ಸಂತ ಶಿಶುನಾಳ ಶರೀಫರ ಗೀತೆಗಳ ಗಾಯನ, ವ್ಯಾಖ್ಯಾನ
Team Udayavani, Sep 17, 2018, 3:37 PM IST
ನಗರ: ಸಂತ ಶಿಶುನಾಳ ಶರೀಫರ 200ನೇ ವರ್ಷಾಚರಣೆ ಅಂಗವಾಗಿ ಶಿಶುನಾಳ ಶರೀಫರ ಗೀತೆಗಳ ಗಾಯನ ಹಾಗೂ ವ್ಯಾಖ್ಯಾನ ಕಾರ್ಯಕ್ರಮ ಸೆ. 14ರಂದು ಸಂಜೆ ಪುತ್ತೂರಿನ ಸತ್ಯ ಸಾಯಿಸೇವಾ ಮಂದಿರದಲ್ಲಿ ನಡೆಯಿತು.
ಶ್ರೀ ಸತ್ಯಸಾಯಿ ಸೇವಾ ಸಮಿತಿ ಹಾಗೂ ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್ ಸಹಯೋಗದಲ್ಲಿ ಸಾಂಸ್ಕೃತಿಕ ಸಂಜೆ- 2018 ಕಾರ್ಯಕ್ರಮ ನಡೆಯುತ್ತಿದೆ. ಪ್ರಥಮ ದಿನವಾದ ಶುಕ್ರವಾರ ನಡೆದ ಶಿಶುನಾಳ ಶರೀಫರ ಗೀತೆಗಳು ಗಾಯನ ಮತ್ತು ವ್ಯಾಖ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ರಾಂತ ಉಪನ್ಯಾಸಕ ಪ್ರೊ| ವಿ.ಬಿ. ಅರ್ತಿಕಜೆ ಮಾತನಾಡಿ, ತತ್ತ್ವಪದಗಳು, ಸಾಹಿತ್ಯಗಳಲ್ಲಿ ಅನೇಕ ವಿಧಗಳಿವೆ. ಅದೆಲ್ಲವನ್ನೂ ಆಸ್ವಾದಿಸುವ ಮನಃಸ್ಥಿತಿ ಇರಬೇಕು. ಶಿಶುನಾಳ ಶರೀಫರ ತತ್ತ್ವಪದಗಳನ್ನು ಅರ್ಥೈಸಲು, ಅದರೊಳಗಿರುವ ತಿರುಳನ್ನು ಹುಡುಕಿ ಆಸ್ವಾ ದಿಸಲು ಅನುಭವಿ ವ್ಯಾಖ್ಯಾನಗಾರರ ಅಗತ್ಯವಿದೆ. ಕಾವ್ಯದ ಒಳತಿರುಳನ್ನು ವ್ಯಾಖ್ಯಾನಕಾರರು ಅರ್ಥೈಸುತ್ತಾರೆ. ಶ್ರವಣ, ಮನನಕ್ಕಿಂತ ವ್ಯಾಖ್ಯಾನ ಬಹಳ ಮುಖ್ಯ ಎಂದರು.
ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ| ಶ್ರೀಶ ಕುಮಾರ್ ಎಂ.ಕೆ. ಅವರು ಗಾಯನದ ವ್ಯಾಖ್ಯಾನ ಮಾಡಿದರು. ಗಾಯಕರಾದ ಪಾಂಡುರಂಗ ನಾಯಕ್ ಮತ್ತು ಅವರ ಪುತ್ರಿ ರಾಧಿಕಾ ನಾಯಕ್ ಹಾಡಿದರು. ಪಕ್ಕವಾದ್ಯದಲ್ಲಿ ವಿಶ್ವನಾಥ ನಾಯಕ್, ಹಾರ್ಮೋನಿಯಂನಲ್ಲಿ ಸುರೇಶ್ ಪೈ ಸಾಥ್ ನೀಡಿದರು. ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕ ಪ್ರಸನ್ನ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಅಧ್ಯಕ್ಷ ಡಾ| ಸತ್ಯಸುಂದರ್ ರಾವ್ ಸ್ವಾಗತಿಸಿ, ಪದ್ಮನಾಭ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.