ಸ್ವೋದ್ಯೋಗಕ್ಕೆ ಜೀವಾಮೃತವಾದ ಕೃಷಿ ಕಾಯಕ
ಬಾಳು ಹಸುರಾಗಿಸಿದ ಸ್ವಸಹಾಯ ಸಂಘ ; ಸಮಗ್ರ ಕೃಷಿ ಆಧಾರ
Team Udayavani, Oct 28, 2020, 4:56 AM IST
ಬೆಳ್ತಂಗಡಿ: ಬಡತನ ನಿರ್ಮೂಲನೆಗೆ ಭಾರತ ಸರಕಾರ ಗ್ರಾಮೀ ಣಾಭಿವೃದ್ಧಿ ಇಲಾಖೆಯ ಮೂಲಕ ಅನೇಕ ಯೋಜನೆಗಳನ್ನು ಸಾಕಾರಗೊಳಿಸಿದೆ. ಮಹಿಳೆಯರ ಸಶಕ್ತೀಕರಣಕ್ಕೆ ಸ್ವಸಹಾಯ ಸಂಘಗಳ ಬಲವರ್ಧನೆಗೊಳಿಸಿ ಬಡತನ ನಿರ್ಮೂಲನೆಗೆ ತಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)ದಡಿ ನೆರವು ಪಡೆದ ಬೆಳಾಲಿನ ಮಹಿಳೆಯರ ಸ್ವಸಹಾಯ ಗುಂಪೊಂದು ಕೃಷಿ ಚಟುವ ಟಿಕೆಯಲ್ಲಿ ಸಾಧನೆ ಮೆರೆದಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ದೊಂಪದ ಪಲ್ಕೆ ಆಸುಪಾಸಿನ ಮಹಿಳೆಯರ ಕಸ್ತೂರ್ಬಾ ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯೆಯರು ಬಾಳೆ ತೋಟ ಬೆಳೆದು ಬೆಳಾಲು ಗ್ರಾಮಕ್ಕೆ ಪ್ರೇರಣೆಯಾಗಿದ್ದಾರೆ. ಸಂಘದ ಮೇಲುಸ್ತುವಾರಿಯಾಗಿರುವ ಮಧುರಾ ಬೆಳಾಲು ಗ್ರಾ.ಪಂ. ಮಟ್ಟದ ಒಕ್ಕೂಟಕ್ಕೂ ಅಧ್ಯಕ್ಷೆ. ಹರಿಣಾಕ್ಷಿ ಕಾರ್ಯ ದರ್ಶಿಯಾಗಿದ್ದು, ಭವ್ಯಾ, ಯಶೋದಾ, ವನಿತಾ, ಸೀತಾಲಕ್ಷ್ಮೀ ಮತ್ತು ಕಮಲಾ ಅವರನ್ನೊಳಗೊಂಡ ಗುಂಪು ಮಾದರಿ ಕೃಷಿ ಕಾಯಕದಲ್ಲಿ ಯಶಸ್ವಿಯಾಗಿದೆ.
ಉದ್ಯೋಗವಿಲ್ಲ ಎಂದು ಕೊರಗುವ ಬದಲು ಬಾಳೆ ಕೃಷಿ ಮಾಡುವ ಮುಂದಾ ಲೋಚನೆಯೊಂದಿಗೆ ಕಾರ್ಯ ನಿರತರಾಗಿ ಒಂದೂವರೆ ವರ್ಷಗಳಿಂದ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಜಿಲ್ಲೆಯ ಸ್ವಸಹಾಯ ಗುಂಪುಗಳ ಪೈಕಿ ಸಕ್ರಿಯ ಹಾಗೂ ಪರಿಣಾಮಕಾರಿ ಗುಂಪು ಎಂಬ ಗೌರವಕ್ಕೂ ಪಾತ್ರವಾಗಿದೆ.
ಲೀಸ್‌ಗೆ ಜಮೀನು
ಸ್ವಸಹಾಯ ಗುಂಪಿನ ಸದಸ್ಯರಲ್ಲಿ ಓರ್ವರಾದ ಕಮಲಾ ಅವರಿಂದ ವರ್ಷಕ್ಕೆ 20 ಸಾವಿರ ರೂ.ಗೆ ಎರಡು ವರ್ಷದ ಅವಧಿಗೆ ಒಂದು ಎಕ್ರೆ ಜಮೀನು ಲೀಸ್‌ಗೆ ಪಡೆದಿದ್ದಾರೆ. ಜಮೀನನ್ನು ಜೆಸಿಬಿ ಮುಖೇನ ಹದ ಮಾಡಿ ಬಾಳೆ ತೋಟ ನಿರ್ಮಿಸಿದ್ದಾರೆ. 1,000 ಸಾವಿರ ಕ್ಯಾವಂಡೀಸ್, 500 ನೇಂದ್ರ ಸೇರಿ 1,500 ಬಾಳೆ ಬೆಳೆದಿದ್ದಾರೆ. 38 ರೂ. ನಂತೆ ಗಿಡಗಳನ್ನು ಬೆಂಗಳೂರಿನಿಂದ ತರಿಸಿಕೊಡುವಲ್ಲಿ ಎನ್‌ಆರ್‌ಎಲ್‌ಎಂ ಸಹಕರಿಸಿದೆ.
ಬಾಳೆ ಗಿಡ ನೆಟ್ಟ ಏಳು ತಿಂಗಳಲ್ಲಿ ಕ್ಯಾವಂಡೀಸ್ ತಳಿ ಗೊನೆ ಬಿಟ್ಟಿದೆ. ಜೈವಿಕ ಗೊಬ್ಬರ ಜತೆಗೆ ಕಾಯಿ ಸಂಪದ್ಭರಿತವಾಗಿ ಬೆಳೆಯಲು ಗೊನೆಯ ಹೂ ತೆಗೆದು ಕಡಲೆ ಹಿಟ್ಟು, ಬೆಲ್ಲ, ಗೋಮಯ, ಗೋಮೂತ್ರ ಬಳಸಿ ನಿರ್ಮಿಸಿದ ಜೀವಾಮೃತ ಕಟ್ಟಲಾಗಿದೆ. ಕಾಡುಪ್ರಾಣಿಗಳ ಹಾವಳಿ ತಪ್ಪಿಸುವ ಸಲುವಾಗಿ 50 ಸಾವಿರ ರೂ. ವ್ಯಯಿಸಿ ಸೋಲಾರ್ ಬೇಲಿ ನಿರ್ಮಿಸಿದ್ದಾರೆ.
ಬೇಕಿದೆ ಮಾರುಕಟ್ಟೆ
ಸಾವಯವ ಕೃಷಿಗೆ ಬೇಡಿಕೆ ಉತ್ತಮ ವಾಗಿದ್ದರೂ ಮಾರುಕಟ್ಟೆ ಒದಗಿಸುವುದು ಸವಾಲಾಗಿದೆ. ಹಲವೆಡೆ ಮಾತುಕತೆ ನಡೆಸಿದರೂ ಸೂಕ್ತ ಬೆಲೆ ದೊರೆಯುವ ಬಗ್ಗೆ ಆತಂಕ ಇವರಲ್ಲಿದೆ. ಈಗಾಗಲೇ ವಿತರಕರಲ್ಲಿ ಮಾತುಕತೆ ನಡೆಸಲಾಗಿದ್ದು, ನೇರವಾಗಿ ಸ್ಥಳೀಯ ಮಾರುಕಟ್ಟೆ ದೊರೆತಲ್ಲಿ ಲಾಭದಾಯಕವಾಗಲಿದೆ. ಇಷ್ಟು ಮಾತ್ರವಲ್ಲದೆ ಸದಸ್ಯರು ಟೈಲರಿಂಗ್, ಎಂಬಾùಡರಿ, ಜೇನು ಸಾಕಣೆ, ತರಕಾರಿ ಬೆಳೆ, ಅಣಬೆ ಕೃಷಿ ಮತ್ತು ಮೀನು ಮರಿ ಸಾಕಾಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅಣಬೆ ಬೆಳೆಯ ತರಬೇತಿ ಪಡೆದು ಅನೇಕ ಪ್ರಯೋಗಗಳ ಮೂಲಕ ಸ್ಥಳೀಯ ಮಾರುಕಟ್ಟೆಯನ್ನು ಇವರೇ ಬೆಳೆಸಿರುವುದು ಸಾಧನೆ. ಈ ಮೂಲಕ ಸುತ್ತಮುತ್ತ ಹತ್ತಾರು ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ. ಜಿಲ್ಲಾದ್ಯಂತ ಅನೇಕ ಕೃಷಿಕರು ಇವರ ಬೆಳೆನಿರ್ವಹಣೆ ಕುರಿತು ಮಾಹಿತಿ ಪಡೆಯುವ ಜತೆಗೆ ಸಲಹೆ ನೀಡುತ್ತಿದ್ದಾರೆ. ನಮಗೆ ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಹಾಗೂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಯಾನಂದ್ ತರಬೇತಿ ನೀಡಿದ್ದಾರೆ ಎಂದು ಬೆಳಾಲು ಗ್ರಾ.ಪಂ. ಒಕ್ಕೂಟ ಅಧ್ಯಕ್ಷೆ ಮಧುರಾ ಹರ್ಷ ವ್ಯಕ್ತಪಡಿಸಿದ್ದಾರೆ.
ಏನಿದು ಎನ್‌ಆರ್‌ಎಲ್‌ಎಂ ಯೋಜನೆ?
ಪ್ರತೀ ಬಿಪಿಎಲ್ ಕುಟುಂಬದ ಕನಿಷ್ಠ ಒಬ್ಬ ಮಹಿಳೆಯನ್ನು ಸ್ವ-ಸಹಾಯ ಸಂಘಗಳ ಸಮೂಹದಲ್ಲಿ ಸೇರಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ ಬಡಕುಟುಂಬಗಳನ್ನು ಅಭಿವೃದ್ಧಿ ಪಡಿಸುವುದೇ ಎನ್‌ಆರ್‌ಎಲ್‌ಎಂ ಯೋಜನೆಯ ಮೂಲ ಉದ್ದೇಶ. ಕನಿಷ್ಠ 10-15 ಮಹಿಳೆಯರನ್ನು ಹೊಂದಿರುವ ಸ್ವಸಹಾಯ ಸಂಘಗಳು ಎನ್‌ಆರ್‌ಎಲ್‌ಎಂ ಯೋಜನೆಯ ಪಂಚಸೂತ್ರ ಮತ್ತು ದಶಸೂತ್ರಗಳಿಗೆ ಅಣುಗುಣವಾಗಿ ಸಕ್ರಿಯವಾಗಿರಬೇಕು. 15 ಸಾವಿರ ರೂ.ನಿಂದ ಲಕ್ಷ ರೂ.ವರೆಗೆ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಈಗಾಗಲೇ ದ.ಕ. ಜಿಲ್ಲೆಯಲ್ಲಿ ಸಂಜೀವಿನಿ ಯೋಜನೆಯು ಸ್ವಸಹಾಯ ಗುಂಪುಗಳನ್ನು ಸಕ್ರಿಯವಾಗಿ ಮಾಡಿದ್ದಲ್ಲದೆ ಗ್ರಾ.ಪಂ. ಮಟ್ಟದ 167 ಒಕ್ಕೂಟ, ವಾರ್ಡ್ ಮಟ್ಟದಲ್ಲಿ 692 ಒಕ್ಕೂಟ, 5,122 ಸಂಜೀವಿನಿ ಸ್ವಸಹಾಯ ಸಂಘಗಳು ಹಾಗೂ 60 ಸಾವಿರ ಮಹಿಳಾ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲೆಗೆ ಮಾದರಿ
ಬೆಳಾಲು ಗ್ರಾ.ಪಂ. ಸಂಜೀವಿನಿ ಸ್ವಸಹಾಯ ಒಕ್ಕೂಟ ಜಿಲ್ಲೆಗೆ ಮಾದರಿಯಾಗಿದೆ. ತರಬೇತಿ, ಮೂಲ ಸೌಕರ್ಯ ಉದ್ದೇಶಗಳಿಗೆ ರಾಜ್ಯದ ಆರು ಒಕ್ಕೂಟಗಳ ಪೈಕಿ ಬೆಳಾಲು ಒಕ್ಕೂಟಕ್ಕೆ 9.6 ಲಕ್ಷ ರೂ. ಅನುದಾನ ಮಂಜೂರಾಗಿದೆ. ಇದು ಜಿಲ್ಲೆಯ ಸೊÌàದ್ಯೋಗ ಬಯಸುವ ಮಹಿಳೆಯರಿಗೆ ಪ್ರೇರಣೆಯಾಗಿದೆ.
-ಮಧುಕುಮಾರ್ ಆರ್., ಯೋಜನಾ ನಿರ್ದೇಶಕರು ದ.ಕ.ಜಿ.ಪಂ. ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.