Puttur ಸೇವಾ ನ್ಯೂನತೆ ಹಿನ್ನೆಲೆ: ಗ್ರಾಹಕ ನ್ಯಾಯಾಲಯದಿಂದ ಮೆಸ್ಕಾಂಗೆ ದಂಡ
Team Udayavani, Nov 22, 2023, 11:38 PM IST
ಪುತ್ತೂರು: ವಿದ್ಯುತ್ ಸಂಪರ್ಕ ನಿಲುಗಡೆಗೊಳಿಸುವಂತೆ ಕೋರಿ ಪುತ್ತೂರು ಮೆಸ್ಕಾಂ ಗ್ರಾಮಾಂತರ ವಿಭಾಗಕ್ಕೆ ನೀಡಿದ ನಿಲುಗಡೆ ಅರ್ಜಿಯನ್ನು ಕಡೆಗಣಿಸಿ, ಸೇವಾ ನ್ಯೂನತೆ ಎಸಗಿದ ಮೆಸ್ಕಾಂಗೆ ರಾಜ್ಯ ಗ್ರಾಹಕ ಆಯೋಗವು 51,974 ರೂ. ದಂಡ ಮತ್ತು ಈ ಮೊತ್ತವನ್ನು ದೂರುದಾರರಿಗೆ ಪರಿಹಾರ ರೂಪದಲ್ಲಿ ಪಾವತಿಸುವಂತೆ ಆದೇಶಿಸಿದೆ.
ಕೊಳ್ತಿಗೆ ಗ್ರಾಮದ ಬಾಯಾಂಬಾಡಿ ಲೋಕನಾಥ ಗೌಡ ತನಗೆ ಸೇರಿದ ವಿದ್ಯುತ್ ಮೀಟರನ್ನು ನಿಲುಗಡೆಗೊಳಿಸುವಂತೆ ಕೋರಿ 2007ರಲ್ಲಿ ಮೆಸ್ಕಾಂ ಗ್ರಾಮಾಂತರ ವಿಭಾಗ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭ ಅದೇ ವಿದ್ಯುತ್ ಮೀಟರನ್ನು ರಾಮಕೃಷ್ಣ ಗೌಡ ಅವರು ಅಕ್ರಮವಾಗಿ ಉಪಯೋಗಿಸುತ್ತಿರುವ ಕುರಿತು ದೂರನ್ನು ನೀಡಿದ್ದರು. ಆದರೆ ಮೆಸ್ಕಾಂ ಯಾವುದೇ ಕ್ರಮಕೈಗೊಳ್ಳಲಿಲ್ಲ.
ಆ ಬಳಿಕ ಮೆಸ್ಕಾಂ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಲೋಕನಾಥ ಗೌಡ ಅವರ ಮೇಲೆಯೇ 37,532 ರೂ. ದಂಡ ವಿಧಿಸಿದ್ದರು. ಈ ಪೈಕಿ ದಂಡದ ಮೊತ್ತದಲ್ಲಿ 18,499 ರೂ. ಅನ್ನು ಲೋಕನಾಥರು ಮೆಸ್ಕಾಂಗೆ ಪಾವತಿಸಿದ್ದರು ಮಾತ್ರವಲ್ಲದೇ ಈ ಕ್ರಮವನ್ನು ಪ್ರಶ್ನಿಸಿ ದ.ಕ. ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲಿಸಿದ್ದರು.
ದೂರು ಅರ್ಜಿಯನ್ನು ಪುರಸ್ಕರಿ ಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ ದೂರುದಾರ ಪಾವತಿಸಿದ್ದ 18,499 ರೂ. ಪರಿಹಾರವಾಗಿ 10 ಸಾವಿರ ರೂ. ಹಾಗೂ ದೂರಿನ ಖರ್ಚಿನ ಬಗ್ಗೆ 10 ಸಾವಿರ ರೂ. ದಂಡ ಪಾವತಿಸಬೇಕೆಂದು ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿದ ಮೆಸ್ಕಾಂ ರಾಜ್ಯ ಗ್ರಾಹಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಆಯೋಗವು ಮೇಲ್ಮನವಿಯನ್ನು ತಿರಸ್ಕರಿಸಿ ಜಿಲ್ಲಾ ಗ್ರಾಹಕ ಆಯೋಗದ ಆದೇಶವನ್ನು ಎತ್ತಿ ಹಿಡಿದಿದೆ. ದೂರುದಾರರ ಪರವಾಗಿ ಪುತ್ತೂರಿನ ನ್ಯಾಯವಾದಿ ಗಿರೀಶ್ ಮಳಿ, ಕುಮಾರ್‌ಎ.ಪಿ., ನಿಶಾಂತ್ ಸುವರ್ಣ ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.