ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಫುಟ್ಪಾತ್ ವ್ಯಾಪಾರ ತೆರವು
Team Udayavani, Nov 30, 2018, 3:03 PM IST
ಪುತ್ತೂರು: ನಗರದ ಫುಟ್ಪಾತ್ ಗಳಲ್ಲಿ ವ್ಯಾಪಾರ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದ ದೂರಿಗೆ ಸಂಬಂಧಿಸಿ ಸಂಚಾರ ಪೊಲೀಸರು ಬುಧವಾರ, ಗುರುವಾರ ವಿಶೇಷ ಕಾರ್ಯಾಚರಣೆ ನಡೆಸಿ ಅನಧಿಕೃತ ಫುಟ್ಪಾತ್ ವ್ಯಾಪಾರಿಗಳನ್ನು ತೆರವು ಗೊಳಿಸಿದರು.
ವ್ಯಾಪಾರ ಸೊತ್ತುಗಳನ್ನು ಇಡುವ ಮೂಲಕ ಫುಟ್ಪಾತ್‌ಗಳಲ್ಲಿ ನಡೆದಾಡಲು ಸಾರ್ವಜನಿಕರಿಗೆ ಅಡ್ಡಿಯಾಗುತ್ತಿತ್ತು. ಅನಿವಾರ್ಯವಾಗಿ ರಸ್ತೆಗೆ ಇಳಿಯುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಂಚಾರ ಸುರಕ್ಷತೆಯ ದೃಷ್ಟಿಯಿಂದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್ .ಐ. ನಾರಾಯಣ ರೈ ನೇತೃತ್ವದಲ್ಲಿ ಪುತ್ತೂರು ಬಸ್ ನಿಲ್ದಾಣದ ಸುತ್ತಮುತ್ತ, ದರ್ಬೆ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿ ಅಂಗಡಿಯವರು ಫುಟಾ³ತ್ ಅನ್ನು ಆಕ್ರಮಿಸಿ ಇಟ್ಟಿದ್ದ ವ್ಯಾಪಾರದ ಸೊತ್ತುಗಳನ್ನು ತೆರವುಗೊಳಿಸಿ ಎಚ್ಚರಿಕೆ ನೀಡಿದರು.
ಗುರುವಾರವೂ ಕಾರ್ಯಾಚರಣೆ
ಪೊಲೀಸರ ತಂಡ ಬುಧವಾರ ಆರಂಭಿಸಿದ ಕಾರ್ಯಾಚರಣೆ ಗುರುವಾರವೂ ಮುಂದುವರಿದಿದೆ. ಸಂಚಾರ ಪೊಲೀಸ್ ಠಾಣೆಯ ಬಳಿಯಿಂದ ಆರಂಭಿಸಿ ಬಸ್ ನಿಲ್ದಾಣ, ಕಲ್ಲಾರೆ, ದರ್ಬೆ, ಅಶ್ವಿನಿ ಸರ್ಕಲ್ ತನಕ ಕಾರ್ಯಾಚರಣೆ ನಡೆಸಿದೆ. ದರ್ಬೆ ಐ.ಬಿ. ಎದುರುಗಡೆ ಸಹಿತ ಕೆಲವು ಕಡೆಗಳಲ್ಲಿ ಫುಟಾ³ತ್‌ಗಳಲ್ಲಿ
ಕಾರ್ಯನಿರ್ವಹಿಸುತ್ತಿದ್ದ ಅಂಗಡಿಗಳನ್ನು ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ತೆರಗೊಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಸ್ಕರಿಯ, ಶಿವಪ್ರಸಾದ್, ಹಿತೇಶ್, ವಿರೂಪಾಕ್ಷ ಸಹಕರಿಸಿದರು.
ಕಟ್ಟುನಿಟ್ಟಿನ ಕ್ರಮ
ನಗರದ ಅಲ್ಲಲ್ಲಿ ಫುಟ್ಪಾತ್ ವ್ಯಾಪಾರ ಹೆಚ್ಚುತ್ತಿರುವುದರಿಂದ ಪಾದಚಾರಿಗಳಿಗೆ ನಡೆದಾಡಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಅಪಘಾತಗಳೂ ಸಂಭವಿಸುತ್ತಿವೆ. ಈ ಕುರಿತು ಸಾರ್ವಜನಿಕ ವಲಯದಿಂದಲೂ ದೂರುಗಳು ಬಂದಿದ್ದು, ಇದರ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.
-ನಾರಾಯಣ ರೈ ಪಿಎಸ್‌ಐ,
ಸಂಚಾರ ಪೊಲೀಸ್ ಠಾಣೆ, ಪುತ್ತೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.