ಶಾಶ್ವತವಾಗಿ ಮದ್ಯ ತ್ಯಜಿಸಿ: ಡಾ| ವೀರೇಂದ್ರ ಹೆಗ್ಗಡೆ ಕರೆ


Team Udayavani, May 3, 2020, 9:37 AM IST

D-Veerendra-Hegade

ಬೆಳ್ತಂಗಡಿ: ರಾಜ್ಯದಲ್ಲಿ 40 ದಿನಗಳಿಂದ ಮದ್ಯ ಸೇವನೆಯನ್ನು ನಿಲ್ಲಿಸಿರುವ ಎಲ್ಲರೂ ಮದ್ಯಪಾನವನ್ನು ಶಾಶ್ವತವಾಗಿ ತ್ಯಜಿಸಬೇಕೆಂದು ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಕರೆ ನೀಡಿದ್ದಾರೆ.ಈ ಸಂಬಂಧ ಶನಿವಾರ ನಡೆದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಈ ವಿಚಾರ ಪ್ರಸ್ತಾವಿಸಿದರು.

ಕರ್ನಾಟಕವನ್ನು ಮದ್ಯ ಮಾರಾಟ ಮುಕ್ತಗೊಳಿ ಸಲು ಸರಕಾರ ನಿರ್ಧರಿಸಿದರೆ ಜನತೆ ಸ್ವಯಂ ಪ್ರೇರಿತವಾಗಿ ಬೆಂಬಲಿಸಬೇಕು. ಅಲ್ಲದೆ ರಾಷ್ಟ್ರ ಮಟ್ಟ ದಲ್ಲಿ ಮದ್ಯ ನಿಷೇಧ ಘೋಷಣೆಯಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಗ್ರಾಮಾಭಿವೃದ್ಧಿ ಯೋಜನೆಯು ಇತ್ತೀಚೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಿದ ಸರ್ವೇಕ್ಷಣೆಯಲ್ಲಿ ಮದ್ಯ ಮಾರಾಟದ ಸ್ಥಗಿತದಿಂದ ಉಂಟಾದ ಪರಿಸ್ಥಿತಿ ಬಗ್ಗೆ ವಿಶ್ಲೇಷಿಸಿದ್ದಾರೆ.

ಕೋವಿಡ್‌ ಸಮಸ್ಯೆಯಿಂದ ಸರಕಾರವು ಲಾಕ್‌ಡೌನ್‌ ಘೋಷಣೆ ಮಾಡಿದ ಅನಂತರದ 40 ದಿನಗಳಲ್ಲಿ ಮದ್ಯಸೇವನೆಯು ಕಡಿಮೆಯಾಗಿ ಶೇ. 89 ಸಂಸಾರಗಳಲ್ಲಿ ಸಂತೋಷ, ನೆಮ್ಮದಿ ಹೆಚ್ಚಾಗಿದೆ. ಮದ್ಯ ಸೇವಿಸದಿರುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಉಳಿತಾಯ ಹೆಚ್ಚಾಗಿದೆ ಎಂದು ಸರ್ವೇಕ್ಷಣ ವರದಿ ತಿಳಿಸಿದೆ ಎಂದರು.

ಸರಕಾರವು ಮದ್ಯದ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದರೂ ಮದ್ಯಪಾನ ನಿಷೇಧವನ್ನು ಜನತಾ ಚಳವಳಿಯಾಗಿ ಮಾಡಿಕೊಂಡು ಯಾರೂ ಮದ್ಯದ ಅಂಗಡಿಯ ಬಳಿ ಸುಳಿಯಬಾರದೆಂದು ವೇದಿಕೆ ಅಧ್ಯಕ್ಷ ರಾಮಸ್ವಾಮಿ ವಿನಂತಿಸಿದ್ದಾರೆ.

ಧರ್ಮಸ್ಥಳ ಯೋಜನೆಯು ಪ್ರಾಯೋಜಿಸಿರುವ ಹೆಚ್ಚಿನ ಮಹಿಳಾ ಸಂಘದ ಸದಸರ ಒಕ್ಕೊರಲ ಅಭಿಪ್ರಾಯ ಮದ್ಯ ಖರೀದಿಯನ್ನು ಸ್ಥಗಿತಗೊಳಿಸ ಬೇಕೆಂಬುದೇ ಆಗಿದೆ. ಈ ನಿಟ್ಟಿನಲ್ಲಿ ಕುಟುಂಬ ಮಟ್ಟದಲ್ಲಿ ದೇವರ ಹೆಸರಿನಲ್ಲಿ ಮದ್ಯ ಖರೀದಿಸದಂತೆ ಸಂಕಲ್ಪ ಮಾಡಬೇಕೆಂದು ವೇದಿಕೆಯು ಕರೆ ನೀಡಿದೆ. ವೀಡಿಯೋ ಕಾನ್ಫರೆನ್ಸ್‌ನಲ್ಲಿ ವೇದಿಕೆ ಕಾರ್ಯದರ್ಶಿ ವಿವೇಕ್‌ ಪಾಯಸ್‌ ಮತ್ತಿತರರಿದ್ದರು.

ಟಾಪ್ ನ್ಯೂಸ್

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

1-jagga

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

1(2)

Puttur: ಮೊದಲ ಕಿನ್ನಿಪಿಲಿಗೆ 48 ವರ್ಷ!; 15ರಿಂದ 75ಕ್ಕೇರಿದ ಟೀಮ್‌

5-belthanagdy

Belthanagdy:ಹಿರಿಯ ಸಹಕಾರಿ,ಉಜಿರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸೇವಾಸಂಘದ ಅಧ್ಯಕ್ಷ ನಿಧನ

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

1

Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

Railway-min-Ashiwini

Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್‍ಯಾಪಿಡ್‌ ರೈಲು: ರೈಲ್ವೆ ಸಚಿವ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.