ಜನಪ್ರತಿನಿಧಿಗಳು ರೈತರಿಗೆ ಮಾಹಿತಿ ನೀಡಿ: ರಶ್ಮಿ
ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆ
Team Udayavani, Jun 27, 2019, 5:00 AM IST
ಬಂಟ್ವಾಳ: ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಗೆ ಬಂಟ್ವಾಳ ತಾಲೂಕಿನ 54 ಸಾವಿರ ಕೃಷಿಕರಲ್ಲಿ ಕೇವಲ 13 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಗ್ರಾಮ ಮಟ್ಟದಲ್ಲಿ ರೈತರಿಗೆ ಇದರ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಜನ ಪ್ರತಿನಿಧಿಗಳು ಮಾಡಬೇಕು. ಜೂ. 30 ನೋಂದಣಿಗೆ ಕೊನೆಯ ದಿನವಾಗಿದ್ದು, ಕಂದಾಯ ಇಲಾಖೆ ಕೆಲವು ದಿನಗಳಲ್ಲಿ ಎಲ್ಲ ಸಿಬಂದಿಯ ಮೂಲಕ, ರಜಾ ದಿನದಲ್ಲೂ ಕರ್ತವ್ಯ ನಿರ್ವಹಿಸಿ ಗರಿಷ್ಟ ಸಂಖ್ಯೆಯಲ್ಲಿ ಫಲಾನುಭವಿಯಾಗಿ ನೋಂ ದಾಯಿಸಲು ಪ್ರಯತ್ನಿಸುತ್ತಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಹೇಳಿದರು.
ಅವರು ಜೂ. 26ರಂದು ಬಿ.ಸಿ.ರೋಡ್ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೂರಕ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಅಲ್ಪ ಪರಿಹಾರ
ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಎಂ.ಎಸ್. ಮಹಮ್ಮದ್, ಎಂ. ತುಂಗಪ್ಪ ಬಂಗೇರ, ಮಂಜುಳಾ ಮಾವೆ, ಹೈದರ್ ಕೈರಂಗಳ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ರೈತ ರೊಬ್ಬರಿಗೆ ಸಿಕ್ಕಿದ ಕನಿಷ್ಟ ಪರಿಹಾರ ಮೊತ್ತ, ಪ್ರಾಕೃತಿಕ ವಿಕೋಪದಲ್ಲಿ ಮನೆಗೆ ಮಂಜೂರಾದ ಪರಿ ಹಾರವು ಫಲಾನುಭವಿಗೆ ಅವಮಾನ ಮಾಡಿದ ರೀತಿಯಲ್ಲಿ ಅಲ್ಪವಾಗಿದೆ ಎಂದು ಅಭಿಪ್ರಾಯಪಟ್ಟರು.
ಲಕ್ಷಾಂತರ ತೋಟದ ಬೆಳೆ ನಷ್ಟಕ್ಕೆ 800 ರೂ. ಪರಿಹಾರ ಎಂಬುದು ಯಾವ ಲೆಕ್ಕಾಚಾರದ ಕ್ರಮ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ತೋಟಗಾರಿಕೆ ಅಧಿಕಾರಿ ದಿನೇಶ್, ಸರಕಾರದ ಗೈಡ್‌ಲೈನ್‌ನಂತೆ ಪರಿಹಾರ ಕ್ರಮ ಮಾಡಿದೆ ಎಂದು ಸ್ಪಷ್ಟಪಡಿಸಿದರು.
ಸರಕಾರವು ಮಾರ್ಗದರ್ಶಿ ಸೂತ್ರವನ್ನು ಬದಲಾಯಿಸಿ ಮಾರ್ಗದರ್ಶನ ನೀಡು ವಂತೆ ತಾಲೂಕು ಪಂಚಾಯತ್ ಸಭೆಯಲ್ಲಿ ನಿರ್ಣಯಿಸಿ ಸರಕಾರಕ್ಕೆ ಕಳುಹಿಸಲು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿ ಸಭಾಧ್ಯಕ್ಷರು ರೂಲಿಂಗ್ ನೀಡುವ ಮೂಲಕ ಚರ್ಚೆಗೆ ಮುಕ್ತಾಯ ಹಾಡಲಾಯಿತು.
ಹೆರಿಗೆ ರಜೆಗೆಂದು ಸರಕಾರಿ ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬಂದಿಯನ್ನು ಸಮಾಜಕಲ್ಯಾಣ ಇಲಾಖೆ ಹೆರಿಗೆ ರಜೆ ಮುಗಿಸಿ ಕೆಲಸಕ್ಕೆ ಹಾಜರಾದ ಸಂದರ್ಭ ಕೆಲಸದಿಂದ ಕೈಬಿಡಲಾಗಿರುವುದು ಅಪರಾಧವಾಗಿದ್ದು, ಆ ಮಹಿಳೆಗೆ ನ್ಯಾಯ ಒದಗಿಸಬೇಕು. 6 ತಿಂಗಳಿಂದ ಮಹಿಳೆಯ ಸಂಬಳ ಯಾರಿಗೆ ನೀಡಿದ್ದಾರೆ ಎಂಬುದು ಕೂಡ ತನಿಖೆಯಾಗಬೇಕು. ಇನ್ನು ಮುಂದೆ ತಾಲೂಕಿನ ಯಾವುದೇ ಕಚೇರಿಯಲ್ಲಿ ಮುಂದೆ ಇಂಥದ್ದು ನಡೆಯಬಾರದು. ನ್ಯಾಯಲಯದ ಆದೇಶ ಕೂಡ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂಬ ಪ್ರಸ್ತಾವಕ್ಕೆ ಒಮ್ಮತ ವ್ಯಕ್ತವಾಯಿತು.
ತಾಲೂಕಿನ ‘ಏಕೋಪಾಧ್ಯಾಯ’ ಶಾಲೆಗಳನ್ನು ಗುರುತಿಸಿ ಅಂತಹ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರ ನೇಮಕ ಮಾಡುವ ಕೆಲಸವನ್ನು ಗಂಭೀರವಾಗಿ ಪರಿಗಣಿಸಿ ಎಂದು ಮನವಿಯನ್ನು ಮಾಡಲಾಯಿತು. ನಂದಾವರ ಶಾಲಾ ಆವರಣಗೋಡೆ ಕುಸಿದು ಹೋಗಿದ್ದು, ಅದನ್ನು ಸರಿಪಡಿಸಿ ಕೊಡುವಂತೆ ಸಭೆಯಲ್ಲಿ ಪ್ರಸ್ತಾಪವಾಯಿತು.
ಶಿಕ್ಷಕರ ನೇಮಕ

ನ್ಯಾಯ ಒದಗಿಸಲಿ
ಹೆರಿಗೆ ರಜೆಗೆಂದು ಸರಕಾರಿ ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬಂದಿಯನ್ನು ಸಮಾಜಕಲ್ಯಾಣ ಇಲಾಖೆ ಹೆರಿಗೆ ರಜೆ ಮುಗಿಸಿ ಕೆಲಸಕ್ಕೆ ಹಾಜರಾದ ಸಂದರ್ಭ ಕೆಲಸದಿಂದ ಕೈಬಿಡಲಾಗಿರುವುದು ಅಪರಾಧವಾಗಿದ್ದು, ಆ ಮಹಿಳೆಗೆ ನ್ಯಾಯ ಒದಗಿಸಬೇಕು. 6 ತಿಂಗಳಿಂದ ಮಹಿಳೆಯ ಸಂಬಳ ಯಾರಿಗೆ ನೀಡಿದ್ದಾರೆ ಎಂಬುದು ಕೂಡ ತನಿಖೆಯಾಗಬೇಕು. ಇನ್ನು ಮುಂದೆ ತಾಲೂಕಿನ ಯಾವುದೇ ಕಚೇರಿಯಲ್ಲಿ ಮುಂದೆ ಇಂಥದ್ದು ನಡೆಯಬಾರದು. ನ್ಯಾಯಲಯದ ಆದೇಶ ಕೂಡ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಎಂಬ ಪ್ರಸ್ತಾವಕ್ಕೆ ಒಮ್ಮತ ವ್ಯಕ್ತವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.