Road Mishap ಆಟೋ ರಿಕ್ಷಾ-ಬೈಕ್ ಢಿಕ್ಕಿ: ಸವಾರ ಗಾಯ
Team Udayavani, Oct 29, 2023, 9:46 PM IST
ಬಂಟ್ವಾಳ: ಮೇರಮಜಲು ಗ್ರಾಮದ ಮಯ್ಯಡಿಯಲ್ಲಿ ಬೈಕ್ ಹಾಗೂ ಆಟೋ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಅ. 27ರಂದು ನಡೆದಿದೆ.
ಉಳಾಯಿಬೆಟ್ಟು ನಿವಾಸಿ ಬೈಕ್ ಸವಾರ ಜಿತೇಶ್ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಆಟೋ ರಿಕ್ಷಾ ಚಾಲಕ ಚಂದ್ರಹಾಸ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೈಕಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೂರಿ ಇರಿತ ಪ್ರಕರಣ: ಮೂವರ ಬಂಧನ
ಬಂಟ್ವಾಳ: ಶಾರದೋತ್ಸವದ ಹುಲಿವೇಷದ ಬ್ಯಾನರ್ ತೆರವು ಮಾಡುವ ವಿಚಾರವಾಗಿ ನಡೆದ ಜಗಳದಲ್ಲಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಾಣೆಮಂಗಳೂರು ನಿವಾಸಿ ಶೋಧನ್, ನರಿಕೊಂಬು ನಿವಾಸಿ ಪ್ರಕಾಶ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಘಟನೆಯ ಕುರಿತು ಬಂಟ್ವಾಳ ನಿವಾಸಿ ಸಂದೀಪ್ ಪೊಲೀಸರಿಗೆ ದೂರು ನೀಡಿದ್ದರು.
ಸಜೀಪಮೂಡ: ಬೈಕ್-ಸ್ಕೂಟರ್ ಢಿಕ್ಕಿ
ಬಂಟ್ವಾಳ: ಸಜೀಪಮೂಡ ಗ್ರಾಮದ ಸುಭಾಷ್‌ನಗರ ಗುರುಮಂದಿರ ಬಳಿ ಬೈಕ್ ಹಾಗೂ ಸ್ಕೂಟರ್ ಮುಖಾಮುಖಿಯಾಗಿ ಢಿಕ್ಕಿ ಹೊಡೆದು ಮೂವರು ಸವಾರರು ಗಾಯಗೊಂಡ ಘಟನೆ ಅ. 27ರಂದು ನಡೆದಿದೆ.
ಬೈಕ್ ಸವಾರ ತುಂಬೆ ನಿವಾಸಿ ದಿನೇಶ್ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಸ್ಕೂಟರ್ ಸವಾರರಾದ ಕಬೀರ್ ಹಾಗೂ ಬದ್ರುದ್ದೀನ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸವಾರ ಕಬೀರ್ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬೈಕಿಗೆ ಢಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡಿಕೆ ಕಳವು: ಪ್ರಕರಣ ದಾಖಲು
ಬಂಟ್ವಾಳ: ಸರಪಾಡಿಯಲ್ಲಿ ತಂಡವೊಂದು ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು ನಾಲ್ಕೈದು ಕ್ವಿಂಟಾಲ್ ಅಡಿಕೆ ಕಳವು ಮಾಡಿರುವ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ತೋಟದ ಮಾಲಕ ವಸಂತ ಸಾಲಿಯಾನ್ ಅವರು ದೂರು ನೀಡಿದ್ದು, ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ತೋಟಕ್ಕೆ ಆರೋಪಿ ಪುಷ್ಪಲತಾ ಹಾಗೂ ಇತರ ಕೆಲಸಗಾರರು ಅಕ್ರಮ ಪ್ರವೇಶಗೈದು ಅಡಿಕೆ ಕಳವು ಮಾಡಿದ್ದಾರೆ. ಇದರಿಂದ ತನಗೆ 2.5 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.