ಸೆ. 29-ಅ. 7: ಪುತ್ತೂರು ದಸರಾ ನಾಡಹಬ್ಬ ಸಂಭ್ರಮ
Team Udayavani, Sep 28, 2019, 5:00 AM IST
ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಶಿವರಾಮ ಕಾರಂತ ಆರಂಭಿಸಿದ ಹೆಗ್ಗಳಿಕೆಯ ಪುತ್ತೂರು ದಸರಾ ನಾಡಹಬ್ಬ ಸೆ. 29ರಿಂದ ಅ. 7ರ ತನಕ ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ, ಸಾಹಿತ್ಯಿಕ ವೈವಿಧ್ಯಗಳೊಂದಿಗೆ ನಡೆಯಲಿದೆ ಎಂದು ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ವಾಟೆಡ್ಕ ಕೃಷ್ಣ ಭಟ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ 67ನೇ ವರ್ಷದ ದಸರಾ ನಾಡಹಬ್ಬ ನಡೆಯುತ್ತಿದೆ. ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಶ್ರಯದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಪ್ರತಿದಿನ ಸಂಜೆ 7ರಿಂದ ಗಮಕ, ವೀಣಾ ವಾದನ, ಭರತನಾಟ್ಯ, ತಾಳಮದ್ದಲೆ, ಕರ್ನಾಟಕ, ಹಿಂದೂಸ್ಥಾನಿ ಸಂಗೀತ ಕಛೇರಿ, ಸುಗಮ ಸಂಗೀತ, ಯಕ್ಷಗಾನ, ಹರಿಕಥಾ ಸತ್ಸಂಗ ಸಾಂಸ್ಕೃತಿಕ ಕಾರ್ಯಕ್ರಮ, ಜತೆಗೆ ಉಪನ್ಯಾಸ ನಡೆಯಲಿವೆ.
ನಾಳೆ ಉದ್ಘಾಟನೆ
ಸೆ. 29ರ ಸಂಜೆ ಪುತ್ತೂರು ಹಿರಿಯ ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ದಸರಾ ನಾಡಹಬ್ಬ ಸಮಿತಿ ಅಧ್ಯಕ್ಷ ವಾಟೆಡ್ಕ ಕೃಷ್ಣಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಭಾಗವಹಿಸುವರು ಎಂದರು.
ಅ. 7ರ ಸಂಜೆ ಸಮಿತಿ ಗೌರವಾಧ್ಯಕ್ಷ ಎನ್.ಕೆ. ಜಗನ್ನಿವಾಸ ರಾವ್ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ. ಮಹಾ ಲಿಂಗೇಶ್ವರ ದೇವಾಲಯದ ಕಚೇರಿ ವ್ಯವಸ್ಥಾಪಕ ಜಗದೀಶ್ ಪಿ., ನಿವೃತ್ತ ಯೋಧ ಕಾಂಚನ ಕೆ.ವಿ. ಸುಬ್ಬರಾವ್, ಬೋನಂ ತಾಯ ಆಸ್ಪತ್ರೆಯ ವೈದ್ಯೆ ಡಾ| ವಸಂತಿ ಕೆ. ಅವರನ್ನು ಸಮ್ಮಾನಿ ಸಲಾಗುವುದು. ಡಾ| ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಕಾರ್ಯಕ್ರಮದ ಸಿಂಹಾವಲೋಕನ ನಡೆಸಲಿದ್ದಾರೆ ಎಂದರು.
ದಸರಾ ನಾಡಹಬ್ಬ ಸಮಿತಿ ಗೌರವಾಧ್ಯಕ್ಷ ಎನ್.ಕೆ. ಜಗನ್ನಿವಾಸ್ ರಾವ್, ಕಾರ್ಯ ದರ್ಶಿ ಎಂ.ಟಿ. ಜಯರಾಮ ಭಟ್, ಕೋಶಾಧಿಕಾರಿ ರಮೇಶ್ ಬಾಬು ಉಪಸ್ಥಿತರಿದ್ದರು.
ಡಾ| ಶಿವರಾಮ ಕಾರಂತ ಆರಂಭಿಸಿದ್ದ ಹೆಗ್ಗಳಿಕೆಮತ್ತೆ ಆರಂಭವಾಗಿತ್ತು ಪುತ್ತೂರಿನಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕೃಷಿ ನಡೆಸಿದ್ದ ಡಾ|ಕೆ.ಶಿವರಾಮ ಕಾರಂತ, 1931ರಲ್ಲಿ ನೆಲ್ಲಿಕಟ್ಟೆಯಲ್ಲಿ ನಾಡಹಬ್ಬವನ್ನು ಆರಂಭಿಸಿದ್ದರು. ಸಾಹಿತ್ಯ ಹಾಗೂ ಸಾಂಸ್ಕೃತಿಕ ಪ್ರೋತ್ಸಾಹದ ಉದ್ದೇಶದಿಂದ ನಾಡಹಬ್ಬ ಆಚರಣೆ ನಡೆಸುತ್ತಿದ್ದರು. ಅನಂತರದಲ್ಲಿ ಕೆಲವು ವರ್ಷ ಈ ಆಚರಣೆ ನಿಂತು 1952-53ರಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತೇಸರ ಸದಾಶಿವ ರಾಯರ ನೇತೃತ್ವದಲ್ಲಿ ಮರು ಆರಂಭಿಸಲಾಗಿತ್ತು. ಅನಂತರ ನಾಡಹಬ್ಬ ದೇವಾಲಯದ ಬಳಿಗೆ ಸ್ಥಳಾಂತರಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.