ಪುಣ್ಚಪ್ಪಾಡಿ ಶಾಲೆ: ಭರಪೂರ ಬೆಣ್ಣೆ ಹಣ್ಣಿನ ಫಸಲು

ಈ ಶಾಲೆಯಲ್ಲಿವೆ ತೆಂಗು, ಕಂಗು, ಸಂಪಿಗೆ, ನೆಲ್ಲಿ, ಗೇರು, ಹಲಸಿನ ಮರಗಳು

Team Udayavani, Sep 18, 2019, 5:08 AM IST

e-34

ಬೆಣ್ಣೆ ಹಣ್ಣಿನ ಫಸಲೊಂದಿಗೆ ಮಕ್ಕಳು.

ಸವಣೂರು: ಶಾಲೆಯಂಗಳದಲ್ಲಿ ಹಣ್ಣಿನ ಗಿಡ, ತರಕಾರಿ ಗಿಡ ಬೆಳೆಯಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಅನೇಕರಿಗೆ ಇದೊಂದು ಸಿಲ್ಲಿ ವಿಷಯ, ಆಗದ ಕೆಲಸ ಅಂತ ಅನಿಸಿಬಿಡುತ್ತದೆ. ಬಿಹಾರದಂತಹ ರಾಜ್ಯದಲ್ಲಿ ಮಕ್ಕಳಿಗೆ ಶಾಲೆಯಲ್ಲಿಯೇ ಸಾವಯವ ತರಕಾರಿ, ಹಣ್ಣುಗಳನ್ನು ಬೆಳೆದು ನೀಡಬೇಕು ಎನ್ನುವ ಪ್ರಾಜೆಕ್ಟ್ ಸಿದ್ಧವಾಗುತ್ತಿದೆ. ಇದು ಬಿಹಾರದ ಕತೆಯಾದರೆ, ನಮ್ಮ ಗ್ರಾಮೀಣ ಭಾಗದ ಪುಣ್ಚಪ್ಪಾಡಿ ಶಾಲೆಯಲ್ಲಿ ಬೆಣ್ಣೆ ಹಣ್ಣು ಗಿಡ ಬೆಳೆಸಿ ಈಗ ಹಣ್ಣಾಗುವ ಹೊತ್ತಿಗೆ ಮಕ್ಕಳು ಖುಷಿಯಿಂದ ಶಾಲೆಯಲ್ಲೇ ತಿಂದು ಖುಷಿ ಪಟ್ಟರೆ ಪೌಷ್ಟಿಕ ಆಹಾರವೂ ಮಕ್ಕಳ ಪಾಲಿಗೆ ದಕ್ಕಿತು. ಇದು ಇನ್ನೊಂದಷ್ಟು ಶಾಲೆಗೆ ಪ್ರೇರಣೆಯಾಗಬೇಕು.

ಬಿಹಾರದ 20,000 ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಶೀಘ್ರದಲ್ಲೇ ಸಾವಯವ ತರಕಾರಿಗಳು ಮತ್ತು ಹಣ್ಣುಗಳನ್ನು ಮಧ್ಯಾಹ್ನದ ಊಟಕ್ಕೆ ಬೆಳೆಯಲಿದ್ದಾರೆ. ಬಿಹಾರದ ಪೂರ್ಣಿಯಾ ಜಿಲ್ಲೆಯ 100 ಶಾಲೆಗಳಲ್ಲಿ ಯಶಸ್ವಿ ಪ್ರಾಯೋಗಿಕ ಯೋಜನೆಯ ಅನಂತರ ರಾಜ್ಯವು ಅನೌಪಚಾರಿಕವಾಗಿ ಯೋಜನೆಯನ್ನು 4,000 ಶಾಲೆಗಳಿಗೆ ವಿಸ್ತರಿಸಿದೆ. ಈ ಯೋಜನೆಗೆ ಧನಸಹಾಯ ನೀಡಲು ಕೇಂದ್ರ ಸರಕಾರವೂ ಒಪ್ಪಿಗೆ ನೀಡಿದೆ. 75 ಶಾಲೆಗಳಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯಲು ಉಪಕರಣಗಳು, ಬೀಜಗಳು ಮತ್ತು ಸಸಿಗಳನ್ನು ಖರೀದಿಸಲು ಪ್ರತಿ ಶಾಲೆಗೆ 5,000 ರೂ. ನೀಡಲಾಗುತ್ತಿದೆ. ಈ ಯೋಜನೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕಡಬ ತಾಲೂಕಿನ ಗ್ರಾಮೀಣ ಭಾಗವಾದ ಪುಣcಪ್ಪಾಡಿ ಶಾಲೆಯಿಂದ ಅಂತಹದ್ದೇ ಸುದ್ದಿಯೊಂದು ಬಂದಿದೆ. ಇದು ಶಾಲೆಯವರೇ ಮಾಡಿರುವ ಪ್ರಯತ್ನ.

ಪುಣ್ಚಪ್ಪಾಡಿ ಶಾಲೆಯಂಗಳಕ್ಕೆ ಕಾಲಿಡುತ್ತಿದ್ದಂತೆ ಎದುರಾಗುವುದು ತೆಂಗು, ಕಂಗು, ಸಂಪಿಗೆ, ನೆಲ್ಲಿ, ಗೇರು, ಹಲಸಿನ ಮರಗಳು ಜತೆಗೆ ವಿಶಿಷ್ಟ ಬೆಣ್ಣೆ ಹಣ್ಣಿನ ಮರವೊಂದು ತನ್ನತ್ತ ನಮ್ಮನ್ನು ಸೆಳೆಯುತ್ತದೆ. ಮರದ ತುಂಬಾ ಬೆಣ್ಣೆ ಹಣ್ಣಾಗಿದೆ. ಹೀಗಾಗಿ ಮಕ್ಕಳಿಗೆ ಖುಷಿಯೋ ಖುಷಿ.

ಕೈಗೆಟಕುತ್ತಿವೆ ಹಣ್ಣುಗಳು
ಪುಣcಪ್ಪಾಡಿ ಶಾಲೆಯ ಪ್ರೀತಿಯ ಬೆಣ್ಣೆ ಹಣ್ಣಿನ ಮರ ತನ್ನ ಮೈತುಂಬಾ ಕಾಯಿಗಳನ್ನು ಬಿಟ್ಟು ತೂಗಿದೆ. ಜೂನ್‌ ತಿಂಗಳ ಆರಂಭದಿಂದಲೂ ನಮ್ಮ ಮಕ್ಕಳಿಗೆ ಈ ಬೆಣ್ಣೆ ಹಣ್ಣುಗಳ ಮೇಲೆಯೇ ಆಕರ್ಷಣೆ. ಮರದಡಿಗೆ ಹೋಗಿ ಹಣ್ಣುಗಳನ್ನು ಮುಟ್ಟಿ ಲೆಕ್ಕ ಮಾಡದಿದ್ದರೆ ಆ ದಿನ ಮಕ್ಕಳಿಗೆ ಪೂರ್ಣವಾಗುವುದಿಲ್ಲ. ಬೆಳೆಯುವ ಪ್ರತೀ ಹಂತವನ್ನು ಮಕ್ಕಳು ಸಂಭ್ರಮಿಸಿದರು.

1 ಕ್ವಿಂಟಾಲ್‌ ಹಣ್ಣು
ಅಂತೂ ಕಾಯಿಗಳೂ ಬಲಿತು ಅವುಗಳನ್ನು ಕೊಯ್ದದ್ದೂ ಆಯಿತು. ಬುಟ್ಟಿ ತುಂಬಿದ ಕಾಯಿಗಳು ಇದ್ದುದು 1 ಕ್ವಿಂಟಾಲ್‌ ನಷ್ಟು. ಎಲ್ಲ ಮಕ್ಕಳಿಗೆ, ಮಕ್ಕಳ ಮನೆಗೂ ಹಂಚಿ ಉಳಿದುದನ್ನು ಶಾಲಾಭಿವೃದ್ಧಿಯ ಸಲುವಾಗಿ ಮಾರಾಟ ಮಾಡಲಾಯಿತು. ಶಾಲೆಗೆ ಕೊಂಚ ಆದಾಯವೂ ಆಯಿತು.

 ಪೌಷ್ಟಿಕ ಆಹಾರ
ಕಳೆದ ವರ್ಷವೂ ಬೆಣ್ಣೆ ಹಣ್ಣು ಮಕ್ಕಳಿಗೆ ಇಷ್ಟವಾಗಿತ್ತು. ಹಣ್ಣಾದಾಗ ಅದನ್ನು ಮಕ್ಕಳು ತಿನ್ನುವ ಸಂಭ್ರಮ ನೋಡುವುದೇ ಆನಂದ. ಈ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರವೂ ಲಭ್ಯವಾದಂತಾಗುತ್ತದೆ
– ರಶ್ಮಿತಾ ನರಿಮೊಗರು,  ಶಾಲೆಯ ಮುಖ್ಯ ಶಿಕ್ಷಕಿ

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.