Savanur: ಈ ಬಾರಿಯಾದರೂ ಸಿಕ್ಕೀತೇ ರೈತರಿಗೆ ನೀರು
ಶಾಂತಿಮೊಗರು ಕಿಂಡಿ ಅಣೆಕಟ್ಟು ಆಗಿ ಕೆಲವು ವರ್ಷ ಪೂರ್ಣ
Team Udayavani, Jan 2, 2025, 12:47 PM IST
ಸವಣೂರು: ಕುಮಾರಧಾರಾ ನದಿಗೆ ಶಾಂತಿಮೊಗರಿನಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರು ಹಲಗೆ ಜೋಡಿಸುವ ಕಾರ್ಯ ಈವರೆಗೆ ಸಮರ್ಪಕವಾಗಿ ನಡೆಯದೆ ರೈತರ ಪ್ರಯೋಜನಕ್ಕೆ ದೊರೆತಿಲ್ಲ. ಈ ವರ್ಷ ವಾದರೂ ಉಪಯೋಗಕ್ಕೆ ಸಿಗುತ್ತದೆಯಾ ಎನ್ನುವ ಜಿಜ್ಞಾಸೆ ರೈತರಲ್ಲಿ ಮೂಡಿದೆ.
ಮಾಜಿ ಸಚಿವ ಎಸ್.ಅಂಗಾರ ಅವರ ಶಿಪಾರಸಿನಂತೆ 7.5 ಕೋಟಿ ರೂ.ನಲ್ಲಿ ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖಾಂತರ ಕುಡಿಯುವ ನೀರು ಹಾಗೂ ಕೃಷಿ ಬಳಕೆಗೆ ಎಂದು ಜಿಲ್ಲೆಯ ಮೊದಲ ಕಿಂಡಿ ಅಣೆಕಟ್ಟು ಇದಾಗಿತ್ತು. ಕಳೆದ ವರ್ಷ ಹಲಗೆ ಅಳವಡಿಸಿದ್ದರೂ ಕಿಡಿಗೇಡಿಗಳು ಕಿಂಡಿ ಅಣೆಕಟ್ಟಿಗೆ ಹಾಕಿದ್ದ ಹಲಗೆಯನ್ನು ಎತ್ತರಿಸಿ ನೀರು ಹರಿದು ಹೋಗುವಂತೆ ಮಾಡಿದ್ದರು. ರೈತರಿಂದ ಪ್ರತಿಭಟನೆಯಾದಾಗ ಹಲಗೆ ಅಳವಡಿಸಲು ಮುಂದಾದದರೂ ಅಷ್ಟೊತ್ತಿ ಗಾಲೇ ನೀರು ಬರಿದಾಗಿತ್ತು.
ನದಿ ತಳಮಟ್ಟದಿಂದ ನಾಲ್ಕು ಮೀಟರ್ ಎತ್ತರಕ್ಕೆ ನಿರ್ಮಾಣವಾಗಿರುವ ಈ ಅಣೆಕಟ್ಟು 221.4 ಮೀಟರ್ ಉದ್ದ ಹಾಗೂ 3.75 ಮೀಟರ್ ಅಗಲ ವಿದೆ. 56 ಕಿಂಡಿಗಳಿವೆ. ಹಲಗೆ ಜೋಡಿಸಿದರೆ ಸುಮಾರು 18.56 ಎಮ್‌ಸಿಎಫ್ಟಿ ನೀರು ಶೇಖರಣೆಯಾಗುತ್ತದೆ ಎಂಬುದು ಲೆಕ್ಕಾಚಾರ. ಕೂಡಲೇ ಹಲಗೆ ಜೋಡಿಸುವ ಕೆಲಸವಾಗಬೇಕು ಎಂದು ರೈತಪರ ಹೋರಾಟಗಾರ ಜನಾರ್ದನ ಗೌಡ ಕಯ್ಯಪೆ ಆಗ್ರಹಿಸಿದ್ದಾರೆ.
ಹಲಗೆ ಜೋಡಿಸಿ ಯೋಜನೆ ಅನುಷ್ಠಾನ ಆದರೆ ನದಿಯ ಇಕ್ಕೆಲಗಳಲ್ಲಿ ಎರಡರಿಂದ ಮೂರು ಕಿಲೋ ಮೀಟರ್ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಬಹುದು ಎಂದೂ ನಿರೀಕ್ಷಿಸಲಾಗಿದೆ.
ಕಾಮಗಾರಿ ವಿಳಂಬವಾಗಿದ್ದರಿಂದ ಹಲಗೆ ಅಳವಡಿಕೆಯೂ ವಿಳಂಬ
ಈ ಅಣೆಕಟ್ಟಿನ ನೀರನ್ನು ಕುಡಿಯುವ ನೀರಿಗಾಗಿಯೂ ಬಳಕೆ ಮಾಡುವ ಉದ್ದೇಶವಿರುವುದರಿಂದ ಈಗಾಗಲೇ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನಕ್ಕೆ ಇಲ್ಲಿ ಜಾಕ್ ವೆಲ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಅಲ್ಲಿ ಹಾಸುಪಾದೆ ಸಿಕ್ಕಿರುವುದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಶೀಘ್ರ ಕಾಮಗಾರಿ ಮುಗಿಸಿ ಹಲಗೆ ಜೋಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿಂದ ನೀರೆತ್ತಿ ಮಾಂತೂರಿನಲ್ಲಿ ನೀರು ಶುದ್ಧೀಕರಣಗೊಂಡು ಶಾಂತಿಮೊಗರಿನ ಆಸು ಪಾಸಿನ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕಡಬ ಉಪ ವಿಭಾಗದ ಜಿಲ್ಲಾ ಪಂಚಾಯತ್ ಎಂಜಿನಿಯರ್ ಸಂಗಪ್ಪ ಹುಕ್ಕೇರಿ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.