ಪುತ್ತೂರಿನಲ್ಲಿ ಶೀಘ್ರ ಪೌರಬಂಧು ವಿಶ್ರಾಂತಿ ಗೃಹ
ಬಿಇಒ ಕಚೇರಿ ಸನಿಹದ ಸರಕಾರಿ ಜಾಗದಲ್ಲಿ ಅನುಷ್ಠಾನಕ್ಕೆ ನಿರ್ಧಾರ
Team Udayavani, May 7, 2022, 9:09 AM IST
ಪುತ್ತೂರು: ಪೌರ ಕಾರ್ಮಿಕರ ವಿಶ್ರಾಂತಿಗಾಗಿ ಪುತ್ತೂರು ನಗರದಲ್ಲಿ ಪೌರಬಂಧು ವಿಶ್ರಾಂತಿ ಗೃಹ ರಚನೆ ಕಾರ್ಯ ಪೂರ್ಣಗೊಂಡಿದ್ದು ಸ್ಥಳ ಹಸ್ತಾಂತರ ಪ್ರಕ್ರಿಯೆ ಮುಗಿದ ಕೆಲವು ದಿನಗಳಲ್ಲಿ ಅನುಷ್ಠಾನ ನಡೆದು ಸೇವೆಗೆ ಸಿದ್ಧವಾಗಲಿದೆ.
ದ.ಕ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಪುತ್ತೂರು ನಗರಸಭೆಯು ಪೌರ ಕಾರ್ಮಿಕರಿಗಾಗಿ ಈ ನಿರ್ಮಾಣ ಯೋಜನೆ ಹಮ್ಮಿಕೊಂಡಿದ್ದು, ಅಗತ್ಯ ಬಿದ್ದಲ್ಲಿ ಬೇರೆ ಕಡೆಗೂ ಸ್ಥಳಾಂತರ ಮಾಡಬಹುದಾದ ಕಂಟೈನರ್ ಮಾದರಿಯ ಪೌರಬಂಧು ವಿಶ್ರಾಂತಿ ಗೃಹ ಇದಾಗಿದೆ.
ಅಮೃತ ನಿರ್ಮಲ ನಗರ ಯೋಜನೆ ಅಡಿಯಲ್ಲಿ ಪುತ್ತೂರು ನಗರಸಭೆಗೆ 1 ಕೋಟಿ ರೂ. ಮಂಜೂರಾಗಿದ್ದು, ಇದರಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಪೌರ ಬಂಧು ವಿಶ್ರಾಂತಿ ಗೃಹ ನಿರ್ಮಿಸಲು ನಿರ್ಧರಿಸಲಾಗಿತ್ತು. ಶ್ರೇಯಸ್ ಆಚಾರ್ ಎಸ್.ವಿ.ಗೆ ಟೆಂಡರ್ ನೀಡಲಾಗಿದ್ದು ಕಂಟೈನರ್ ಸಿದ್ಧಗೊಂಡಿದೆ.
ವಿಶ್ರಾಂತಿ ಗೃಹ ಹೇಗಿರಲಿದೆ?
ಪೌರ ಬಂಧು ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಪುತ್ತೂರು ನಗರಸಭೆಯಿಂದ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಬಿಇಒ ಕಚೇರಿ ಪಕ್ಕದ ಖಾಲಿ ಸರಕಾರಿ ಜಾಗ ಹಸ್ತಾಂತರ ಆದ ತತ್ ಕ್ಷಣ ಕಂಟೈನರ್ ಮಾದರಿಯಲ್ಲಿ ಪೌರಬಂಧು ವಿಶ್ರಾಂತಿ ಗೃಹವನ್ನು ಅಲ್ಲಿ ಇಡಲಾಗುತ್ತದೆ. ಅಗತ್ಯ ಬಿದ್ದರೆ ಸ್ಥಳಾಂತರಿಸುವ ವ್ಯವಸ್ಥೆಯೂ ಇದರಲ್ಲಿದೆ.
ದಿನನಿತ್ಯ ನಗರದ ಸ್ವಚ್ಛತೆಗಾಗಿ ಕೆಲಸ ಮಾಡುವ ಪೌರ ಕಾರ್ಮಿಕರು ತಮ್ಮ ವೈಯಕ್ತಿಕ ಸ್ವಚ್ಛತೆ, ವಿಶ್ರಾಂತಿಗಾಗಿ ಪರದಾಡುವ ಸನ್ನಿವೇಶವಿದೆ. ಇದನ್ನು ನೀಗಿಸಲು ಈ ಕಂಟೈನರ್ ಸಹಕಾರಿಯಾಗಲಿದೆ. ಇದರಲ್ಲಿ ಕಾರ್ಮಿಕರು ವಿಶ್ರಾಂತಿ ಪಡೆಯುವ ವ್ಯವಸ್ಥೆಯಿದೆ. ಕುಡಿಯುವ ನೀರಿನ ಪೂರೈಕೆ ಇದೆ. ಇದಲ್ಲದೆ ಸ್ನಾನ ಗೃಹ, ಶೌಚಾಲಯ ಇತ್ಯಾದಿ ಇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಪೌರಾಡಳಿತ ಸಂಸ್ಥೆಯಲ್ಲೂ ಈ ವ್ಯವಸ್ಥೆ ಇಲ್ಲ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಅನುಷ್ಠಾನವಾಗುತ್ತಿದೆ. ಪೌರ ಕಾರ್ಮಿಕರ 100 ಹುದ್ದೆಗಳು ಇಲ್ಲಿಗೆ ಮಂಜೂರಾಗಿದ್ದರೂ, ಪ್ರಸ್ತುತ ಕೇವಲ 11 ಹುದ್ದೆಗಳು ಭರ್ತಿಯಾಗಿ ನಗರ ಸ್ವಚ್ಛತೆ, ಗುಡಿಸುವಿಕೆ, ಗಿಡಗಳ ಕಟ್ಟಿಂಗ್ ಮುಂತಾದ ಕೆಲಸಗಳಿಗೆ ತಾತ್ಕಾಲಿಕ ನೆಲೆಯಲ್ಲಿ 44 ಕಾರ್ಮಿಕರು ಕಾರ್ಯನಿರ್ವಹಿಸುತ್ತಿ¨ªಾರೆ. ಈ ವರೆಗೆ ಪೌರಕಾರ್ಮಿಕರು ವಿಶ್ರಾಂತಿಗಾಗಿ ನಗರದೊಳಗಿನ ಮರದಡಿ, ಬಸ್ ನಿಲ್ದಾಣ, ರಸ್ತೆ ಬದಿಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಜಿಲ್ಲೆಯಲ್ಲೇ ಪ್ರಥಮ
ಅಮೃತ ನಿರ್ಮಲ ನಗರ ಯೋಜನೆಯಡಿ ಸರಕಾರದಿಂದ ಮಂಜೂರಾದ ಅನುದಾನದಲ್ಲಿ ದ.ಕ. ಜಿಲ್ಲೆಯಲ್ಲೇ ಪ್ರಥಮ ಯೋಜನೆಯಾಗಿ ಪೌರಬಂಧು ವಿಶ್ರಾಂತಿ ಗೃಹ ಅನುಷ್ಠಾನಗೊಳ್ಳುತ್ತಿದೆ. -ಜೀವಂಧರ್ ಜೈನ್, ಪುತ್ತೂರು ನಗರಸಭೆ ಅಧ್ಯಕ್ಷ.
ಪ್ರಕ್ರಿಯೆ ಪ್ರಗತಿಯಲ್ಲಿ
ಪೌರ ಕಾರ್ಮಿಕರ ವಿಶ್ರಾಂತಿಗಾಗಿ ಪೌರಬಂಧು ವಿಶ್ರಾಂತಿ ಗೃಹ ಎಂಬ ವಿಶಿಷ್ಟ ಕಂಟೈನರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ವಾರದೊಳಗೆ ಬಿಇಒ ಕಚೇರಿ ಸನಿಹದ ಸರಕಾರಿ ಜಾಗದಲ್ಲಿ ಇರಿಸುವ ನಿಟ್ಟಿನಲ್ಲಿ ಪ್ರಯತ್ನ ಪ್ರಗತಿಯಲ್ಲಿದೆ. -ಮಧು ಎಸ್. ಮನೋಹರ್, ಪೌರಾಯುಕ್ತರು, ಪುತ್ತೂರು ನಗರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.