ಸರ್ವರ್ ಸಮಸ್ಯೆ: ಸರಕಾರಿ ಕಚೇರಿಗಳಲ್ಲಿ ಸರತಿ ಸಾಲು
ಆಧಾರ್ ನೋಂದಣಿಗೆ ಸಮಸ್ಯೆ, ಸರಕಾರಿ ಕೆಲಸಗಳಲ್ಲೂ ವಿಳಂಬ
Team Udayavani, Jul 20, 2019, 5:00 AM IST
ಪುತ್ತೂರು: ಸಾರ್ವಜನಿಕ ಸರಕಾರಿ ಸೇವಾ ಕಚೇರಿಗಳಲ್ಲಿ ಸರ್ವರ್ ಡೌನ್ ಸಮಸ್ಯೆ ಕೆಲವು ದಿನಗಳಿಂದ ತೀವ್ರಗೊಂಡಿದ್ದು, ಅಗತ್ಯಗಳಿಗಾಗಿ ಕಚೇರಿ ಬರುವ ಸಾರ್ವಜನಿಕರು ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗದೆ ಹಿಂತಿರುಗುವ ಸ್ಥಿತಿ ನಿರ್ಮಾಣವಾಗಿದೆ.
ಪುತ್ತೂರು ಮಿನಿ ವಿಧಾನಸೌಧ, ಸರಕಾರಿ ಆಸ್ಪತ್ರೆ, ತಾ.ಪಂ., ತಾಲೂಕು ಕಚೇರಿ ಸಹಿತ ಎಲ್ಲ ಸರಕಾರಿ ಕಚೇರಿಗಳಲ್ಲಿ ಈ ಸಮಸ್ಯೆ ಬಿಗಡಾಯಿಸಿದೆ. ನಗರದ ಆಧಾರ್ ಕೇಂದ್ರದಲ್ಲಿ ಎರಡು ದಿನಗಳಿಂದ ಕೆಲವೇ ಮಂದಿಗೆ ಆಧಾರ್ ನೋಂದಣಿಯಾಗಿದೆ. ಖಾಸಗಿ ಸೇವಾ ಕೇಂದ್ರಗಳಲ್ಲೂ ನೋಂದಣಿ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ತಾಂತ್ರಿಕ ದೋಷ
ಪುತ್ತೂರಿನ ಹೆಚ್ಚಿನ ಸರಕಾರಿ ಕಚೇರಿಗೆ ಬಿಎಸ್ಸೆನ್ನೆಲ್ ಇಂಟರ್‌ನೆಟ್ ಇದೆ. ಅವರ ತಾಂತ್ರಿಕ ದೋಷದಿಂದಾಗಿ ಸಮಸ್ಯೆಯಾಗುತ್ತಿದೆ ಎಂದು ಸರಕಾರಿ ಕಚೇರಿಗಳ ಸಿಬಂದಿ ಆರೋಪಿಸಿದರೆ, ಇಲಾಖೆಗಳು ವೆಬ್‌ಸೈಟ್ ನಿರ್ವಹಣೆಗೆ ಹಾಗೂ ಇ-ತಂತ್ರಾಂಶದ ಸೇವೆಗೆ ಬಳಕೆಗೆ ಅನುಗುಣವಾಗಿ ಸರ್ವಿಸ್ ಪ್ರೊವೈಡರ್‌ಗೆ ಇಂತಿಷ್ಟು ಹಣ ನೀಡಬೇಕು. ನಿಗದಿಗಿಂತ ಹೆಚ್ಚುವರಿಯಾಗಿ ಇ-ತಂತ್ರಾಂಶಗಳನ್ನು ಬಳಸಿಕೊಂಡಾಗ ಸರ್ವರ್ ಡೌನ್ ಆಗುತ್ತದೆ. ಬಿಎಸ್ಸೆನ್ನೆಲ್ ಸಂಸ್ಥೆಗೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಸೇವೆಗೆ ತೊಂದರೆ
ಸರ್ವರ್ ಡೌನ್ ಇರುವ ಕಾರಣದಿಂದ ಸರಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುವ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.
ಕಾರ್ಡ್ ಮೂಲಕ ಪರಿಶೀಲನೆ ಹಾಗೂ ಇಲಾಖಾ ದಾಖಲೆಗಳ ನಮೂದೀಕರಣ ಕೆಲಸಗಳು ಸರ್ವರ್ ವೇಗವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ವ್ಯತ್ಯಯವಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ.
ನಗರಸಭಾ ಕಚೇರಿಯಲ್ಲಿ ಇ-ತಂತ್ರಾಂಶ ಸಮರ್ಪಕವಾಗಿ ಕೆಲಸ ಮಾಡದ ಕಾರಣ ನೀರಿನ ಬಿಲ್ ಪಾವತಿಗೂ ತೊಂದರೆಯಾಗಿದೆ. ಸರ್ವರ್ ಡೌನ್ ಕಾರಣಕ್ಕಾಗಿ ಪುತ್ತೂರು ಮಿನಿ ವಿಧಾನಸೌಧದೊಳಗೆ ಬಹುತೇಕ ಜನರು ಕಾದು ನಿರಾಸೆಯಿಂದ ಹಿಂದಿರುಗುತ್ತಿದ್ದ ದೃಶ್ಯಗಳು ಕಂಡುಬಂದಿದೆ.
ಶೀಘ್ರ ಸರಿಪಡಿಸಲಾಗುವುದು
ಸರಕಾರಿ ಕಚೇರಿಗಳಲ್ಲಿ ಆಂತರಿಕ ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ ಈ ಸರ್ವರ್ ಸಮಸ್ಯೆ ಇಲ್ಲ. ಆದರೆ ಸಾರ್ವಜನಿಕ ಸೇವಾ ವಿಭಾಗದಲ್ಲಿ ಮಾತ್ರ ಈ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸಿದೆ. ಇಲಾಖೆಗಳ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಬಿಎಸ್ಸೆನ್ನೆಲ್ ನೆಟ್ವರ್ಕ್ ಪ್ರೊವೈಡ್ ಮಾಡಲಾಗುತ್ತಿದೆ. ಸರ್ವರ್ ಡೌನ್‌ನ ತಾಂತ್ರಿಕ ತೊಂದರೆಯ ಕುರಿತು ಸಂಬಂಧಪಟ್ಟವರಲ್ಲಿ ವಿಚಾರಿಸಿ ಶೀಘ್ರ ಸರಿಪಡಿಸಲಾಗುವುದು.
– ಅನಂತ ಶಂಕರ್ ತಹಶೀಲ್ದಾರ್, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.