ಮರೀಚಿಕೆಯಾದ ಸವಣೂರು ಹೋಬಳಿ ಕೇಂದ್ರ
ಮನವಿಗೆ ಸಿಕ್ಕಿಲ್ಲ ಸೂಕ್ತ ಸ್ಪಂದನೆ
Team Udayavani, Jan 12, 2021, 3:10 AM IST
ಸವಣೂರು: ವೇಗವಾಗಿ ಬೆಳೆ ಯುತ್ತಿರುವ ಸವಣೂರನ್ನು ಕೇಂದ್ರ ವಾಗಿಟ್ಟು ಕೊಂಡು ಹೋಬಳಿ ಕೇಂದ್ರ ಮಾಡಬೇಕೆಂಬ ಬೇಡಿಕೆ ಬೇಡಿಕೆಯಾಗಿದೆಯೇ ಹೊರತು ಕಾರ್ಯರೂಪಕ್ಕೆ ಬರುವ ಯಾವುದೇ ಲಕ್ಷಣ ಸದ್ಯಕ್ಕೆ ಗೋಚರಿಸುತ್ತಿಲ್ಲ.
ಈಗ ಕಡಬ ತಾಲೂಕಿಗೆ ಸೇರಿರುವ ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಕಡಬ ತಾಲೂಕು ಆಗುವುದಕ್ಕೂ ಮೊದಲೇ ಈ ವಲಯದಿಂದ ಕೇಳಿ ಬಂದಿತ್ತು. ಸವಣೂರು ಎಂದರೆ ಈಗ ತಾಲೂಕು ಕಡಬ. ವಿಧಾನಸಭೆ ಸುಳ್ಯ, ಕಂದಾಯ ಹೋಬಳಿ ಕಡಬ, ಪೊಲೀಸ್ ಠಾಣೆ ಬೆಳ್ಳಾರೆ ಹೀಗೆ ಅದರದ್ದೇ ಆದ ವಿಶೇಷತೆ ಇದೆ; ಸಮಸ್ಯೆಗಳೂ ಇವೆ.
ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು, ಕಂದಾಯ ಕಚೇರಿ, ಗ್ರಾ.ಪಂ., ವಸತಿ ಸಮುಚ್ಚಯ ,ಪೆಟ್ರೋಲ್ ಪಂಪ್, ವಾಣಿಜ್ಯ ಸಂಕೀರ್ಣ, ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಸಂಘಗಳು, ಸಭಾಭವನ, ವಿದ್ಯುತ್ ಸಬ್‌ಸ್ಟೇಶನ್ ಮೊದಲಾದವುಗಳು ಸವಣೂರಿನ ಬೆಳವಣಿಗೆಗೆ ಪೂರಕವಾಗಿದೆ.
ಕಡಬಕ್ಕೆ ಸೇರ್ಪಡೆಗೇ ಆಕ್ಷೇಪ :
ಸವಣೂರು, ಬೆಳಂದೂರು, ಕಾಣಿ ಯೂರಿನಿಂದ ಪುತ್ತೂರು ಹತ್ತಿರ ಇರುವು ದರಿಂದ ಈ ಗ್ರಾ.ಪಂ. ಅನ್ನು ಕಡಬ ತಾಲೂಕಿಗೆ ಸೇರ್ಪಡೆ ಮಾಡಬಾರದೆಂಬ ಬಲವಾದ ಕೂಗು ಇತ್ತು. ಆದರೆ ಸರಕಾರ ಈ ಗ್ರಾಮಗಳನ್ನೂ ಕಡಬ ತಾಲೂಕಿಗೆ ಸೇರಿಸಿ ರಾಜಪತ್ರ ಹೊರಡಿಸಿತ್ತು. ಅದಕ್ಕಾಗಿ ನ್ಯಾಯಾಲಯ, ಸಚಿವರು ಸೇರಿದಂತೆ ಇತರ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಸಚಿವರಿಗೆ ಮನವಿ :
ಸವಣೂರನ್ನು ಹೋಬಳಿ ಕೇಂದ್ರ ಮಾಡಬೇಕೆಂಬ ನಿಟ್ಟಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಈ ಭಾಗದ ಜನರು ಪುತ್ತೂರು ಶಾಸಕ ಸಂಜೀವ ಮಠಂದೂರು, ಸುಳ್ಯ ಶಾಸಕ ಎಸ್.ಅಂಗಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಮನವಿಗೆ ಪೂರಕ ಉತ್ತರ ಬಾರದ ಕಾರಣ ಜನತೆಯ ಬೇಡಿಕೆ ಸದ್ಯಕ್ಕೆ ಗಗನ ಕುಸುಮವಾಗಿಯೇ ಉಳಿಯುವಂತಾಗಿದೆ.
ಈಗ ಕನಿಷ್ಠ ಸವಣೂರು ಹೋಬಳಿ ಕೇಂದ್ರವಾದರೆ ಬೆಳಂದೂರು, ಕುದ್ಮಾರು, ಕಾçಮಣ, ಪಾಲ್ತಾಡಿ, ಸವಣೂರು, ಪುಣcಪ್ಪಾಡಿ, ಕಾಣಿಯೂರು, ಚಾರ್ವಾಕ, ದೋಳ್ಪಾಡಿ ಹಾಗೂ ಸವಣೂರಿನ ಇನ್ನೊಂದು ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.
ನಿವೇಶನ ನೀಡಲು ನಿರ್ಣಯ :
ಪ್ರಸ್ತುತ ಈ ಭಾಗದ ಗ್ರಾಮದ ಜನರಿಗೆ ಕಂದಾಯ ಹೋಬಳಿ ಹಾಗೂ ತಾಲೂಕು ಕೇಂದ್ರ ಕಡಬ. ಇಲ್ಲಿಗೆ ಸಂಪರ್ಕ ಬಹಳ ತ್ರಾಸದಾಯಕ. ಒಂದೇ ಕೆಲಸಕ್ಕೆ ಹಲವು ಬಾರಿ ತೆರಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸವಣೂರಿನಲ್ಲಿ ಕಂದಾಯ ಹೋಬಳಿ ಕೇಂದ್ರ (ನಾಡ ಕಚೇರಿ) ತೆರೆಯುವುದು ಆವಶ್ಯಕ. ಸಂಬಂಧಿಸಿದವರು ಈ ಕುರಿತು ಗಮನಹರಿಸುವುದು ಅಗತ್ಯವಾಗಿದೆ ಎಂಬುದು ಜನರ ಆಗ್ರಹ. ಹೋಬಳಿ ಕೇಂದ್ರ ರಚನೆಗೆ ಅವಶ್ಯವಿರುವ ನಿವೇಶನವನ್ನು ನೀಡಲು ಸವಣೂರು ಗ್ರಾ.ಪಂ.ನ ಆಡಳಿತ ಮಂಡಳಿಯಲ್ಲಿ ಈ ಹಿಂದೆಯೇ ನಿರ್ಣಯಿಸಲಾಗಿತ್ತು.
ಕಡಬ ತಾಲೂಕಿನ ಸವಣೂರಿನಲ್ಲಿ ಹೋಬಳಿ ಕೇಂದ್ರ ಆಗಬೇಕು ಎಂಬ ಬೇಡಿಕೆ ಇರುವುದು ನಿಜ. ಸದ್ಯ ಹೊಸ ಹೋಬಳಿ ಕೇಂದ್ರಗಳ ರಚನೆ ಸರಕಾರದ ಮುಂದೆ ಇಲ್ಲ. –ಎಸ್. ಅಂಗಾರ, ಶಾಸಕರು, ಸುಳ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.