ಕಾಶಿಕಟ್ಟೆ: ಶಿಥಿಲ ಶಾಲಾ ಕಟ್ಟಡದೊಳಗೆ ಅಭದ್ರತೆಯಲ್ಲಿ ಬಡ ಮಕ್ಕಳು

ಅನುದಾನದ ನಿರೀಕ್ಷೆಯಲ್ಲಿ ಪರಿಶಿಷ್ಟ ವರ್ಗದ ಆಶ್ರಮ ಶಾಲೆ

Team Udayavani, Dec 23, 2019, 4:36 AM IST

wd-33

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ನಗರದ ಕಾಶಿಕಟ್ಟೆ ಬಳಿ ಪರಿಶಿಷ್ಟ ವರ್ಗದ ಆಶ್ರಮ ಶಾಲೆಯಿದ್ದು, ಶಾಲೆ ಮತ್ತು ವಸತಿನಿಲಯ ಕಟ್ಟಡ ದುರಸ್ತಿಯಲ್ಲೇ ಹಲವು ವರ್ಷಗಳನ್ನು ದೂಡಿದೆ. ಶಾಲೆ ಮತ್ತು ವಸತಿನಿಲಯ ಮೇಲ್ದಜೇಗೇರಿಸಿ ಕಾಯಕಲ್ಪ ನೀಡಬೇಕಿದೆ. ಮೇಲ್ದರ್ಜೆಗೇರಿಸಲು ಮತ್ತು ಸಮರ್ಪಕ ಮೂಲ ಸೌಕರ್ಯ ಒದಗಿಸಲು ಸರಕಾರ ಅನುದಾನ ಒದಗಿಸಬೇಕಿದೆ.

ಕಟ್ಟಡ ಶಿಥಿಲ
ಪರಿಶಿಷ್ಟ ವರ್ಗದ ಬಡ ಮಕ್ಕಳು ಕಲಿಯುವ ಈ ಶಾಲೆಯಲ್ಲಿ ಉತ್ತಮ ಮೇಲ್ವಿಚಾರಕರು, ನುರಿತ ಶಿಕ್ಷಕರಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಮಕ್ಕಳು ಇದ್ದಾರೆ. ಆದರೆ ಶಾಲೆ ಮತ್ತು ವಸತಿ ನಿಲಯ ಕಟ್ಟಡ ಶಿಥಿಲ ಸ್ಥಿತಿಯಲ್ಲಿದೆ. ಆಶ್ರಮ ಶಾಲೆಯ ಕಟ್ಟಡ ಶಿಥಿಲಗೊಂಡು ಹೆಂಚುಗಳು ಧರೆಗುರುಳಲು ಸಿದ್ಧವಾಗಿವೆ. ಕಟ್ಟಡ ಹೊರಗಿನಿಂದ ನೋಡಲು ಚೆನ್ನಾಗಿದ್ದಂತೆ ಕಂಡರೂ ಒಳ ಹೊಕ್ಕು ನೋಡಿದರೆ ಕಟ್ಟಡ ಶಿಥಿಲ ಸ್ಥಿತಿಯಲ್ಲಿರುವುದು ಗೋಚರಿಸುತ್ತದೆ. ಇದರೊಳಗೆ ಮಕ್ಕಳು ಅಭದ್ರತೆಯಲ್ಲಿ ಪಾಠ ಕೇಳುವ ಸ್ಥಿತಿ ಇದೆ.

ಶಿಥಿಲವಾದ ಶಾಲಾ ಕಟ್ಟಡ ಮತ್ತು ಪಕ್ಕದಲ್ಲೆ ಇರುವ ವಸತಿ ನಿಲಯವನ್ನು ಕೆಡವಿ ಹೊಸದಾಗಿ ಸುಸಜ್ಜಿತ ಕಟ್ಟಡಗಳ ಮರು ನಿರ್ಮಾಣವಾಗಬೇಕಿದೆ. ಒಂದೇ ಸೂರಿನಲ್ಲೇ ಎಲ್ಲ ವ್ಯವಸ್ಥೆಗಳಿರುವ ಕಟ್ಟಡ ನಿರ್ಮಾಣವಾದ‌ಲ್ಲಿ ಅನುಕೂಲ. ಅಡುಗೆ ಕೊಠಡಿ ಕೂಡ ಹೊಸದಾಗಿ ನಿರ್ಮಿಸುವ ಅವಶ್ಯಕತೆಯಿದೆ.
ಇದುವರೆಗೆ ಶಿಥಿಲ ಕಟ್ಟಡಗಳನ್ನು ಸರಕಾರದ ವಿವಿಧ ಅನುದಾನಗಳಲ್ಲಿ ದುರಸ್ತಿಗೊಳಿಸುತ್ತಾ ಬರಲಾಗಿದೆ. ಅಡುಗೆ ಕೊಠಡಿ ನಿರ್ಮಾಣಕ್ಕೆ 41 ಲಕ್ಷ ರೂ. ಅನುದಾನ ಹಾಗೂ 9.5 ಲಕ್ಷ ರೂ. ಅನುದಾನ ದುರಸ್ತಿಗಾಗಿ ಈಗಾಗಲೇ ಒದಗಿ ಬಂದಿದೆ. ಆದರೆ ಆಶ್ರಮ ಶಾಲೆಯ ಎಲ್ಲ ಮೂಲ ಸೌಕರ್ಯ ಈಡೇರಿಕೆಗೆ ದೊಡ್ಡ ಮೊತ್ತದ ಅನುದಾನದ ಆವಶ್ಯಕತೆಯಿದೆ. ನೂತನ ಶಾಲೆ ಕಟ್ಟಡ, ಸುಸಜ್ಜಿತ ವಸತಿನಿಲಯ, ರಂಗಮಂದಿರ, ಕ್ರೀಡಾಂಗಣ, ಶೌಚಾಲಯ ಈ ಎಲ್ಲ ಮೂಲ ಸೌಕರ್ಯಗಳಿಗಾಗಿ 4.5 ಕೋಟಿ ರೂ. ಅಗತ್ಯವಿದೆ. ಇವುಗಳ ಬೇಡಿಕೆಗೆ ಅಂದಾಜು ಪಟ್ಟಿಯ ಪ್ರಸ್ತಾವನೆ ಸರಕಾರಕ್ಕೆ ಮಂಜೂರಾತಿಗಾಗಿ ಸಲ್ಲಿಕೆಯಾಗಿದೆ. ಅದಿನ್ನು ಮಂಜೂರುಗೊಂಡಿಲ್ಲ. ಶಾಲೆಗೆ ಸೇರಿದ ಜಾಗದ ದಾಖಲೆ ಪತ್ರಗಳನ್ನು ಸಮರ್ಪಕಗೊಳಿಸುವ ಕೆಲಸವನ್ನು ಮೇಲ್ವಿಚಾರಕ ನಡೆಸುತ್ತಿದ್ದಾರೆ.

ಇರುವ ಸವಲತ್ತುಗಳು
ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶದ ಆಹಾರ ಸರಬರಾಜಾಗುತ್ತಿದೆ. ಶಾಲೆಯ ಸುತ್ತ ಆವರಣಗೋಡೆ, ಐಟಿಡಿಪಿ ಇಲಾಖೆಯಿಂದ ಶುದ್ಧ ನೀರಿನ ಘಟಕ ವ್ಯವಸ್ಥೆ, ಮಲಗಲು ಹಾಸಿಗೆ, ಫ್ಯಾನ್‌, ಕ್ರೀಡಾ ಸಾಮಗ್ರಿಗಳು ಇವೆ. ತರಗತಿ ಕೊಠಡಿಗಳಿಗೆ ಟೈಲ್ಸ್‌, ಅಂಗಣಕ್ಕೆ ಇಂಟರ್‌ಲಾಕ್‌ ಅಳವಡಿಸಲಾಗಿದೆ.

ಆವಶ್ಯವಿರುವ ಸೌಕರ್ಯಗಳು
ಮಕ್ಕಳಿಗೆ ಆಟವಾಡಲು ಕ್ರೀಡಾಂಗಣ, ಸಾಂಸ್ಕೃತಿಕ ಚಟುವಟಿಕೆಗೆ ರಂಗಮಂದಿರ, 6 ಮತ್ತು 7ನೇ ತರಗತಿಯ ಬೇಡಿಕೆ ಇದ್ದರೂ ತರಗತಿ ಪ್ರಾರಂಭಿಸಲು ಅನುಮತಿ ಸಿಕ್ಕಿಲ್ಲ. ಹೆಚ್ಚುವರಿ ತರಗತಿ ಕೊಠಡಿಗಳು ನಿರ್ಮಾಣವಾಗಬೇಕಿದೆ. ಪ್ರಸ್ತುತ ಶಾಲೆ ಮತ್ತು ವಸತಿ ನಿಲಯವಿರುವ ಅಂತರ ದೂರವಿದ್ದು, ಒಂದೇ ಕಡೆಯಲ್ಲಿ ಸುಸಜ್ಜಿತ ಶಾಲೆ ಮತ್ತು ವಸತಿಗೃಹ ನಿರ್ಮಾಣವಾಗಬೇಕಿದೆ. ಆಶ್ರಮ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಎಲ್ಲ ಅವಧಿಗಳಲ್ಲಿ ವಾರ್ಷಿಕೋತ್ಸವ ಸಹಿತ ಪಠ್ಯೇತರ ಚಟುವಟಿಕೆಗಳಿಗೆ ಮಕ್ಕಳಿಗೆ ಸರಕಾರದಿಂದ ಅನುದಾನ ಬರುತಿಲ್ಲ. ಸಿಗಬೇಕಿದೆ.

ನಿತ್ಯ ಭಜನೆ ವಿಶೇಷ
ಆಶ್ರಮ ಶಾಲೆಯಲ್ಲಿ ಕಲಿಕೆಗೆ ಒಳ್ಳೆಯ ವಾತಾವರಣವಿದ್ದು, ಕಲಿಕೆಗೆ ಪೂರಕವಾಗಿದೆ. ಜತೆಗೆ ಮಕ್ಕಳು ಕ್ರಿಯಾಶೀಲತೆಯಿಂದ ಚಟುವಟಿಕೆ ಹೊಂದಿದ್ದಾರೆ. ಇತರ ಶಾಲೆಯ ಮಕ್ಕಳಿಗಿಂತ ಕಡಿಮೆ ಇಲ್ಲ ಎಂಬಂತೆ ಕಲಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಅನುದಾನ ಬಂದಲ್ಲಿ ಅನುಕೂಲ
ಆಶ್ರಮ ಶಾಲೆ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವಲ್ಲಿ ಎಲ್ಲ ಪ್ರಯತ್ನಗಳನ್ನು ಇಲ್ಲಿ ನಡೆಸುತ್ತಿದ್ದೇವೆ. ಒಂದಷ್ಟು ಅನುದಾನಗಳು ಲಭ್ಯವಾಗಿವೆ. ಶಾಲೆಯ ಮಕ್ಕಳ ಸರ್ವಾಂಗೀಣ ಸೌಕರ್ಯಗಳಿಗಾಗಿ 4.5 ಕೋಟಿ ರೂ. ಪ್ರಸ್ತಾವನೆಗೆ ಅನುಮೋದನೆ ದೊರೆತು ಅದು ಒದಗಿ ಬಂದಲ್ಲಿ ಮೂಲಸೌಕರ್ಯ ಈಡೇರಿ ಸಮಸ್ಯೆ ಬಗೆಹರಿಯಲಿದೆ. ಇಲಾಖೆ, ಶಿಕ್ಷಕಿಯರು ಹೆತ್ತವರ ದಾನಿಗಳ ಸಹಕಾರ ಅತ್ಯುತ್ತಮವಾಗಿದೆ.
– ಕೃಷ್ಣಪ್ಪ ಬಿ., ಮೇಲ್ವಿಚಾರಕ

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

10

Poonch; ಸೇನಾ ವಾಹನ ದುರಂತ: ಕೊಡಗಿನ ಯೋಧ ಚಿಂತಾಜನಕ

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

1-osamu

Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

3-ptr

Puttur: ಪೆನ್‌ ಪಾಯಿಂಟ್‌ ಕ್ರಿಕೆಟ್‌: ಸತತ 2ನೇ ಬಾರಿ ಬ್ಲೂ ಹಂಟರ್ಸ್‌ ಚಾಂಪಿಯನ್ಸ್‌

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Poonch; ಸೇನಾ ವಾಹನ ದುರಂತ: ಕೊಡಗಿನ ಯೋಧ ಚಿಂತಾಜನಕ

1-man-mohan

Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

allu arjun

Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.