ಮರಳು ಚೀಲದ ರಕ್ಷಣೆ; ಸಂಪರ್ಕ ಕಡಿತ ಭೀತಿ
ಕಲ್ಮಕಾರು: ಹಾನಿಯಾದ ಸೇತುವೆಗೆ ಶಾಶ್ವತ ಪರಿಹಾರವಿಲ್ಲ
Team Udayavani, Jun 26, 2023, 3:46 PM IST
ಸುಬ್ರಹ್ಮಣ್ಯ: ಕಳೆದ ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಹಾನಿಗೊಳಗಾಗಿದ್ದ ಕಲ್ಮಕಾ ರಿನ ಸೇತುವೆಗೆ ಅಂದು ನಡೆಸಿದ ತಾತ್ಕಾಲಿಕ ಪರಿಹಾರ ಹೊರತು ಶಾಶ್ವತ ಪರಿಹಾರ ಕಾಮಗಾರಿಯೇ ನಡೆದಿಲ್ಲ.
ಕಳೆದ ವರ್ಷ ಮಡಿಕೇರಿ ಭಾಗದಲ್ಲಿ ಭಾರೀ ಮಳೆ ಸಂಭವಿಸಿದ ಪರಿಣಾಮ ಕಲ್ಮಕಾರು ಹೊಳೆಯಲ್ಲಿ ನೆರೆ ಬಂದು ಕಲ್ಮಕಾರಿನಿಂದ ಗುಳಿಕಾನ, ಬೈಲು ಭಾಗಕ್ಕೆ ಸಂಪರ್ಕಿಸುವ ಸಂಪಡ್ಕ ಸೇತುವೆಗೆ ಹಾನಿ ಗೊಳಗಾಗಿತ್ತು. ಸೇತುವೆಯ ಒಂದು ಭಾಗ ದಲ್ಲಿ ಹಾಕಿದ್ದ ಮಣ್ಣಿನ ತಡೆಗೋಡೆ ನೀರು ಪಾಲಾಗಿ ಸಂಪರ್ಕ ಕಡಿತಗೊಂಡಿತ್ತು.
ತಾತ್ಕಾಲಿಕ ದುರಸ್ತಿ ಕಾರ್ಯ
ಈ ಸೇತುವೆ ಮೂಲಕ ಗುಳಿಕಾನ, ಬೈಲು ಭಾಗದ ಸುಮಾರು 150ಕ್ಕೂ ಅಧಿಕ ಮನೆಗಳು ಸಂಪರ್ಕ ಪಡೆ ಯುತ್ತಿವೆ. ಅಂದಿನ ಹಾನಿಗೆ ಎರಡು ಮೋರಿ ಅಳವಡಿಸಿ ತಾತ್ಕಾಲಿಕವಾಗಿ ಮರಳಿನ ಗೋಣಿಚೀಲಗಳನ್ನು ಜೋಡಿಸಿ ಸೇತುವೆಗೆ ರಸ್ತೆ ಸಂಪರ್ಕ ಕಲ್ಪಿಸಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಶಾಶ್ವತ ಪರಿಹಾರ ಮಾಡುವ ಬಗ್ಗೆ ಅಂದು ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಘಟನೆ ನಡೆದ ಬಳಿಕ ತಾತ್ಕಾಲಿಕ ಪರಿಹಾರ ನಡೆದಿದೆಯೇ ವಿನಃ ಶಾಶ್ವತ ಪರಿಹಾರ ನಡೆಯಲೇ ಇಲ್ಲ. ಅಳವಡಿಸಿರುವ ಮರಳಿನ ಚೀಲಗಳು ಹರಿದು ಹೋಗಲೂ ಆರಂಭವಾಗಿದೆ.
ಕಳೆದ ವರ್ಷ ಘಟನೆ ನಡೆದ ಬಳಿಕ ಸಚಿವರು, ಜಿಲ್ಲೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರ ಅಹವಾಲು ಸ್ವೀಕರಿಸಿ ಹೋಗಿದ್ದರು. ಆದರೆ ಬಳಿಕ ಕೆಲವೆಡೆ ಸಣ್ಣ ಮೊತ್ತದ ಕೆಲಸ ನಡೆದಿದ್ದರೆ, ಇಂತಹ ಕಡೆಗಳಲ್ಲಿ ಶಾಶ್ವತ ಪರಿಹಾರ ಕಾಮಗಾರಿ ನಡೆಯಲೇ ಇಲ್ಲ.
ನಿರ್ಲಕ್ಷ್ಯ ವಹಿಸಿದ ಸಂಬಂಧಿಸಿದವರ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿ ಸುತ್ತಿದ್ದಾರೆ. ಇಲ್ಲಿಗೆ ಹೊಸ ಸೇತುವೆ ಜತೆಗೆ ಶಾಶ್ವತ ಪರಿಹಾರ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
MUST WATCH
ಹೊಸ ಸೇರ್ಪಡೆ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.