ಶ್ರೀಗಂಧ ಕಳವು ಪ್ರಕರಣ: ಆರೋಪಿಗಳ ಸುಳಿವಿಲ್ಲ
Team Udayavani, Jul 15, 2019, 9:29 AM IST
ಬೆಳ್ತಂಗಡಿ: ಅರಣ್ಯ ಇಲಾಖೆ ಗೋದಾಮಿನ ಬೀಗ ಮುರಿದು 344 ಕೆ.ಜಿ. ತೂಕದ 8.60 ಲ. ರೂ. ಮೌಲ್ಯದ ಶ್ರೀಗಂಧದ ತುಂಡು ಕಳವು ಮಾಡಿರುವ ಪ್ರಕರಣದ ತನಿಖೆ ಚುರುಕಾಗಿದೆ. ಆದರೆ ಇದುವರೆಗೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ.
ಭದ್ರತೆಯಲ್ಲಿರಿಸಿದ್ದ ಗೋದಾಮಿಗೆ ಕನ್ನ ಹಾಕಿರುವವರು ಹಲವು ದಿನಗಳಿಂದ ಹೊಂಚು ಹಾಕಿ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
1998ರಲ್ಲೂ ಕಳವಾಗಿತು ಅಪಾರ ಶ್ರೀಗಂಧ
ಈ ಹಿಂದೆಯೂ ಇಲ್ಲಿಂದ ಕಳವು ನಡೆ ದಿತ್ತು. ಶ್ರೀಗಂಧ ಜಾಲ ಸಕ್ರಿಯವಾಗಿದ್ದ 1998ರ ಕಾಲ ಘಟ್ಟದಲ್ಲಿ ಸರಿ ಸುಮಾರು 2 ಟನ್ ಗೂ ಅಧಿಕ ಶ್ರೀಗಂಧ ಕಳವಾಗಿತ್ತು. ಆ ಬಳಿ ಕವೂ ಕಳವು ನಡೆದಿದ್ದು, ಈಗ ನಡೆದಿರುವುದು 5ನೇ ಪ್ರಕರಣ ಎನ್ನಲಾಗಿದೆ. ಆದರೆ ಯಾವ ಪ್ರಕರಣಕ್ಕೂ ಸಂಬಂಧಿಸಿ ಆರೋಪಿಗಳ ಪತ್ತೆಯಾಗಿರಲಿಲ್ಲ. ಕಳವಾಗಿದ್ದ ಗಂಧದ ತುಂಡುಗಳಲ್ಲಿ ಕೆಲವನ್ನು ಪತ್ತೆ ಹಚ್ಚಲಾಗಿತ್ತು. ಅನುಮಾನಾಸ್ಪದವಾಗಿ ಕಂಡು ಬಂದಿದ್ದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಪ್ರಕರಣ ಹಾಗಾಗದಿರಲಿ ಎಂಬುದು ಸಾರ್ವಜನಿಕರ ಆಶಯ.
ತನಿಖೆಗೆ ಸೂಚಿಸಲಾಗಿದೆ: ಅರಣ್ಯಾಧಿಕಾರಿ
ಪ್ರಕರಣದ ತನಿಖೆ ಕುರಿತು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಗೋದಾಮಿನಲ್ಲಿ 403 ಕೆ.ಜಿ. ಇತ್ತು. ಸದ್ಯ ಕಳವಾಗಿರುವುದು ಹೊರತುಪಡಿಸಿ ಇನ್ನು 55 ಕೆ.ಜಿ.ಯಷ್ಟು ಶ್ರೀಗಂಧ ಗೋದಾಮಿನಲ್ಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿ¨ªರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.