ಕೋವಿಡ್-19 ಬಾಧಿತರ ಸಂಪರ್ಕದಲ್ಲಿದ್ದವರಿಗೆ ಕ್ವಾರಂಟೈನ್‌


Team Udayavani, Jun 7, 2020, 5:26 AM IST

ಕೋವಿಡ್-19 ಬಾಧಿತರ ಸಂಪರ್ಕದಲ್ಲಿದ್ದವರಿಗೆ ಕ್ವಾರಂಟೈನ್‌

ಕಡಬ: ಇಲ್ಲಿನ ಕೋವಿಡ್-19 ಬಾಧಿತ ವ್ಯಕ್ತಿಯ ಮನೆ ಸಹಿತ ಆರಿಗ, ದೋಳ ಸುತ್ತಮುತ್ತಲಿನ ಎಂಟು ಮನೆಗಳನ್ನು ಕಂದಾಯ ಅಧಿಕಾರಿಗಳು, ಆರೋಗ್ಯ ಇಲಾಖಾಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಪೊಲೀಸರ ನೇತೃತ್ವದಲ್ಲಿ ಶನಿವಾರ ಸೀಲ್‌ಡೌನ್‌ ಮಾಡಲಾಯಿತು.

ಕೋವಿಡ್-19 ಬಾಧಿತ ವ್ಯಕ್ತಿ ಎಲ್ಲೆಲ್ಲಿ ಸುತ್ತಾಡಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದು, ಈಗಾಗಲೇ ಹೊಸಮಠ ಪೇಟೆಯ ದಿನಸಿ ಅಂಗಡಿ ಯೊಂದಕ್ಕೆ ಅವರು ಭೇಟಿ ನೀಡಿದ್ದಾರೆಂಬ ಮಾಹಿತಿ ಮೇರೆಗೆ ಅಲ್ಲಿಗೂ ಅಧಿಕಾರಿಗಳು ತೆರಳಿ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಸೂಚಿಸಿದ್ದಾರೆ. ಬಲ್ಯ ಗ್ರಾಮದಲ್ಲಿನ ತನ್ನ ಮಾವನ ಮನೆಗೆ ಅವರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಆ ಮನೆಯವರನ್ನು ಹಾಗೂ ಸುತ್ತಲಿನ ಮನೆಯವರನ್ನು ಕೂಡ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ. ಪುತ್ತೂರು ಗ್ರಾಮಾಂತರ ಸರ್ಕಲ್‌ ಇನ್‌ಸ್ಪೆಕ್ಟರ್‌ ನಾಗೇಶ್‌ ಕದ್ರಿ, ಕಡಬ ಎಸ್‌.ಐ. ರುಕ್ಮ ನಾಯ್ಕ, ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್‌, ಕಂದಾಯ ನಿರೀಕ್ಷಕ ಅವಿನ್‌ ರಂಗತ್‌ಮಲೆ, ಪಿಡಿಒ ಚೆನ್ನಪ್ಪ ಗೌಡ, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯ ಕರ್ತೆಯರು ಉಪಸ್ಥಿತರಿದ್ದರು.

ಕೋವಿಡ್-19 ಬಾಧಿತ ವ್ಯಕ್ತಿಯ ಜತೆ ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದ ಆತನ ಸಂಬಂಧಿ ಕಾರು ಚಾಲಕ ಶನಿವಾರ ಬೆಳಗ್ಗಿನಿಂದ ಮಧ್ಯಾಹ್ನದ ತನಕ ಅಧಿಕಾರಿಗಳ ಸಂಪರ್ಕಕ್ಕೆ ಸಿಗದೆ ಇದ್ದುದು ಕೆಲವು ಸಮಯ ಗೊಂದಲಕ್ಕೆ ಕಾರಣವಾಯಿತು. ಬಳಿಕ ಆತನೇ ಅಧಿಕಾರಿಗಳನ್ನು ಸಂಪರ್ಕಿಸಿ ತನ್ನ ಮನೆಯ ಬಳಿಯೇ ಪ್ರತ್ಯೇಕ ಕಟ್ಟಡದಲ್ಲಿ ಕ್ವಾರಂಟೈನ್‌ಗೆ ಒಳಗಾಗುವ ಮೂಲಕ ಸಮಸ್ಯೆ ಬಗೆಹರಿಯಿತು.

ಸಿ.ಎ. ಬ್ಯಾಂಕ್‌ ಬಂದ್‌
ಕೋವಿಡ್-19 ಬಾಧಿತ ವ್ಯಕ್ತಿಯು ಕೆಲಸದ ನಿಮಿತ್ತ ಜೂ. 2ರಂದು ಕಡಬ ಸಿ.ಎ. ಬ್ಯಾಂಕ್‌ಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ಬ್ಯಾಂಕ್‌ನ ಚಟುವ ಟಿಕೆಗಳನ್ನು ಸ್ಥಗಿತಗೊಳಿಸಿ ಸ್ವಯಂ ಸೀಲ್‌ಡೌನ್‌ ಘೋಷಿಸಿಕೊಂಡಿದೆ. ಬ್ಯಾಂಕ್‌ನ ಸಿಬಂದಿ, ಕೆಲವು ನಿರ್ದೇಶಕರು ಹಾಗೂ ನಾನು ಕೂಡ ಸ್ವಯಂ ಆಗಿ ಕ್ವಾರಂಟೈನ್‌ಗೆ ಒಳಗಾಗಿದ್ದೇವೆ. ನಮ್ಮ 3 ಶಾಖೆಗಳನ್ನು ಕೂಡ ಸದ್ಯದ ಮಟ್ಟಿಗೆ ಬಂದ್‌ ಮಾಡಿದ್ದೇವೆ. ಬ್ಯಾಂಕ್‌ನ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿ ಬಾಧಿತ ವ್ಯಕ್ತಿಯು ಬ್ಯಾಂಕ್‌ಗೆ ಭೇಟಿ ನೀಡಿದ್ದ ದಿನ ಬ್ಯಾಂಕ್‌ನಲ್ಲಿದ್ದ ಗ್ರಾಹಕರು, ಸಿಬಂದಿ ಸಹಿತ 170ಕ್ಕೂ ಹೆಚ್ಚು ಜನರ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ರಮೇಶ್‌ ಕಲ್ಪುರೆ ಅವರು ತಿಳಿಸಿದ್ದಾರೆ.

ಕಡಬ: ಮುಂಜಾಗ್ರತ ಸಭೆ
ಕಡಬ ಗ್ರಾಮದ ನಿವಾಸಿಗೆ ಕೋವಿಡ್-19 ಪತ್ತೆಯಾದ ಹಿನ್ನೆಲೆಯಲ್ಲಿ ಕಡಬ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ರೋಡ್ರಿ ಗಸ್‌ ಅವರ ನೇತೃತ್ವದಲ್ಲಿ ಶನಿವಾರ ಕಡಬ ಅಂಬೇಡ್ಕರ್‌ ಭವನದಲ್ಲಿ ಮುಂಜಾಗ್ರತ ಸಭೆ ನಡೆಸಲಾಯಿತು. ಕಡಬ ಪೇಟೆಯಲ್ಲಿ ವ್ಯಾಪಾರ ವ್ಯವಹಾರಗಳುನ್ನು ಈಗಾಗಲೇ ಜಿಲ್ಲಾಡಳಿತ ನಿಗದಿಪಡಿಸಿದ ಸಮಯ ದಂತೆಯೇ ಮುಂದು ವರಿಸುವುದು, ಅಂಗಡಿ ಮುಂಗಟ್ಟುಗಳಲ್ಲಿ ವ್ಯವಹಾರ ನಡೆಸುವ ವೇಳೆ ಗ್ರಾಹಕರು ಸಾಮಾ ಜಿಕ ಅಂತರ ಕಾಯ್ದುಕೊಳ್ಳುವುದು ಇತ್ಯಾದಿ ವಿಚಾರಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಕುರಿತು ನಿರ್ಣಯಿಸಲಾಯಿತು.

ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌, ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ತಾ.ಪಂ. ಸದಸ್ಯ ಫಝಲ್‌ ಕೋಡಿಂಬಾಳ, ಗ್ರಾ.ಪಂ.  ಅಧ್ಯಕ್ಷ ಬಾಬು ಮುಗೇರ, ಕಡಬ ಎಸ್‌ಐ ರುಕ್ಮ ನಾಯ್ಕ, ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್‌, ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್‌. ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಅವಿನ್‌ ರಂಗತ್‌ಮಲೆ ಸ್ವಾಗತಿಸಿ, ನಿರೂಪಿಸಿದರು. ಪಿಡಿಒ ಚೆನ್ನಪ್ಪ ಗೌಡ ವಂದಿಸಿದರು.

ಟಾಪ್ ನ್ಯೂಸ್

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ

VHP (2)

ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್‌ ಪ್ರತಿಭಟನೆ

Belthangady: ಯುವತಿ ನಾಪತ್ತೆ

Belthangady: ಯುವತಿ ನಾಪತ್ತೆ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Vitla: ಮಹಿಳೆಗೆ ಹಿಂಸೆ; ಐದು ಮಂದಿ ವಿರುದ್ಧ ಪ್ರಕರಣ

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

Bantwal: ಬರಿಮಾರು; ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.