ರಾತ್ರಿ ವಾಹನ ತಪಾಸಣೆಗೆ ಆಗ್ರಹ : ಸೋಲಾರ್ ಬೀದಿ ದೀಪಗಳ ಬ್ಯಾಟರಿ ಕಳ್ಳರ ಜಾಲ ಸಕ್ರಿಯ
Team Udayavani, Mar 20, 2022, 4:00 AM IST
ಸಾಂದರ್ಭಿಕ ಚಿತ್ರ
ಕಡಬ: ಜಿಲ್ಲೆಯಾದ್ಯಂತ ಸೋಲಾರ್ ಬೀದಿ ದೀಪಗಳ ಬ್ಯಾಟರಿಗಳನ್ನು ಕದ್ದೊಯ್ಯುವವರ ಜಾಲ ಸಕ್ರಿಯವಾಗಿದೆ. ಸ್ಥಳೀಯಾಡಳಿತಗಳು ಅಳವಡಿಸಿದ ಸೋಲಾರ್ ಬೀದಿ ದೀಪಗಳ ಬೆಲೆಬಾಳುವ ಬ್ಯಾಟರಿಗಳನ್ನು ಕದ್ದೊಯ್ಯುತ್ತಿರುವುದು ನಿರಂತರವಾಗಿ ನಡೆಯುತ್ತಿದೆ.
ರಸ್ತೆ ಪಕ್ಕ ಹಾಗೂ ಪೆಟ್ರೋಲ್ ಪಂಪ್‌ಗಳ ಬಳಿ ನಿಲುಗಡೆಗೊಳಿಸಿದ ವಾಹನಗಳಿಂದ ಬ್ಯಾಟರಿಗಳನ್ನು ಎಗರಿಸುತ್ತಿದ್ದ ಕಳ್ಳರ ಜಾಲ ಇದೀಗ ರಸ್ತೆ ಬದಿಯಲ್ಲಿ ಅಳವಡಿ ಸಲಾಗಿರುವ ಸೋಲಾರ್ ಬೀದಿ ದೀಪಗಳಿಂದ ಬ್ಯಾಟರಿಗಳನ್ನು ಕದ್ದೊಯ್ಯುತ್ತಿದೆ. ಜಿಲ್ಲೆ ಯಾದ್ಯಂತ ಸ್ಥಳೀಯಾಡಳಿತ ಸಂಸ್ಥೆಗಳು ಅಳವಡಿಸಿದ್ದ ಸಾವಿರಕ್ಕೂ ಮಿಕ್ಕಿ ಸೋಲಾರ್ ಬೀದಿ ದೀಪಗಳ ಬ್ಯಾಟರಿಗಳು ಕಳವಾಗಿವೆ. 2 ವರ್ಷಗಳ ಹಿಂದೆ ಕಡಬ ತಾ|ನ ವ್ಯಾಪ್ತಿಯ ಪೆರಾಬೆ, ಆಲಂಕಾರು, ಕುಟ್ರಾ ಪಾಡಿ, ನೆಲ್ಯಾಡಿ ಗ್ರಾ.ಪಂ.ಗಳು ಅಳವಡಿಸಿದ್ದ ಸೋಲಾರ್ ಬೀದಿ ದೀಪಗಳ 50ಕ್ಕೂ ಹೆಚ್ಚು ಬ್ಯಾಟರಿಗಳನ್ನು ಒಂದೇ ದಿನ ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಕೆಲವು ದಿನಗಳ ಹಿಂದೆ ಕುಟ್ರಾಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸೋಲಾರ್ ಬೀದಿ ದೀಪಗಳಿಗೆ ಅಳವಡಿಸಿದ ಹಲವು ಬ್ಯಾಟರಿಗಳು ಮತ್ತೆ ಕಳ್ಳರ ಪಾಲಾಗಿವೆ.
ಆದರೆ ಪೊಲೀಸ್ ಠಾಣೆಯ ತನಕ ತಲುಪದ ಬ್ಯಾಟರಿ ಕಳ್ಳತನದ ಪ್ರಕರಣಗಳು ಇನ್ನಷ್ಟು ಇರಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಸೋಲಾರ್ ಬೀದಿ ದೀಪಗಳಿಂದ ಮತ್ತು ವಾಹನಗಳಿಂದ ಬ್ಯಾಟರಿಗಳನ್ನು ಕದ್ದೊಯ್ಯುವ ವ್ಯವಸ್ಥಿತ ಜಾಲ ಇದಾಗಿದ್ದು, ಕಳ್ಳರ ತಂಡ ಹಗಲು ಹೊತ್ತಿನಲ್ಲಿ ಬಂದು ನಿರ್ಜನ ಪ್ರದೇಶದ ಬೀದಿ ದೀಪಗಳನ್ನು ಗುರುತಿಸಿಕೊಂಡು ರಾತ್ರಿ ಕಾರ್ಯಾಚರಣೆಗಿಳಿಯುತ್ತವೆ.
ಭೀತಿ ಇಲ್ಲದಿರುವುದೇ ಕಾರಣ :
ಪೊಲೀಸರ ಭೀತಿ ಇಲ್ಲದಿರುವುದೇ ಕಾರಣ ಎನ್ನುವುದು ಸಾರ್ವಜನಿಕರ ಅಭಿ ಪ್ರಾಯ. ಹೆಚ್ಚಿನ ಕಡೆ ಸಿ.ಸಿ. ಕೆಮರಾ ಗಳನ್ನು ಅಳವಡಿಸಲಾಗಿದ್ದರೂ ನಿರ್ವ ಹಣೆಯ ಕೊರತೆಯಿಂದಾಗಿ ಅವುಗಳು ಕಾರ್ಯ ನಿರ್ವಹಿಸದಿರುವುದು ಕಳ್ಳರ ಸುಳಿವು ದೊರೆ ಯದಿರಲು ಕಾರಣ ವಾಗಿದೆ. ರಾತ್ರಿ ಗಸ್ತು, ವಾಹನ ತಪಾಸಣೆಯ ಕಾರ್ಯವನ್ನು ಬಿಗಿಗೊಳಿಸಿ ಕಳ್ಳತನಗಳನ್ನು ತಡೆಯುವಲ್ಲಿ ಪೊಲೀಸರು ಗಮನಹರಿಸಬೇಕಿದೆ ಎನ್ನುವ ಆಗ್ರಹ ವ್ಯಕ್ತವಾಗಿದೆ.
ಸೂಕ್ತ ಕ್ರಮ ಕೈಗೊಳ್ಳ ಲಾಗುವುದು :
ಬ್ಯಾಟರಿ ಕಳವಿಗೆ ಸಂಬಂಧಿಸಿ ದಾಖಲಾಗಿರುವ ಪ್ರಕರಣಗಳ ಬಗ್ಗೆ ಜಿಲ್ಲೆಯ ಎಲ್ಲ ಠಾಣೆಗಳಿಂದ ಮಾಹಿತಿ ತರಿಸಿಕೊಂಡು ಕಳ್ಳರ ಜಾಲವನ್ನು ಬೇಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. –ರಿಷಿಕೇಶ್ ಭಗವಾನ್, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಇನ್ನೂ ಪತ್ತೆಯಾಗಿಲ್ಲ :
ಹಲವು ಪ್ರಕರಣಗಳು ದಾಖಲಾಗಿವೆ. ಆದರೆ ಯಾವುದೂ ಪತ್ತೆಯಾಗಿಲ್ಲ. ಪ್ರಸ್ತುತ ಪ್ರತ್ಯೇಕ ಬ್ಯಾಟರಿಯ ಬದಲು ಸೋಲಾರ್ ಪ್ಯಾನಲ್‌ಗೇ ಅಳವಡಿಸಲಾಗಿರುವ ಬ್ಯಾಟರಿಗಳು ಇರುವ ಬೀದಿದೀಪಗಳನ್ನು ಅಳವಡಿಸಲಾಗುತ್ತಿದೆ. –ನವೀನ್ ಭಂಡಾರಿ ಎಚ್., ಇಒ, ಕಡಬ-ಪುತ್ತೂರು ತಾ.ಪಂ.
– ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.