನಿರ್ಮಾಣಕ್ಕೆಂದೇ ಮೀಸಲಿರಿಸಲಾಗಿತ್ತು. ನಗರೋತ್ಥಾನದ ಹಣದಲ್ಲಿ ಕಿಲ್ಲೆ ಮೈದಾನ ನವೀಕರಣವೂ ಕಳೆದ ಜನವರಿ ವೇಳೆಗೆ ಪೂರ್ಣಗೊಂಡಿದ್ದು, ಇಲ್ಲಿ ಸಂತೆ ನಡೆಸುವುದು ಕಷ್ಟ ಎಂಬ ಭಾವನೆ ಇರುವಾಗಲೇ ಲಾಕ್‌ಡೌನ್‌ ಸಂತೆಗೆ ಬರೆ ಎಳೆದಿತ್ತು. ಈ ನಡುವೆ, ಸಂತೆಗೆಂದು ಯೋಜಿಸಿದ್ದ ಸ್ಥಳದಲ್ಲಿ ಇದೀಗ ನಗರಸಭೆಗೆ ಹೊಸ ಆಡಳಿತ ಕಟ್ಟಡ ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಸಂತೆಗೆಂದು ತೆಗೆದಿರಿಸಿದ್ದ 1 ಕೋಟಿ ರೂ. ಅನ್ನೂ ಈ ಕಟ್ಟಡಕ್ಕೆಂದು ಬಳಸಲಾಗುತ್ತಿದೆ. ಸಂತೆಗೆ ಅನುಮತಿ ನೀಡಿದರೂ ಯಥಾಪ್ರಕಾರ ಮೈದಾನದಲ್ಲೇ ನಡೆಸಬೇಕಾದ ಅನಿವಾರ್ಯ. ಲಕ್ಷಾಂತರ ರೂ. ವೆಚ್ಚ ಮಾಡಿ ನವೀಕರಿಸಿದ ಮೈದಾನದಲ್ಲಿ ಇನ್ನೆಷ್ಟು ಸಮಯ ಸಂತೆ ನಡೆಸಲು ಸಾಧ್ಯ ಎಂಬ ಜನರ ಪ್ರಶ್ನೆಗೆ ಉತ್ತರವಿಲ್ಲ.

ಸಂತೆ ಮುಗಿಸುವ ಪ್ರಯತ್ನ
ವಾರದ ಸಂತೆಗೆ ಶತಮಾನದ ಇತಿಹಾಸವಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಶಾಶ್ವತ ಸಂತೆಕಟ್ಟೆ ನಿರ್ಮಿಸಲು ಅಂದಿನ ಆಡಳಿತ 1 ಕೋಟಿ ರೂ. ಯೋಜನೆ ರೂಪಿಸಿತ್ತು. ಸ್ಥಳ ಆಯ್ಕೆಯನ್ನೂ ಮಾಡಿದ್ದೆವು. ಈಗ ಎರಡನ್ನೂ ಬದಲಾಯಿಸಲಾಗಿದ್ದು, ತೀರ್ಮಾನದ ಹಿಂದೆ ಐತಿಹಾಸಿಕ ಸೋಮವಾರದ ಸಂತೆಯನ್ನೇ ಶಾಶ್ವತವಾಗಿ ಇಲ್ಲವಾಗಿಸುವ ಷಡ್ಯಂತ್ರವಿದೆ. ಹಿಂದೆ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸಿದಾಗ ಹೋರಾಟ ಮಾಡಿದವರು ಈಗ ಮೌನವಾಗಿದ್ದಾರೆ.
-ಎಚ್‌. ಮಹಮ್ಮದ್‌ ಆಲಿ ಮಾಜಿ ಸದಸ್ಯರು, ಪುತ್ತೂರು ನಗರಸಭೆ

ಯೋಜನೆ ಇಲ್ಲ
ಸಂತೆಕಟ್ಟೆ ಹೊಸದಾಗಿ ನಿರ್ಮಿಸುವ ಬಗ್ಗೆ ಯಾವುದೇ ಯೋಜನೆ ಇಲ್ಲ. ಆ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ.
-ರೂಪಾ ಶೆಟ್ಟಿ , ಪೌರಾಯುಕ್ತೆ, ನಗರಸಭೆ ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

1

Bantwal: ಕೃಷಿಕರ ತೋಟಗಳಿಗೆ ನುಗ್ಗಿದ ಜಕ್ರಿಬೆಟ್ಟು ಅಣೆಕಟ್ಟು ನೀರು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.