ಸರ್ವರ್ ಸಮಸ್ಯೆ ನೆಪ; ಗ್ರಾಹಕರಿಂದ ತರಾಟೆ
Team Udayavani, Jul 6, 2019, 5:00 AM IST
ವೇಣೂರು: ಸರ್ವರ್ ಸಮಸ್ಯೆ ನೆಪವೊಡ್ಡಿ ಪಡಿತರ ಗ್ರಾಹಕರನ್ನು ಸತಾಯಿಸಿದ ಸಂಚಾರಿ ಪಡಿತರ ವಿತರಕ ರನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ಸಂಭವಿಸಿತು. ಪ್ರತಿ ತಿಂಗಳ 5 ಮತ್ತು 14ನೇ ತಾರೀಕಿಗೆ ಮೂಡುಕೋಡಿ ಗ್ರಾಮದ ಜನತೆಗೆ ಪಡಿತರ ವಿತರಣೆ ಮಾಡಲಾಗುತ್ತದೆ. ಇದಕ್ಕಾಗಿ ಗ್ರಾಹಕರು ಬೆಳಗ್ಗೆ 7ರಿಂದ ಸರದಿ ಸಾಲಿನಲ್ಲಿ ಕಾಯುವುದು ಮಾಮೂಲಿ ಆಗಿದೆ. ಆ ದಿನ ವಾಹನದಲ್ಲಿ ಪಡಿತರ ಸಾಮಗ್ರಿ ಮುಗಿದರೆ ಮತ್ತೆ 14ನೇ ತಾರೀಕಿನವರೆಗೆ ಗ್ರಾಹಕರು ಕಾಯಬೇಕಾಗುತ್ತದೆ.
ಶುಕ್ರವಾರವೂ ಗ್ರಾಹಕರು ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ಕಾದಿದ್ದರು. ಬೆಳಗ್ಗೆ 10.30ಕ್ಕೆ ಪಡಿತರ ವಿತರಣೆ ವಾಹನ ಉಂಬೆಟ್ಟುವಿಗೆ ಬಂದಿದೆ. ಮಧ್ಯಾಹ್ನದ ವರೆಗೂ ಸರ್ವರ್ ಸಮಸ್ಯೆ ನೆಪವೊಡ್ಡಿ ಪಡಿತರ ವಿತರಣೆ ಮಾಡಿಲ್ಲ. ಇದರಿಂದ ಸ್ಥಳೀಯ ಜನಪ್ರತಿನಿಧಿಗಳಾದ ರಾಜೇಶ ಪೂಜಾರಿ, ಅನೂಪ್ ಜೆ. ಪಾಯಸ್, ಶಶಿಧರ ಶೆಟ್ಟಿ, ಗ್ರಾಹಕರು ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಆಹಾರ ಇಲಾಖೆಗೆ ಕರೆ ಮಾಡಿದ್ದು, ಸರ್ವರ್ ಲೋಪವನ್ನು ಅಲ್ಲಗಳೆದು ಮೊಬೈಲ್ ವೀಡಿಯೋ ಕಾಲ್ ಮೂಲಕ ಪಡಿತರ ವಿತರಣೆ ಮಾಡುವಂತೆ ವಿತರಕರಿಗೆ ತಿಳಿಸಿದ್ದಾರೆ. ತತ್‌ಕ್ಷಣವೇ ಸರ್ವರ್ ದೋಷ ಸರಿಯಾಗಿದೆ ಎಂದು ವಿತರಕರು ಉತ್ತರ ನೀಡಿ ಪಡಿತರ ವಿತರಣೆ ಮಾಡಿದ್ದಾರೆ.
ಬಸ್ ತಂಗುದಾಣದಲ್ಲಿ ಕಂಪ್ಯೂಟರ್ ಜೋಡಿಸಿ ಪಡಿತರ ವಿತರಣೆಯಿಂದ ಪ್ರಯಾಣಿಕರಿಗೂ ಗ್ರಾಹಕರು ರಸ್ತೆಯಲ್ಲೇ ಸರದಿ ಸಾಲು ನಿಲ್ಲಬೇಕಾಗಿರುವುದರಿಂದ ಸುಗಮ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ.
ಮೇಲಧಿಕಾರಿಗಳಿಗೆ ಕರೆ
ಮಧ್ಯಾಹ್ನದವರೆಗೂ ಪಡಿತರ ವಿತರಣೆ ಆಗದೇ ಇದ್ದಾಗ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದು, ಸ್ಪಂದನೆ ಸಿಗಲಿಲ್ಲ. ಮಾಜಿ ಶಾಸಕ ಕೆ. ವಸಂತ ಬಂಗೇರರಿಗೆ ಕರೆ ಮಾಡಿ ಸಮಸ್ಯೆಯನ್ನು ವಿವರಿಸಿದ್ದು, ಅವರು ಆಹಾರ ಸರಬರಾಜು ಇಲಾಖೆಯ ಮೇಲಧಿ ಕಾರಿಗಳಿಗೆ ಕರೆ ಮಾಡಿ ಆನ್‌ಲೈನ್ ಲೈವ್ ವ್ಯವಸ್ಥೆ ಮಾಡಿದಾಕ್ಷಣ ಸಮಸ್ಯೆ ನಿವಾರಣೆ ಆಗಿದೆ.
-ರಮೇಶ್ ಆಚಾರ್ಯ ಉರಾಬೆ, ಗ್ರಾಹಕ
ಪಡಿತರ ವಿತರಣೆ ಕೇಂದ್ರ ಸ್ಥಾಪನೆಗೆ ಆಗ್ರಹ
ವೇಣೂರಿನಲ್ಲಿ ಪ್ರಾ. ಕೃಷಿಪತ್ತಿನ ಸಹಕಾರಿ ಸಂಘವಿದೆ. ಇಲ್ಲಿ ವೇಣೂರು, ಬಜಿರೆ, ಕರಿಮಣೇಲು ಗ್ರಾಮಸ್ಥರಿಗೆ ಪಡಿತರ ವಿತರಿಸಲಾಗುತ್ತದೆ. ಮೂಡುಕೋಡಿ, ಗುಂಡೂರಿ ಗ್ರಾಮದಲ್ಲಿ ಪಡಿತರ ವಿತರಣೆಗೆ ಕಟ್ಟಡದ ವ್ಯವಸ್ಥೆ ಇಲ್ಲ. ಬಸ್‌ತಂಗುದಾಣದಲ್ಲೇ ವ್ಯವಸ್ಥೆ ಮಾಡಲಾಗುತ್ತಿದೆ. ವಿತರಕರು ಪಡಿತರ ಸಾಮಗ್ರಿ ವಾಹನವನ್ನು ಉಂಬೆಟ್ಟು ರಸ್ತೆ ಬದಿಯ ಮನೆ ಅಂಗಳದಲ್ಲಿ ನಿಲ್ಲಿಸಿ, ಕಂಪ್ಯೂಟರ್ ಅನ್ನು ಬಸ್ ತಂಗುದಾಣದಲ್ಲಿ ಅಳವಡಿಸುತ್ತಾರೆ. ಸರದಿ ಸಾಲಿನಲ್ಲಿ ಬರುವ ಗ್ರಾಹ ಕರು ಇಲ್ಲಿ ಬೆರಳಚ್ಚು ನೀಡಿ ಚೀಟಿ ಪಡೆದು ವಾಹನದಿಂದ ಸಾಮಗ್ರಿ ಪಡೆಯಬೇಕಾಗುತ್ತದೆ. ಶೀಘ್ರ ಇಲ್ಲೊಂದು ಪಡಿತರ ವಿತರಣೆ ಕೇಂದ್ರ ಸ್ಥಾಪನೆಯಾಗಬೇಕು ಎಂಬುದು ಗ್ರಾಮಸ್ಥರ ಬೇಡಿಕೆ.
ಬೆರಳಚ್ಚಿನ ವ್ಯವಸ್ಥೆ
ಮೂಡುಕೋಡಿ ಗ್ರಾಮದಲ್ಲಿ ಪಡಿತರ ವಿತರಣೆಯಲ್ಲಿ ಗೊಂದಲ ಉಂಟಾಗಿದೆ ಎಂಬ ಮಾಹಿತಿ ಬಂದಾಗ ಆನ್‌ಲೈನ್‌ನಲ್ಲಿ ವಿತರಣೆಯನ್ನು ನೇರ ಸಂಪರ್ಕದಲ್ಲಿ ನೋಡಿದ್ದೇವೆ. ಸರ್ವರ್‌ನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ತಡವಾಗಿ ವಿತರಣೆ ಪ್ರಾರಂಭಿಸಿದ್ದು, ಗೊಂದಲಕ್ಕೆ ಕಾರಣ ಆಗಿರಬಹುದು. ಈ ಹಿಂದೆ ಮ್ಯಾನ್ಯುವಲ್ ಆಗಿ ವಿತರಣೆ ಮಾಡಲಾಗುತ್ತಿತ್ತು. ಈಗ ಬೆರಳಚ್ಚಿನ ವ್ಯವಸ್ಥೆ ಬಂದಿದೆ.
– ಸುನಂದಾ, ಮ್ಯಾನೇಜರ್, ಆಹಾರ-ನಾಗರಿಕ ಸರಬರಾಜು ಇಲಾಖೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.