ಕಲಿಕೆಯ ಮನೋರಥ ಪೂರೈಸಿದ ಶಿಕ್ಷಣ ಕಾಶಿಯ ಭಗೀರಥ ಸವಣೂರು ಕೆ. ಸೀತಾರಾಮ ರೈ
75ನೇ ಹುಟ್ಟು ಹಬ್ಬದ ಸಂಭ್ರಮ
Team Udayavani, Jun 9, 2022, 12:05 AM IST
ಇಂದು ಸವಣೂರ ಶಿಲ್ಪಿ , ಸಹಕಾರಿ ರತ್ನ ಕೆ ಸೀತಾರಾಮ ರೈ ಸವಣೂರು ಅವರಿಗೆ ಜನ್ಮದಿನದ ಅಮೃತ ಮಹೋತ್ಸವದ ಸಡಗರದ ಸಂಭ್ರಮ . ಈ ದಿನದಂದು ಸಮಸ್ತ ನಾಗರಿಕರ ಪರವಾಗಿ ಸಾರ್ವಜನಿಕ ಸಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೆರವೇರಿಸುವುದರೊಂದಿಗೆ ಅಮೃತ ರತ್ನ ಕಾರ್ಯಕ್ರಮ ಸವಣೂರಿನಲ್ಲಿ ನಡೆಯಲಿದೆ 75 ಸಂವತ್ಸರಗಳನ್ನು ಪೂರೈಸಿದ ತನ್ನ ಊರಿನ ಅಭಿವೃದ್ಧಿಯ ಪ್ರವರ್ತಕ ವಿದ್ಯಾಚೇತನ , ಸಹಕಾರಿ ಸಮರ್ಥನ ಅಮೃತ ಮಹೋತ್ಸವಕ್ಕೆ ಊರಿಗೆ ಊರೇ ಸಂಭ್ರಮಿಸಲು ಸಜ್ಜಾಗಿದೆ.
ಸವಣೂರು ಸೀತಾರಾಮ ರೈ ಅವರನ್ನು ಕರಾವಳಿಯಲ್ಲಿ ಸವಣೂರಿನ ಚರಿತ್ರೆಗೆ ಸುವರ್ಣ ಲೇಪನ ನೀಡಿದ ಗ್ರಾಮಲಿ ಎಂದು ಕರೆದರೂ ಕಪ್ಪಾಗಲಾರದು . ಸಹಕಾರ ರಂಗದಿಂದ ತೊಡಗಿ ಶಿಕ್ಷಣ , ಧಾರ್ಮಿಕ , ಸಾಮಾಜಿಕ ರಂಗದಲ್ಲೂ ಎಲ್ಲೆಮೀರಿ ದುಡಿಯುತ್ತಿರುವವರು ಸವಣೂರು ಸೀತಾರಾಮ ರೈಗಳು ಧೀಮಂತ ಸಾಧಕರ ಸಾಲಿನಲ್ಲಿ ರೈಗಳು ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಾರೆ ತನ್ನ ಊರು ಸವಣೂರನ್ನು ಶಿಕ್ಷಣದ ಪುಣ್ಯಸ್ಥಳವಾಗಿ ರೂಪಿಸಲು ಪಣತೊಟ್ಟು ಸಾಧಿಸಿದವರು.
ಸೀತಾರಾಮ ರೈಗಳು ಶ್ರಮ ಜೀವನದಿಂದ ಬಹು ಕಷ್ಟಪಟ್ಟು ಬದುಕಿನಲ್ಲಿ ಮೇಲೆ ಬಂದವರು , ತಾನು ಸಾಗಿ ಬಂದ ಹಾದಿಯನ್ನು ಮರೆಯದೆ ತನ್ನ ಬಳಿಗೆ ಸಹಾಯ ಕೇಳಿಕೊಂಡು ಬಂದವರಿಗೆಲ್ಲ ಇಲ್ಲ ಎನ್ನದೆ ಔದಾರ್ಯತೆ ಮೆರೆಯುತ್ತಿದ್ದವರು ಹಿರಿಯರಾದ ಅವರ ತಂದೆ ಇದನ್ನೆಲ್ಲ ನೋಡುತ್ತಿದ್ದರು . ತನ್ನ ದಾನ ಧರ್ಮ ಪ್ರವೃತ್ತಿಯಿಂದ ಅವರಿಗೆ ಋಷಿಯಾಗುತ್ತದೆಂದು ಮಗ ಭಾವಿಸಿದ್ದರೆ ಆರು ವರ್ಷ ಬರ್ಮಾದಲ್ಲಿ ಯೋಧನಾಗಿ ದುಡಿದು ಬಳಿಕ ಇಪ್ಪತ್ತೆಂಟು ವರ್ಷ ಶಿಕ್ಷಕನಾಗಿ ವಿದ್ಯಾದಾನ ಮಾಡಿದ್ದ ಆ ಹಿರಿಯರು ಹೇಳಿದ ಮಾತಾದ ನಿಜವಾದ ಸಮಾಜ ಸೇವೆ ಧನ ದಾನವಲ್ಲ ಕಲಿಕೆಯ ಮನೋರಥವಿರುವವರಿಗೆ ಅದರ ಅವಕಾಶ ಕಲಿಸುವ ಭಗೀರಥ ಪ್ರಯತ್ನ ‘ ಎಂದರೆ ವಿದ್ಯಾದಾನದಿಂದ ಮಾತ್ರ ಇದು ಸಾಧ್ಯ ಎಂದಿದ್ದರು.
ಎಲ್ಲರಿಗೂ ಸಮಾನ ಶಿಕ್ಷಣ ದೊರಕಿ ಅವರು ಸಂತ ಕಾಲಿನ ಮೇಲೆ ನಿಲ್ಲಲು ನೆರವಾಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ . ಅಂತಹ ಶಾಲೆಗಳನ್ನು ಆರಂಭಿಸಿ ಬದುಕಿನಲ್ಲಿ ಉನ್ನತಿಗೇರಬೇಕು ಎಂಬುದು ಸೀತಾರಾಮ ರೈಗಳಿಗೆ ಅವರ ತಂದೆ ಹೇಳಿದ ಕಿವಿಮಾತು . ಈ ಮಾತಿನಿಂದ ತಮ್ಮ ಬದುಕಿನ ಅವರು ಭಾಷ್ಯವನ್ನೇ ಬದಲಾಯಿಸಿಬಿಟ್ಟರು . ಕುಗ್ರಾಮವಾಗಿದ್ದ ಸವಣೂರನ್ನು ಶಿಕ್ಷಣ ಕಾಶಿಯಾಗಿ ಪರಿವರ್ತಿಸಿದವರು ಸವಣೂರು ಸೀತಾರಾಮ ರೈಗಳು . ಕಲಿಕೆಯ ಅವಕಾಶಗಳ ಹೊಂಬಟ್ಟಲನ್ನಾಗಿ ಅವರು ಪುಟ್ಟ ಊರಿಗೆ ನೀಡಿದ ಕಾಯಕಲ್ಪ ಊರಿನ ಹಿರಿಮೆಗೊಂದು ಗರಿ ಸೇರಿಸಿತು ತನ್ನ ತಂದೆಯ ನೆನಪಿಗಾಗಿ 2002 ರಲ್ಲಿ ಸ್ವತಃ ಆರಂಭಿಸಿದ ವಿದ್ಯಾರತಿ ಶಿಕ್ಷಣ ಸಂಸ್ಥೆ ಹಂತಹಂತವಾಗಿ ಮೇಲಕ್ಕೆ ಬಂದದ್ದಲ್ಲ ಒಂದೇ ಸಲ ಪ್ರೌಢ ಶಿಕ್ಷಣ – ಪದವಿಪೂರ್ವ ಶಿಕ್ಷಣದ ವರೆಗೆ ತರಗತಿಗಳನ್ನು ಆರಂಭಿಸಿ ಶಿಕ್ಷಣ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿಯನ್ನೇ ಮಾಡಿತು ಸವಣೂರಿನ ಭವಿಷ್ಯದಲ್ಲಿ ಹೊಸ ಶಕೆಯನ್ನೇ ಸೃಷ್ಟಿಸಿತು .
ಒಂದೇ ಸಲ ಪೂರ್ವ ಪ್ರಾಥಮಿಕದಿಂದ ತೊಡಗಿ ಪದವಿಪೂರ್ವ ಶಿಕ್ಷಣದ ತನಕ ತರಗತಿಗಳನ್ನು ಆರಂಭಿಸಿದ್ದು ಸೀತಾರಾಮ ರೈಗಳ ಛಲ ಪ್ರವೃತ್ತಿಗೆ ದ್ಯೋತಕ ವಿದ್ಯೆ ಕಲಿಯಲು ದೂರದ ವಿದ್ಯಾಕೇಂದ್ರಗಳಿಗೆ ಹೋಗಲು ಅನನುಕೂಲ ಹೊಂದಿದ್ದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳ ಪಾಲಿಗೆ ಸದವಕಾಶದ ಕಾಮಧೇನುವನ್ನೇ ಧರೆಗಿಳಿಸಿದರು . ಅವರ ಕೊಡುಗೆ ಆ ಭಾಗದ ಶಿಕ್ಷಣಾರ್ಥಿಗಳ ಭವಿಷ್ಯದ ಬಾಗಿಲನ್ನೇ ತೆರೆಯಿತು. ಇಂದು ಅವರು ಹಾಲುಣಿಸಿ , ಮಡಿಲಲ್ಲಿಟ್ಟು ಜೋಗುಳ ಹಾಡಿದ ಈ ವಿದ್ಯಾ ಸಂಸ್ಥೆ ರಾಜ್ಯ ದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿಯೂ ಕೀರ್ತಿಯ ಗೌರೀಶಂಕರವೇರಿ ಬೆಳಗುವ ಸೂರ್ಯನ ತಂಪು ಕಿರಣಗಳ ಹಾಗೆ ಬೆಳಕು ಬೀರುವಂತಾದದ್ದು ಒಂದೇ ಅಲ್ಲ ಅಂತಾರಾಷ್ಟ್ರೀಯವಾಗಿಯೂ ಪ್ರಖರ ತಾರೆಯಾಗಿ ಮಿನುಗುತ್ತಿದೆ .
ಶೈಕ್ಷಣಿಕ ಕ್ಷೇತ್ರದಲ್ಲಿ ಸವಣೂರಿನಲ್ಲಿ ರೈಗಳದು ದಾಪುಗಾಲು ಒಂದು ಕೆಲಸಕ್ಕೆ ಕೈಯಿಕ್ಕಿದರೆ ಹಿಂತಿರುಗಿ ನೋಡುವ ಜಾಯಮಾನ ಅವರದಲ್ಲ 1984 ರಲ್ಲಿ ಸವಣೂರಿನ ಸರಕಾರಿ ಪ್ರೌಢಶಾಲೆ ಆರಂಭ ಆಗಬೇಕು ಎಂಬ ಜನದನಿಯ ನಾಯಕತ್ವ ಅವರದೇ ಆಗಿತ್ತು . ಈ ಒತ್ತಾಯದ ಕಾವು ಎಷ್ಟು ಪ್ರಬಲವಾಗಿತ್ತೆಂದರೆ ಸರಕಾರ ಸವಣೂರಿನ ಮಕ್ಕಳು ಪ್ರೌಢಶಾಲೆ ಮೆಟ್ಟಿಲೇರಲು ಸಾಧ್ಯವಾಗದೆ ಒದ್ದಾಡುತ್ತಿರುವ ಪರಿಸ್ಥಿತಿಗೆ ಶಾಶ್ವತವಾಗಿ ಇತಿಶ್ರೀ ಹಾಡಿತು 1994 ರಲ್ಲಿ ಸವಣೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ‘ ಶಾರದಾರಂಗಮಂದಿರ , ನಿರ್ಮಿಸಿ ಕೊಟ್ಟು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೊಂದು ಸುಗಮ ಅವಕಾಶ ಒದಗಿಸಿದ ಹೆಗ್ಗಳಿಕೆ ಅವರದೇ , ಶಾಲೆಗಳಿಗೆ ಆದಾಯ ಮೂಲವಾಗಿರುವ ಕೃಷಿ ತೋಟ ನಿರ್ಮಾಣ ಮಾಡುವಲ್ಲಿಯೂ ರೈಗಳು ನೀಡಿದ ಮಾರ್ಗದರ್ಶನ ಬಹು ದೊಡ್ಡದು.
ಸವಣೂರಿನಲ್ಲಿ ಪದವಿಪೂರ್ವ ವಿದ್ಯಾಲಯ ಆರಂಭಿಸಲು ಸರಕಾರದ ಶಿಕ್ಷಣ ಇಲಾಖೆ ಹಸಿರು ನಿಶಾನೆ ತೋರಿಸಿತ್ತು ಆದರೆ ಕಟ್ಟಡಗಳೇ ಇಲ್ಲದೆ ಅದರ ಆರಂಭವಾಗುವುದಾದರೂ ಹೇಗೆ ಸಾಧ್ಯ , ಸೀತಾರಾಮ ರೈಗಳ ಪರಿಶ್ರಮದ ದುಡಿಮೆಯಿಂದಲೇ ಕಟ್ಟಡಗಳಿಗೂ ವ್ಯವಸ್ಥೆಯಾಗಿ ದೂರದ ಪುತ್ತೂರಿಗೆ ಪದವಿಪೂರ್ವ ಶಿಕ್ಷಣಕ್ಕಾಗಿ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಮನೆಯಂಗಳದಲ್ಲೇ ಕಲಿಕೆಯ ಅವಕಾಶ ಒದಗಿತು . ಸವಣೂರಿನ ಸರಕಾರಿ ಪದವಿಪೂರ್ವ ಕಾಲೇಜಿನ ಗೆಟಿವ ಸೀತಾರಾಮ ರೈಗಳು ಕೊಡುಗೆಯಾಗಿ ನೀಡಿ ಭದ್ರತೆಯೊದಗಿಸಿದ್ದರು.
ಹದಿಮೂರು ವರ್ಷಗಳ ಕಾಲ ಸೀತಾರಾಮ ರೈಗಳು ರಾಮಕೃಷ್ಣ ಪ್ರೌಢಶಾಲೆಗೆ ಸಂಚಾಲಕರಾಗಿ ಶಾಲೆಯ ಅಭಿವೃದ್ಧಿಯಲ್ಲಿ ವಹಿಸಿದ ಪಾತ್ರವೂ ಅವಿಸ್ಮರಣೀಯ.ಶಾಲೆಗೆ ಸುಂದರ ನೂತನ ಕಟ್ಟಡದ ರಚನೆ ಅವರ ಪ್ರಯತ್ನದ ಫಲವಾಗಿತ್ತು , ಕುದ್ದಾರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸಿಕೊಟ್ಟರು . ಸವಣೂರಿನ ಸುತ್ತಮುತ್ತಲಿನ ಅನೇಕ ಶಾಲೆಗಳಿಗೆ ಪೀಠೋಪಕರಣಗಳು , ಕುಡಿಯುವ ನೀರಿನ ವ್ಯವಸ್ಥೆಗಳು ಇತ್ಯಾದಿಗಳನ್ನು ಒದಗಿಸಲು ಕೂಡ ಅವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದರು .
2001 – ಸರ್ವರಿನ ವಿದ್ಯಾಗಂಗೋತ್ರಿಯಲ್ಲಿತಮ್ಮದೇ ಸ್ವಂತ ವಿದ್ಯಾರಕ್ಷಿಸಮೂಹ ಶಿಕ್ಷಣ ಸಂಸ್ಥೆಗಳ ಆರಂಭ ಮಾಡಿದರು .
ಸುಳ್ಯದ ಶಿಕ್ಷಣ ಶಿಲ್ಪಿ ಕರುಂಜಿ ವೆಂಕಟರಮಣ ಗೌಡರಿಂದ ಪ್ರೇರಿತರಾದ ರೈಗಳ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆ ಸವಣೂರಿನ ಪರಸರದ ಮಕ್ಕಳಿಗೆ ಮಹದಾಗ್ರವಾಗಿ ಪರಿಣಮಿಸಿದೆ . ಶೀಂಟೂರು ನಾರಾಯಣ ರೈ ಗ್ರಾಮೀಣ ವಿಶ್ವಸ್ಥ ಮಂಡಳಿ ( ಎಸ್ಎನ್‌ಆರ್ ರೂರಲ್ ಎಜುಕೇಷನ್ ಟ್ರಸ್ ) ಹೆಸರಿನಲ್ಲಿ ನರ್ಸಿಂಗ್ ತರಬೇತಿ ಶಿಕ್ಷಕ ತರಬೇತಿ ಶಾಲೆಗಳೂ ತೆರೆದುಕೊಂಡಿವೆ . ಪದವಿ ವಿದ್ಯಾಲಯವೂ ಆರಂಭವಾಗಿದೆ . ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ . ಹಲವು ಶಿಕ್ಷಣ ಸಂಸ್ಥೆಗಳ ಆಸ್ತಿಯಾಗಿಯೂ ಅವರು ಅಭಿವೃದ್ಧಿಯ ತೇರನ್ನು ಎಳೆದಿದ್ದಾರೆ .
ಸವಣೂರಿನ ವಿದ್ಯಾಸಂಸ್ಥೆಗಳಲ್ಲಿ ಕಲಿತ ಅನೇಕ ಪ್ರತಿಭಾವಂತರು ಉನ್ನತ ಅಂಕಗಳನ್ನು ಗಳಿಸಿ ನಾನಾ ಪದವಿಗಳನ್ನು ಸಂಪಾದಿಸಿ ಉದ್ಯೋಗ ಗಳಿಸಿ ಸುಖಜೀವನ ನಡೆಸುತ್ತಿದ್ದಾರೆ . ಹಲವರು ವಿದೇಶಗಳಲ್ಲಿದ್ದಾರೆ . ಕುಗ್ರಾಮದ ಮಕ್ಕಳ ಬದುಕಿನಲ್ಲಿ ಶಿಕ್ಷಣದ ನಂದಾದೀಪ ಬೆಳಗಿದ ಸೀತಾರಾಮ ರೈ ಎಂಬ ಸಾಧಕನ ಕೊಡುಗೆ ಮನೆಮನೆಯ ಅವಕಾಶದ ಭಾಗ್ಯದ ಬಾಗಿಲನ್ನೇ ತೆರೆದಿದೆ.
ಸವಣೂರಿನ ಸರ್ವತೋಮುಖ ಪ್ರಗತಿಯರೂವಾರಿ ಶ್ರೀ ಕೆ. ಸೀತಾರಾಮ ರೈ ಅವರ ಅಮೃತಮಹೋತ್ಸವ ಆಚರಣೆಯ ಶುಭಾವಸರದಲ್ಲಿ ಸಾರ್ವಜನಿಕ ಸನ್ಮಾನ ಆಯೋಜಿಸಿರುವ ವಿಚಾರ ತಿಳಿದು ಸಂತೋಷವಾಯಿತು. ಸಾಹಿತ್ಯ, ಶಿಕ್ಷಣ, ಆರೋಗ್ಯ, ಸಮಾಜಸೇವೆ ಹಾಗೂ ಸಹಕಾರಿಕ್ಷೇತ್ರದಲ್ಲಿ ವಿಶೇಷ ಸೇವೆ-ಸಾಧನೆ ಮಾಡಿದ ಶ್ರೀ ಸೀತಾರಾಮ ರೈ ಅವರು ನಮ್ಮ ಕ್ಷೇತ್ರದ ಅಭಿಮಾನಿಯೂ, ಭಕ್ತರೂಆಗಿದ್ದಾರೆ. ನಮ್ಮ ಎಲ್ಲಾ ಕಾರ್ಯಕ್ರಮಗಳಿಗೂ ಸಕ್ರಿಯ ಸಹಕಾರ ನೀಡುತ್ತಿದ್ದಾರೆ. ವಿಶೇಷವಾಗಿ ನಮ್ಮ ಗ್ರಾಮಾಭಿವೃದ್ಧಿಯೋಜನೆ, ಜನಜಾಗೃತಿ ವೇದಿಕೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರೋತ್ಸಾಹಿಸುತ್ತಾರೆ. ಸ್ನೇಹಜೀವಿಯಾದ ಅವರು ಎಲ್ಲರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದು ನೇರ ನಡೆ-ನುಡಿಯ ಸರಳ ವ್ಯಕ್ತಿತ್ವದಿಂದ ಸರ್ವರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಸಸ್ಯಕಾಶಿಯಾದ ಸವಣೂರನ್ನು ಜ್ಞಾನಕಾಶಿಯಾಗಿ ರೂಪಿಸಿರುವುದು ಅವರ ಹೆಗ್ಗಳಿಕೆಯಾಗಿದೆ. ಅವರಿಗೆ ಅಭಿನಂದನೆಗಳು ಹಾಗೂ ಶ್ರೀ ಮಂಜುನಾಥ ಸ್ವಾಮಿ ದೀರ್ಘಾಯುರಾರೋಗ್ಯವನ್ನಿತ್ತು ಸಕಲ ಸನ್ಮಂಗಲವನ್ನುಂಟು ಮಾಡಲೆಂದು ಪ್ರಾರ್ಥಿಸುತ್ತೇನೆ. ಸನ್ಮಾನ ಸಮಾರಂಭ ಸರ್ವರೀತಿಯಿಂದಲೂ ಯಶಸ್ವಿಯಾಗಲೆಂದು ಹಾರೈಸುತ್ತೇನೆ. ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯಅನುಗ್ರಹವಿರಲಿ.
-ಡಾ. ಡಿ. ವೀರೇಂದ್ರ ಹೆಗ್ಗಡೆ
ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ
ಸವಣೂರು ಎಂಬ ಗ್ರಾಮೀಣ ಪ್ರದೇಶವನ್ನು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಹಕಾರಿಯಾಗಿ ಅಭಿವೃದ್ಧಿಪಡಿಸಿದ ಕೀರ್ತಿ ಸವಣೂರು ಶ್ರೀ ಸೀತಾರಾಮ ರೈಯವರಿಗೆ ಸಲ್ಲುತ್ತದೆ. ಮೂಲತಃ ಪ್ರಗತಿಪರ ಕೃಷಿಕರಾದ ಶ್ರೀಯುತರು ಸವಣೂರು ಎಂಬ ಹಳ್ಳಿಯಲ್ಲಿ ಶೆ„ಕ್ಷಣಿಕ ಕ್ರಾಂತಿ ಮಾಡಿದ ಶಿಕ್ಷಣ ಬಂಧು. ಧರ್ಮ ಪ್ರೀತಿಯನ್ನು ಬೆಳೆಸಿಕೊಂಡಿರುವ ಅವರು ಪರಿಸರದ ಹಲವಾರು ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವಕ್ಕೆ ಅಹಿರ್ನಿಶಿ ದುಡಿದ ಧಾರ್ಮಿಕ ಮುಂದಾಳು. ಅವರೊಬ್ಬರು ಮಾತೃಭಾಷಾ ಪ್ರೇಮಿ, ಉತ್ತಮ ಸಂಘಟಕ, ಪುತ್ತೂರು ತಾಲೂಕಿನಲ್ಲಿ ತುಳು ಸಮ್ಮೇಳನಗಳನ್ನು ನಡೆಸಿದ ಹೆಚ್ಚುಗಾರಿಕೆ ಅವರದು. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಒದಗಿಸಿದ ಅನುಪಮ ಉದ್ಯೋಗ ಪತಿ. ಧಾರ್ಮಿಕ ಪ್ರಜ್ಞೆಯುಳ್ಳ, ಸಮಾಜ ಅಭಿವೃದ್ಧಿಗಾಗಿ ತುಡಿತದ, ಸರಳ ಸಜ್ಜನಿಕೆಯ ಶ್ರೀಯುತರು ಇದೀಗ 75ರ ಸಂಭ್ರಮದಲ್ಲಿರುವುದು ಸಂತಸದ ವಿಚಾರ. ಅವರ ಅಮಿತ ಆನಂದದ ಅಮೃತೋತ್ಸವವು 100ರ ಪಯಣದ ಸಂಭ್ರಮಕ್ಕೆ ಮುನ್ನುಡಿಯಾಗಲಿ.
–ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್
ಸುಬ್ರಹ್ಮಣ್ಯದೊಂದಿಗೆ ಅವಿನಾಭವ ಸಂಬಂಧ ಹೊಂದಿದವರು ಸವಣೂರು ಸೀತಾರಾಮ ರೈಗಳು. ಸುಬ್ರಹ್ಮಣ್ಯದಲ್ಲಿ ವೃತ್ತಿ ಜೀವನ ಆರಂಭಿಸಿ ಅನಂತರ ಹಂತ-ಹಂತವಾಗಿ ಮೇಲೇರಿದ ರೈಗಳ ಸುದೀರ್ಘ ಪ್ರಯಾಣದಲ್ಲಿ ಹತ್ತಾರು ಸಾಧನೆಗಳು ಅವರ ಸೇವಾ ಕಾರ್ಯಕ್ಕೆ ನಿರ್ದಶನ. ಬಾಲ್ಯದಲ್ಲಿ ಬಡತನದ ಬದುಕಿನ ದಿನಗಳನ್ನು ಅನುಭವಿಸಿದ ಅವರು ಅದನ್ನೇ ಸವಾಲಾಗಿ ಸ್ವೀಕರಿಸಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಮೂಡಿ ಬಂದಿದ್ದಾರೆ. ತಂದೆ ಶಿಂಟೂರು ನಾರಾಯಣ ರೈ ಅವರು ಶಿಸ್ತಿನ ಸಿಫಾಯಿಗಳಾಗಿದ್ದು ಸೀತಾರಾಮ ರೈ ಅವರ ಶಿಸ್ತಿನ ಬದುಕು ರೂಪುಗೊಳ್ಳಲು ಕಾರಣವಾಗಿರಬಹುದು. ಸಹಕಾರ, ಶಿಕ್ಷಣ ಕ್ಷೇತ್ರದ ಜತೆಗೆ ಹತ್ತಾರು ದೇವಾಲಯಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಕೊಡುಗೆ ನೀಡಿದ್ದಾರೆ. ವಿದ್ಯಾರಶ್ಮಿ ವಿದ್ಯಾಲಯದ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಎಲ್ಲರೊಂದಿಗೆ ಆತ್ಮೀಯ ಭಾವದೊಂದಿಗೆ ಒಡನಾಟ ಇರಿಸಿಕೊಂಡು ಅಜಾತಶತ್ರುವಾಗಿ ಬೆಳೆದವರು. 75 ವರ್ಷಕ್ಕೆ ಕಾಲಿಟ್ಟಿರುವ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಉತ್ತಮ ಆರೋಗ್ಯ, ಆಯುಷ್ಯ ನೀಡಿ ಧಾರ್ಮಿಕ, ಸಮಾಜ ಸೇವೆ ಇನ್ನಷ್ಟು ನೀಡಲು ಭಗವಂತ ಶಕ್ತಿ ನೀಡಲಿ.
-ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ
ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ
ಕಳೆದ ಹತ್ತಾರು ವರ್ಷಗಳಿಂದ ಸೀತಾರಾಮ ರೈ ಸವಣೂರು ಅವರು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಅಭೂತಪೂರ್ವ ಸೇವೆ ನಾಡಿನ ಸಮಸ್ತ ಜನತೆಗೆ ಆದರ್ಶಪ್ರಾಯವಾದದ್ದು , ಈ ನಿಟ್ಟಿನಲ್ಲಿ ಇತ್ತೀಚೆಗೆ ಕರ್ನಾಟಕ ಸರಕಾರ ಸಹಕಾರ ರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ನಮಗೆಲ್ಲ ಹೆಮ್ಮೆಯ ವಿಚಾರ . ಸವಣೂರು ಗ್ರಾಮದಲ್ಲಿ ವಿದ್ಯಾರಶ್ಮಿ ವಿದ್ಯಾಲಯ ಸ್ಥಾಪಿಸಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು , ಪ್ರಮುಖ ದೇವಾಲಯಗಳ ಜೀರ್ಣೋದ್ಧಾರ , ಬ್ರಹ್ಮಕಲಶೋತ್ಸವ ಸೇರಿದಂತೆ ಧಾರ್ಮಿಕ , ಸಾಮಾಜಿಕ ಮತ್ತು ಕೃಷಿ ಚಟುವಟಿಕೆಯಲ್ಲಿ ಈ ಭಾಗದ ಸಾರ್ವಜನಿಕರಿಗೆ ಸಹಕಾರಿಯಾಗಿರುವುದು ಶ್ಲಾಘನೀಯ ಸಂಗತಿ . ಈ ಭಾಗದ ಜನ ಸವಣೂರಿನ ಶಿಲ್ಪಿಯೆಂದು ಕರೆಯುತ್ತಿರುವುದು ವಿವಿಧ ಕ್ಷೇತ್ರದಲ್ಲಿ ನೀವು ಸಮಾಜಕ್ಕೆ ನೀಡಿದ ಕೊಡುಗೆಯ ಸಂಕೇತವೆಂದು ನಾನು ಭಾವಿಸಿದ್ದೇನೆ . ಭವಿಷ್ಯದಲ್ಲಿ ತಾವು ಸಮಾಜಕ್ಕೆ ಇನ್ನು ಹೆಚ್ಚಿನ ಸೇವೆ ನೀಡುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಮೂಲಕ ಪ್ರಾರ್ಥಿಸುತ್ತೇನೆ .
-ಶೋಭಾ ಕರಂದ್ಲಾಜೆ
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವರು
ಮಂಗಳೂರು ಸಹಕಾರ ಕ್ಷೇತ್ರದ ಆತ್ಮೀಯ ಒಡನಾಡಿ ಸವಣೂರಿನ ಅಭಿವೃದ್ಧಿಯ ಶಿಲ್ಪಿ ಆಗಿರುವ ಕೆ . ಸೀತಾರಾಮ ರೈ ಅವರು ಸಹಕಾರ ಕ್ಷೇತ್ರದ ನನ್ನ ಆತ್ಮೀಯ ಒಡನಾಡಿ , ಸಹಕಾರ ಕ್ಷೇತ್ರದಲ್ಲಿ ಜೊತೆ ಜೊತೆಯಾಗಿಯೇ ಸಾಗಿದ ನಾವಿಬ್ಬರೂ ಎಸ್‌ಸಿಡಿಸಿಸಿ ಬ್ಯಾಂಕಿನ ಅಭಿವೃದ್ಧಿ ಕಾರ್ಯದಲ್ಲೂ ಜೊತೆಯಾಗಿಯೇ ಇದ್ದವರು . ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾಗಿ , ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷರಾಗಿ ಇವರು ಪ್ರಾಮಾಣಿಕತೆಯ ಸೇವೆಗೈದವರು . ಸಹಕಾರ ಕ್ಷೇತ್ರದ ಜೊತೆಗೆ ಶೈಕ್ಷಣಿಕ ಸಾಮಾಜಿಕ , ಧಾರ್ಮಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆಯ ದಿಟ್ಟ ಹೆಜ್ಜೆಗಳನ್ನು ಇಟ್ಟಿರುವ ಇವರು ಸಾರ್ವಜನಿಕ ಜೀವನದಲ್ಲಿ ಸಾರ್ಥಕತೆಯನ್ನು ಕಂಡವರು . ತನ್ನ 75 ನೇ ಹುಟ್ಟು ಹಬ್ಬವನ್ನು ಇಂದು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿರುವ ಸೀತಾರಾಮ ರೈ ಅವರ ಸೇವಾ ಕೈಂಕರ್ಯ ಸಮಾಜದ ಜನತೆಗೆ ಇನ್ನೂ ಹೆಚ್ಚು ಸಿಗುವಂತಾಗಲಿ ಎನ್ನುವುದೇ ನನ್ನ ಆಶಯ .
-ಶ್ರೀ ಎಂ.ಎನ್ . ರಾಜೇಂದ್ರ ಕುಮಾರ್
ಅಧ್ಯಕ್ಷರು , ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ . ,
ಸಹಕಾರಿ, ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸೀತಾರಾಮ ರೈ ಸವಣೂರು ಅವರು ನೀಡಿದ ಕೊಡುಗೆ ಅಪಾರ. ಅಧಿಕಾರ, ಸ್ಥಾನಮಾನಗಳಿಗೆ ಅಪೇಕ್ಷೆ ಪಡೆಯದೆ ಸಮಾಜಕೋಸ್ಕರ ಬದುಕನ್ನು ಮೀಸಲಿರಿಸಿಕೊಂಡ ರೈಗಳ ವ್ಯಕ್ತಿತ್ವ ಮಾದರಿಯಾದದು. 75 ನೇ ವರ್ಷಕ್ಕೆ ಕಾಲಿಟ್ಟಿದ್ದರೂ, ಯುವಕರನ್ನೇ ನಾಚಿಸುವ ಹಾಗೆ ಇರುವ ಅವರ ಸಮಾಜ ಸೇವೆ ಇತಿಹಾಸ ಪುಟದಲ್ಲಿ ಎಂದೆಂದಿಗೂ ಶಾಶ್ವತ ಸ್ಥಾನ ಪಡೆಯಲಿದೆ. ಉದ್ಯಮ, ಶಿಕ್ಷಕ ಕ್ಷೇತ್ರದ ಮೂಲಕ ಪುತ್ತೂರಿಗೆ ಅಭಿವೃದ್ಧಿಗೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ತೆರೆದು ಗ್ರಾಮಾಂತರ ಪ್ರದೇಶವರಿಗೆ ಆಂಗ್ಲ ಭಾಷಾ ಕಲಿಕೆಗೆ ಅವಕಾಶ ನೀಡಿರುವುದು ದೊಡ್ಡ ಸಾಧನೆ. ಸವಣೂರು ಎಂಬ ಪುಟ್ಟ ಊರಲ್ಲಿ ಸಹಕಾರ, ಶಿಕ್ಷಣ, ಉದ್ಯಮ ಕ್ಷೇತ್ರದಲ್ಲಿ ಸಾಧನೆ ತೋರಿ ಅಭಿವೃದ್ಧಿ ಶೀಲ ಆಧುನಿಕ ಸವಣೂರು ಆಗಿ ಬೆಳಗಿದ್ದು ಸೀತಾರಾಮ ರೈ.
-ಸಂಜೀವ ಮಠಂದೂರು
ಶಾಸಕರು, ಪುತ್ತೂರು
ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ನಾಣ್ಣುಡಿಯಂತೆ ಬದುಕಿದವರು ಸವಣೂರು ಸೀತಾರಾಮ ರೈ. ಕಷ್ಟದಲ್ಲಿರುವ ಕೈ ಚಾಚಿದಾಗ ಅವರ ಸುಖ-ದುಃಖಗಳಿಗೆ ಸ್ಪಂದಿಸುತ್ತಾ, ಶಿಕ್ಷಣ ಸಂಸ್ಥೆ ತೆರೆದು ಸಾವಿರಾರು ಮಂದಿಯ ಅಕ್ಷರ ಜ್ಞಾನ ನೀಗಿಸಿದ, ಕೃಷಿ, ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ, ಸಹಕಾರ ಸಂಸ್ಥೆಯ ಮೂಲಕ ಅಪೂರ್ವ ಕೊಡುಗೆ ನೀಡಿದ ಸೀತಾರಾಮ ರೈ ಅವರ ಜೀವನ ಆದರ್ಶಗಳು ಇಡೀ ಸಮಾಜಕ್ಕೆ ಸ್ಪೂರ್ತಿದಾಯಕವಾದದು. ಸಂಘ-ಸಂಸ್ಥೆಗಳಲ್ಲಿಯು ಚಟುವಟಿಕೆಯಿಂದ ತೊಡಗಿ ಹತ್ತಾರು ಸೇವಾ ಕಾರ್ಯಗಳಲ್ಲಿಯು ಸಹಯೋಗ ನೀಡಿದ್ದಾರೆ. ತಂದೆಯವರ ಸ್ಪೂರ್ತಿ ಪಡೆದು ಶಿಸ್ತಿನ ಜೀವನ ಸಾಗಿಸುತ್ತಿರುವ ರೈಗಳು ಸರಳವಾಗಿ ಬದುಕಿ ಹೃದಯ ಶ್ರೀಮಂತಿಕೆ ತೋರಿದವರು.
-ಶಕುಂತಳಾ .ಟಿ.ಶೆಟ್ಟಿ
ಮಾಜಿ ಶಾಸಕರು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ
PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.