ಪುತ್ತೂರು ನಗರ ಸಭೆಯಿಂದ ಅಕ್ರಮ ಮನೆ ತೆರವು
Team Udayavani, Jul 4, 2018, 2:33 PM IST
ಬಲ್ನಾಡು : ಸುಂಕದಮೂಲೆ ಎಂಬಲ್ಲಿ ನಗರಸಭೆ ನಿವೇಶನಕ್ಕೆ ಮಂಜೂರಾದ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಯನ್ನು ಪೊಲೀಸರ ಸಹಕಾರದಿಂದ ಅಧಿಕಾರಿಗಳು ತೆರವುಗೊಳಿಸಿದರು. ಕಾರ್ಯಾಚರಣೆಗೆ ಮನೆಯವರು ಅಡ್ಡಿಪಡಿಸಿದರು. ಒಂದು ದಿನ ಸಮಯಾವಕಾಶ ನೀಡುವಂತೆ ಗೋಗರೆದರು. ಮೇಲಧಿಕಾರಿಗಳ ಆದೇಶದಂತೆ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಸೋಮವಾರವೇ ಎಚ್ಚರಿಕೆ ನೀಡಿದರೂ ತೆರವು ಮಾಡಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು. ಪ್ರತಿರೋಧದ ನಡುವೆಯೇ ಅಕ್ರಮ ಮನೆ ತೆರವು ಮಾಡಲಾಯಿತು.
ಸುಂಕದಮೂಲೆಯ ನಗರಸಭೆಯ 2.5 ಎಕರೆ ಜಾಗದಲ್ಲಿ ಅಕ್ರಮ ಮನೆ ಕಟ್ಟುತ್ತಿದ್ದಾರೆ ಎಂದು ಸೋಮವಾರ ನಗರಸಭೆಗೆ ಮಾಹಿತಿ ನೀಡಲಾಗಿತ್ತು. ತಕ್ಷಣ ತೆರಳಿದ ಅಧಿಕಾರಿಗಳು, ತೆರವು ಮಾಡುವಂತೆ ಸೂಚಿಸಿದರು. ಆದರೆ ಸೋಮವಾರ ರಾತ್ರಿಯೇ ಮನೆಗೆ ಸಿಮೆಂಟ್ ಶೀಟ್ ಹಾಕಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಿದ್ದರು. ಈ ಬಗ್ಗೆ ನಗರಸಭೆಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಮನೆಯ ವಸ್ತುಗಳಿಗೆ ಹಾನಿಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿದರು. ಮನೆಯೊಳಗಿದ್ದ ಸಾಮಗ್ರಿ ಹೊರಗಿಟ್ಟು, ಸಿಮೆಂಟ್ ಶೀಟ್‌ಗಳನ್ನು ತೆರವು ಮಾಡಿದರು. ದಾರಂದ, ಕಲ್ಲುಗಳನ್ನು ತೆಗೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Chamarajanagara: ತರಗತಿಯಲ್ಲಿ ಕುಸಿದು ಬಿದ್ದು ಮೂರನೇ ತರಗತಿ ಬಾಲಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.