ಗಂಗಾಕಲ್ಯಾಣಕ್ಕೂ 8 ಸಾವಿರ ರೂ.!
Team Udayavani, Jun 29, 2018, 2:26 PM IST
ಪುತ್ತೂರು: ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ವೆಲ್ ಕೊರೆಸಿದರೆ ಸಂಪೂರ್ಣ ಉಚಿತ. ಆದರೆ ಫಲಾನುಭವಿಗಳಿಂದ 8 ಸಾವಿರ ರೂ. ಪಡೆದುಕೊಳ್ಳುತ್ತಾರೆ ಎಂಬ ಆರೋಪ ವ್ಯಕ್ತವಾಗಿದೆ. ಅಧ್ಯಕ್ಷೆ ಭವಾನಿ ಚಿದಾನಂದ್ ಅಧ್ಯಕ್ಷತೆಯಲ್ಲಿ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಪ್ರಸ್ತಾವಿಸಿದರು.
ಹಿಂದುಳಿದ ಅಭಿವೃದ್ಧಿ ನಿಗಮದ ಅಧಿಕಾರಿ ಶಿವರಾಮ್ ಇಲಾಖಾ ಮಾಹಿತಿ ನೀಡುತ್ತಾ, 2016-17 ಮತ್ತು 17-18ನೇ ಸಾಲಿನಲ್ಲಿ ಪರಿಶಿಷ್ಟ ವರ್ಗಕ್ಕೆ ಒಟ್ಟು 92 ಬೋರ್ವೆಲ್ ಕೊರೆಸಲಾಗಿದೆ ಎಂದರು. ಇಲ್ಲಿವರೆಗೆ ಎಷ್ಟು ಮಂದಿ ಫಲಾನುಭವಿಗಳಿಗೆ ಬೋರ್ವೆಲ್ ನೀಡಿದೆ ಹಾಗೂ ಎಷ್ಟು ಮಂದಿಗೆ ಬಾಕಿ ಇದೆ ಎಂಬ ಪಟ್ಟಿ ನೀಡುವಂತೆ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್ ಕೇಳಿಕೊಂಡರು. ತಾ.ಪಂ. ಸದಸ್ಯೆ ತಾರಾ ತಿಮ್ಮಪ್ಪ ಪೂಜಾರಿ ಮಾತನಾಡಿ, ಬೋರ್ವೆಲ್ಸ್ನವರು 8 ಸಾವಿರ ರೂ. ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಧ್ವನಿಗೂಡಿಸಿದ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆಸುವ ಬೋರ್ ವೆಲ್ ಉಚಿತವಾಗಿದ್ದರೂ ಹಣದ ಬೇಡಿಕೆ ಇಡುತ್ತಿದ್ದಾರೆ. ಕೊಡದಿದ್ದರೆ ನಿಮ್ಮ ಮನೆಗೆ ಹೋಗುವ ರಸ್ತೆ ಸರಿಯಿಲ್ಲ ಎಂಬ ನೆಪ ಹೇಳಿ ವಾಪಸ್ ಹೋಗುತ್ತಾರೆ. ಗಂಗಾ ಕಲ್ಯಾಣ ಯೋಜನೆ ದುಡ್ಡು ಮಾಡುವ ಸ್ಕಿಂ ಆಗಿದೆ ಎಂದರು.
ತಾ.ಪಂ. ಇಒ ಅವರು ಈ ಬಗ್ಗೆ ಪ್ರಶ್ನಿಸಿದಾಗ, ಯಾವುದೇ ಹಣದ ವ್ಯವಹಾರ ನಡೆದಿಲ್ಲ. ಬೋರ್ವೆಲ್ ಕೊರೆಸುವುದು
ಏಜೆನ್ಸಿಯವರು. ನಮಗೂ ಅವರಿಗೂ ಯಾವುದೇ ಸಂಪರ್ಕವಿಲ್ಲ. ಈ ಕುರಿತು ತನಿಖೆ ನಡೆಸಲಾಗುವುದು ಎಂದರು.
ಅಧ್ಯಕ್ಷರು ಬಲಿಪಶು
ತಾ.ಪಂ. ಸದಸ್ಯೆ ಉಷಾ ಅಂಚನ್ ಮಾತನಾಡಿ, ಪೈಪ್ ಕಾಂಪೋಸ್ಟ್ ಪೈಪ್ ಹಗರಣದಲ್ಲಿ ಗ್ರಾ.ಪಂ. ಅಧ್ಯಕ್ಷರು ಬಲಿಪಶು ಆಗುತ್ತಿದ್ದಾರೆ. ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ಕೇಳಿಕೊಂಡರು. ಪ್ರತಿಕ್ರಿಯಿಸಿದ ಇಒ ಜಗದೀಶ್, ಪ್ರಕರಣ ಎಸಿಬಿ ತನಿಖೆಯಲ್ಲಿದೆ. ಜಾಸ್ತಿ ಏನೂ ಹೇಳಲು ಸಾಧ್ಯವಿಲ್ಲ ಎಂದರು. ಇದಕ್ಕೆ ಸಮಾಧಾನ ಆಗದ ಉಷಾ ಅಂಚನ್, ಹೆಚ್ಚಿನ ವಿವರ ನೀಡಲು ತಿಳಿಸಿದರು. ಆಗಲೂ, ತನಿಖೆಯಲ್ಲಿರುವ ಪ್ರಕರಣದ ಬಗ್ಗೆ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದರು.
ಖಾಯಂ ವೈದ್ಯ
ಡಾ| ದೀಪಕ್ ರೈ ಅವರು ಪಾಲ್ತಾಡಿ ಆರೋಗ್ಯ ಕೇಂದ್ರದ ಜತೆಗೆ ಮೂರು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ ಆಗುತ್ತಿಲ್ಲ ಎಂದು ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ತಿಳಿಸಿದರು. ಉತ್ತರಿಸಿದ ತಾ| ಆರೋಗ್ಯಾಧಿಕಾರಿ ಡಾ| ಅಶೋಕ್, 3ಆಸ್ಪತ್ರೆಗಳ ಆರ್ಥಿಕ ವಿಷಯಕ್ಕೆ ಸಂಬಂಧಪಟ್ಟಂತೆ ಡಾ| ದೀಪಕ್ ರೈ ಅವರನ್ನು ನಿಯೋಜಿಸಲಾಗಿದೆ. ಅವರಿಗೆ ಸಹಿ ಹಾಕುವ ಕೆಲಸ ಮಾತ್ರ. ಪಾಲ್ತಾಡಿಗೆ ಮಾತ್ರ ಅವರು ಖಾಯಂ ವೈದ್ಯರು ಎಂದರು. ಸಮಗ್ರ ಕೃಷಿ ಅಭಿಯಾನ ಜು. 7ರಿಂದ 15ರ ವರೆಗೆ ಎಲ್ಲ ಗ್ರಾ.ಪಂ.ಗಳಲ್ಲೂ ನಡೆಯಲಿದೆ. ಈ ಬಗ್ಗೆ ಶಾಸಕರಿಂದ ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಕೃಷಿ ನಿರ್ದೇಶಕ ನಹೀಂ ಹುಸೈನ್ ತಿಳಿಸಿದರು. ಸದಸ್ಯೆ ಉಷಾ ಅಂಚನ್ ಮಾತನಾಡಿ, ಉತ್ತಮ ಕಾರ್ಯಕ್ರಮ. ಆದರೆ ಇದು ಕಾಟಾಚಾರಕ್ಕೆ ಆಗಬಾರದು. ಕೃಷಿಕರನ್ನು ಗುರುತಿಸಿ, ಅವರಿಗೆ ಮಾಹಿತಿ ಸಿಗುವಂತೆ ಆಗಬೇಕು ಎಂದರು. ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಜಿ.ಪಂ. ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತ ಹೇಮನಾಥ ಶೆಟ್ಟಿ, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ತಹಶೀಲ್ದಾರ್ ಅನಂತ ಶಂಕರ್, ತಾ.ಪಂ.ನ ನವೀನ್ ಭಂಡಾರಿ ಉಪಸ್ಥಿತರಿದ್ದರು.
ತಹಶೀಲ್ದಾರ್ ಬೇಕು
ಕಡಬದಲ್ಲಿ ತಹಶೀಲ್ದಾರ್ ಇಲ್ಲ. ನಾಲ್ಕು ತಿಂಗಳಿನಿಂದ ಆರ್ಟಿಸಿ ವಿತರಣೆ ಆಗುತ್ತಿಲ್ಲ. ಹಕ್ಕುಪತ್ರ ನೀಡಿರುವ ಮನೆಗಳಿಗೆ ಆರ್ ಟಿಸಿಯನ್ನು ತಕ್ಷಣ ನೀಡುವ ಕೆಲಸ ಆಗಬೇಕಿದೆ. ಆದ್ದರಿಂದ ತಕ್ಷಣ ವಿಶೇಷ ತಹಶೀಲ್ದಾರ್ ನೇಮಕ ಆಗಬೇಕು ಎಂದು ಸದಸ್ಯೆ ಕುಸುಮಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.