Sullia ನಗರದಲ್ಲಿ ನಿಯಂತ್ರಣ; ಗ್ರಾಮೀಣದಲ್ಲಿ ಶಂಕಿತ ಪ್ರಕರಣ

ಸುಳ್ಯ: 6 ತಿಂಗಳಲ್ಲಿ 144 ಶಂಕಿತ, 1 ದೃಢ; ಒಂದು ಮರಣ

Team Udayavani, Jul 10, 2024, 6:50 AM IST

Sullia ನಗರದಲ್ಲಿ ನಿಯಂತ್ರಣ; ಗ್ರಾಮೀಣದಲ್ಲಿ ಶಂಕಿತ ಪ್ರಕರಣ

ಸುಳ್ಯ,

ಸುಳ್ಯ: ಸುಳ್ಯ ತಾಲೂಕಿನಲ್ಲಿ ಕಳೆದ ಜನವರಿಯಿಂದ ಜೂನ್‌ವರೆಗೆ 144 ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 1 ಖಚಿತ ಪ್ರಕರಣ ದಾಖಲಾಗಿದ್ದು, ಡೆಂಗ್ಯೂ ಪ್ರಕರಣದಲ್ಲಿ ಒಂದು ಮರಣ ಪ್ರಕರಣ ದಾಖಲಾಗಿದೆ. ಪ್ರಸ್ತುತ ಸುಳ್ಯ ತಾಲೂಕಿನ ಸುಳ್ಯ ನಗರದಲ್ಲಿ ಡೆಂಗ್ಯೂ ನಿಯಂತ್ರಣದಲ್ಲಿದ್ದು, ಗ್ರಾಮೀಣ ಭಾಗದ ಕೆಲವೆಡೆ ಶಂಕಿತ ಪ್ರಕರಣಗಳು ಕಂಡುಬರುತ್ತಿವೆ.

ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ವತಿಯಿಂದ ಸಮಾರೋಪಾದಿ ಕೆಲಸ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಸ್ಥಳೀಯಾಡಳಿತ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಡೆಂಗ್ಯೂ ಬಗ್ಗೆ ಜಾಗೃತಿ ಹಾಗೂ ನಿಯಂತ್ರಣ ಕಾರ್ಯಕ್ರಮಗಳು ನಡೆಯುತ್ತಿವೆ.

ಸುಳ್ಯ ನಗರಕ್ಕೆ ಸಂಬಂಧಿಸಿ ಈ ವರೆಗೆ ಯಾವುದೇ ಡೆಂಗ್ಯೂ ಪ್ರಕರಣಗಳು ನಗರದಲ್ಲಿ ಪತ್ತೆಯಾಗಿಲ್ಲ. ಆದರೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದಿಂದ ಒಂದು ಮರಣ ಸಂಭವಿಸಿದ ಪ್ರಕರಣ ದಾಖಲಾಗಿದೆ. ತಾಲೂಕಿನಲ್ಲಿ ಪ್ರಸ್ತುತ ಯಾವುದೇ ಡೆಂಗ್ಯೂ ಪ್ರಕರಣ ವರದಿಯಾಗಿಲ್ಲ. ಶಂಕಿತ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾದವರೆಲ್ಲ ಪ್ರಸ್ತುತ ಗುಣಮುಖರಾಗಿದ್ದಾರೆ.

ಕೊಲ್ಲಮೊಗ್ರು ಭಾಗದಲ್ಲಿ ಪ್ರಕರಣ
ಸುಳ್ಯ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣ ನಿಯಂತ್ರಣದಲ್ಲಿದ್ದರೂ, ಕೊಲ್ಲಮೊಗ್ರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣ ಕಂಡುಬರುತ್ತಿದೆ. ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮದಲ್ಲಿ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಿದ್ದು, ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ ವಹಿಸಿದೆ. ಕೆಲ ಗ್ರಾಮೀಣ ಭಾಗದಲ್ಲೂ ಶಂಕಿತ ಪ್ರಕರಣ ಕಂಡುಬಂದಿದ್ದರೂ ನಿಯಂತ್ರಣಕ್ಕೆ ಬಂದಿದೆ.

20 ಬೆಡ್‌ನ‌ ಪ್ರತ್ಯೇಕ ವಾರ್ಡ್‌
ಸುಳ್ಯದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ರೋಗಕ್ಕೆ ಸಂಬಂ ಸಿದಂತೆ ದಾಖಲಾಗುವ ರೋಗಿಗಳಿಗಾಗಿ 20 ಬೆಡ್‌ನ‌ ಪ್ರತ್ಯೇಕ ವಾರ್ಡ್‌ ವ್ಯವಸ್ಥೆಯಿದೆ. ಕೋವಿಡ್‌ ಸಮಯದಲ್ಲಿ ಕೋವಿಡ್‌ ವಾರ್ಡ್‌ ಇದಾಗಿದ್ದು, ಪ್ರಸ್ತುತ ಸಾಂಕ್ರಾಮಿಕ ರೋಗಕ್ಕೆ ಸಂಬಂ ಧಿಸಿ ದಾಖಲಾಗುವ ರೋಗಿಗಳಿಗಾಗಿ ಈ ವಾರ್ಡ್‌ ಅನ್ನು ಮೀಸಲಿರಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ರಕ್ತ ತಪಾಸಣೆಗೂ ವ್ಯವಸ್ಥೆ ಇದೆ. ಡೆಂಗ್ಯೂ ಖಚಿತ ಪ್ರಕರಣಗಳನ್ನು ಜಿಲ್ಲಾ ಪ್ರಯೋಗಾಲಯದಲ್ಲಿ ಎಲೈಸಾ ಟೆಸ್ಟ್‌ ಮಾಡಲಾಗುತ್ತದೆ.

ನಿಯಂತ್ರಣಕ್ಕೆ ಕ್ರಮ
ಡೆಂಗ್ಯೂ ಪ್ರಕರಣ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದ್ದು, ಸುಳ್ಯ ನಗರದಲ್ಲಿ ತಿಂಗಳ ಮೊದಲ ಹಾಗೂ 3ನೇ ಶುಕ್ರವಾರ ಲಾರ್ವೆ ಸಮೀಕ್ಷೆ ಹಾಗೂ ಲಾರ್ವೆ ನಾಶ ಕಾರ್ಯ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಪ್ರತೀ ಶುಕ್ರವಾರ ಡ್ರೈ ಡೇ ಕಾರ್ಯಕ್ರಮದಲ್ಲಿ ಸ್ಥಳೀಯಾಡಳಿತದ ಸಹಯೋಗದೊಂದಿಗೆ ಆರೋಗ್ಯ ಇಲಾಖೆ ಲಾರ್ವೆ ಸರ್ವೆ, ಲಾರ್ವೆ ನಾಶ ಮಾಡಲಾಗುತ್ತಿದೆ.

ಹಲವೆಡೆ ಕೊಳಚೆ ನೀರಿನ ಪ್ರದೇಶ
ಶುಚಿಗೊಲ್ಲದೇ ಸೊಳ್ಳೆ ಉತ್ಪತ್ತಿ ಆಗುತ್ತಿದ್ದು ಇದು ಒಂದೂ ಕಾರಣ ಆಗಿದೆ. ಇನ್ನು ಹಲವೆಡೆ ಮಳೆಗಾಲ ಆರಂಭಗೊಂಡಿದ್ದರೂ ಚರಂಡಿ ದುರಸ್ತಿ ಕಾರ್ಯ ನಡೆಸದೇ ನಿರ್ಲಕ್ಷ್ಯ ವಹಿಸಲಾಗಿದ್ದು, ಇಂತಹ ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದ್ದು, ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಾರಣವಾಗುತ್ತಿರುವ ಶಂಕೆ ವ್ಯಕ್ತವಾಗಿದೆ.

ಸುಳ್ಯ ತಾಲೂಕಿನಲ್ಲಿ ಪ್ರಸ್ತುತ ಡೆಂಗ್ಯೂ ಪ್ರಕರಣ ನಿಯಂತ್ರಣದಲ್ಲಿದೆ. ಆರಂಭ ಹಂತದಲ್ಲಿ ಜ್ವರ ಬಂದ ತತ್‌ಕ್ಷಣ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷಿಸಿ, ಔಷ ಧ ಪಡೆಯಬೇಕು. 3-4ನೇ ದಿನ ರಕ್ತ ಪರೀಕ್ಷೆ ಮಾಡಿ, 5-7ನೇ ದಿನ ರಕ್ತದ ಮಾದರಿ ಪರೀಕ್ಷಿಸಬೇಕು. ಡೆಂಗ್ಯೂ ಅಥವಾ ಜ್ವರ ಇರುವ ವ್ಯಕ್ತಿಗಳು ಔಷ ಧ ಪಡೆದು, ಧೈರ್ಯ, ಆತ್ಮವಿಶ್ವಾಸದಿಂದ ಇದ್ದು, 7 ದಿನಗಳ ಸಂಪೂರ್ಣ ವಿಶ್ರಾಂತಿ ಪಡೆಯಬೇಕು. ಸಾರ್ವಜನಿಕರ ಬೆಂಬಲ, ಸಹಕಾರದಿಂದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದಾಗಿದೆ.
– ಡಾ| ನಂದಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಸುಳ್ಯ

ಟಾಪ್ ನ್ಯೂಸ್

ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ: ದಿಲ್ಲಿ ಸರಕಾರ

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

CM-Sidda-BGV

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POlice

Sullia: ಬೆಳ್ಳಾರೆ ಸೊಸೈಟಿ ಚುನಾವಣೆ; ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ

5

Kadaba: ಮೇಯಲು ಬಿಟ್ಟ ದನದ ಕಾಲು ಕಡಿದ ವ್ಯಕ್ತಿ; ದೂರು

6

Bantwal: ತುಂಬೆ ಜಂಕ್ಷನ್‌; ಸರಣಿ ಅಪಘಾತ

2

Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ

1

Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ: ದಿಲ್ಲಿ ಸರಕಾರ

Delhi Government: ಕೇಜ್ರಿ ಯೋಜನೆಗಳಿಗೆ ನೋಂದಣಿ ಶುರು ಮಾಡಿಲ್ಲ

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Ambedkar ವಿವಾದ ಸೇರಿ ಹಲವು ವಿಷಯಗಳ ಬಗ್ಗೆ ಎನ್‌ಡಿಎ ಚರ್ಚೆ?

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.