ಅಪಾಯಕಾರಿ ಹಂಪ್‌ಗೆ ಪರಿಹಾರ
Team Udayavani, Jun 27, 2019, 5:21 AM IST
ಕಡಬ: ಇಲ್ಲಿನ ಹೊಸಮಠ ನೂತನ ಸೇತುವೆಯ ಬಳಿ ಅವೈಜ್ಞಾನಿಕ ರೀತಿಯಲ್ಲಿ ಹಂಪ್ (ರಸ್ತೆ ಉಬ್ಬು) ನಿರ್ಮಿಸಲಾಗಿದ್ದು, ವಾಹನಗಳು ಅಪಘಾತಕ್ಕೀಡಾಗುತ್ತಿದೆ ಎನ್ನುವ ಸಾರ್ವಜನಿಕರ ದೂರಿಗೆ ಸ್ಪಂದಿಸಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಅಧಿಕಾರಿಗಳು ಹಂಪ್ ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ.
ಹೊಸಮಠ ಸೇತುವೆ ಬಳಿ ಎರಡೂ ಬದಿಯ ಸಂಪರ್ಕ ರಸ್ತೆಗಳಲ್ಲಿ ನಿರ್ಮಿಸಲಾಗಿದ್ದ ಹಂಪ್ (ರಸ್ತೆ ಉಬ್ಬು) ನಿಂದಾಗಿ ಹಲವು ವಾಹನಗಳು ಅಪಘಾತಕ್ಕೀಡಾಗಿದ್ದು ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರುಗಳ ಅಡಿಭಾಗ ಈ ಹಂಪ್‌ಗೆ ತಾಗಿ ಬಿಡಿ ಭಾಗಗಳಿಗೆ ಹಾನಿಯಾಗಿ ನಷ್ಟ ಸಂಭವಿಸಿದ ಘಟನೆಗಳೂ ನಡೆದಿದ್ದವು.
ಹಂಪ್‌ನಿಂದಾಗಿ ಆಗುತ್ತಿರುವ ಸಮಸ್ಯೆಗಳ ಕುರಿತು ‘ಉದಯವಾಣಿ’ ಸುದಿನ ವರದಿಗೆ ಸ್ಪಂದಿಸಿರುವ ಕೆಆರ್‌ಡಿಸಿಎಲ್ ಎಂಜಿನಿಯರ್, ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೇತುವೆಯ ಎರಡೂ ತುದಿಗಳಲ್ಲಿನ ಸಂಪರ್ಕ ರಸ್ತೆಗೆ ನಿರ್ಮಿಸಲಾಗಿದ್ದ ಹಂಪ್‌ಗ್ಳಲ್ಲಿ ಸಲೀಸಾಗಿ ವಾಹನ ಚಲಿಸುವ ರೀತಿಯಲ್ಲಿ ಸ್ವಲ್ಪ ಮಟ್ಟಿನ ಮಾರ್ಪಾಟು ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.