Session: ಬೆಳೆಗಳ ಹಾನಿಯುಂಟು ಮಾಡುವ ಕಾಡಾನೆಗಳ ಕೊಲ್ಲಲು ಅನುಮತಿ ನೀಡಿ: ಹರೀಶ್‌ ಪೂಂಜಾ

ಅರಣ್ಯ ಇಲಾಖೆಯು ವಿದ್ಯುದಾಘಾತ ನೀಡಿ ಕೊಲ್ಲುವಾಗ ರೈತರ ಕೋವಿಗೂ ಅವಕಾಶ ಕೊಡಿ: ಬಿಜೆಪಿ ಶಾಸಕ

Team Udayavani, Dec 13, 2024, 8:54 PM IST

BJP-MLA-Session

ಬೆಳಗಾವಿ (ಸುವರ್ಣಸೌಧ): ಆನೆಗಳಿಂದ ಕಾಡಿನಂಚಿನ ಜನರಿಗೆ ತೊಂದರೆಯಾಗುತ್ತಿದ್ದು, ರೈತರಿಗೆ ಕೋವಿ ಪಡೆಯಲು ಪರವಾನಗಿ ನೀಡಿ, ಆನೆಗಳನ್ನು ಕೊಲ್ಲಲು ಅನುಮತಿ ನೀಡಿ ಎಂದು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಮನವಿ ಮನವಿ ಮಾಡಿದರು.

ಪ್ರಶ್ನೋತ್ತರ ಕಲಾಪದಲ್ಲಿ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಉತ್ತರಕ್ಕೆ ಪ್ರತಿಕ್ರಿಯಿಸಿದ ಶಾಸಕ ಪೂಂಜಾ ಬೆಳ್ತಂಗಡಿ ತಾಲೂಕಿನಲ್ಲಿ ಆನೆಗಳ ಹಾವಳಿ ವಿಪರೀತವಾಗಿ ರೈತರು ಬೆಳೆಗಳ ಹಾನಿಗೆ ತತ್ತರಿಸಿದ್ದಾರೆ. ಅರಣ್ಯ ಇಲಾಖೆಗೆ ರಕ್ಷಣೆಗಾಗಿ ಕೋರಿದರೆ ಡಿಎಫ್‌ಒ ಸೇರಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸರಕಾರದ ವರದಿ ಪ್ರಕಾರ ಇಲಾಖೆಯ ವಿದ್ಯುದಾಘಾತಕ್ಕೆ ಸಿಲುಕಿ 2024ರಲ್ಲಿ 26 ಆನೆಗಳು ಮೃತಪಟ್ಟಿವೆ. ಹಾಗಿದ್ದ ಮೇಲೆ ರೈತರ ಕೋವಿಗೂ ಅನುಮತಿ ನೀಡಿ, ಆನೆ ಕೊಲ್ಲಲು ರೈತರಿಗೂ ಅವಕಾಶ ಕೊಡಿ. ಇನ್ನು ಆನೆ ಹಾವಳಿ ತಡೆಯುವ ಯೋಜನೆಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಪೂಂಜಾ ಸರ್ಕಾರದ ಗಮನಕ್ಕೆ ತಂದರು.

ಅವ್ಯವಹಾರವಿದ್ದರೆ ದೂರು ಕೊಡಿ: 
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಈ ಹೇಳಿಕೆ ದುರದೃಷ್ಟಕರ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು. ಆನೆಗಳ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್‌, ತಂತಿಬೇಲಿ, ಆನೆಗಳ ಕಂದಕ ನಿರ್ಮಾಣದಂತಹ ಕಾಮಗಾರಿಗಳಲ್ಲಿ ಅಕ್ರಮ, ಅವ್ಯವಹಾರ ಆಗಿದೆ ಎಂದು ದೂರು ಬಂದಿಲ್ಲ, ಈಗಲೂ ದೂರು ಕೊಟ್ಟರೆ ನಿಷ್ಪಕ್ಷಪಾತ ತನಿಖೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಮನುಷ್ಯರಿಗೆ ಬದುಕುವ ಹಕ್ಕಿರುವಂತೆಯೇ ವನ್ಯಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

ಆನೆಗಳ ಕಾರ್ಯಪಡೆ ರಚನೆ: 

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆ, ಕಾರ್ಯಾಚರಣೆಗೆ ತಂಡ ರಚಿಸಲಾಗಿದ್ದು, ಹಾಸನ, ಚಿಕ್ಕಮಗಳೂರು, ಮೈಸೂರು, ಕೊಡಗು, ರಾಮನಗರ, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8 ಆನೆ ಕಾರ್ಯಪಡೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು. ಬೇರೆ ಕಡೆಗಳಿಗೆ ಹೋಲಿಸಿದರೆ ಬೆಳ್ತಂಗಡಿಯಲ್ಲಿ ಆನೆಯ ಹಾವಳಿ ಕಡಿಮೆಯಿದೆ. ಆನೆಗಳನ್ನು ನಿಯಮನುಸಾರ ಹಿಮ್ಮೆಟ್ಟಿಸುವ ಕೆಲಸ ಮಾಡುತ್ತೇವೆ. ಅರಣ್ಯ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ದೂರುಗಳಿದ್ದರೆ ನಮಗೆ ನೀಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಖಂಡ್ರೆ ಭರವಸೆ ನೀಡಿದರು.

ರೈತರ ಕೈಗೆ ಬರುವಾಗ ಬೆಳೆ ನಾಶ:
ಆನೆಗಳ ಕೊಲ್ಲಲು ರೈತರಿಗೂ ಅವಕಾಶ ಕೊಡಿ ಎಂಬ ಶಾಸಕ ಹರೀಶ್‌ ಪೂಂಜಾ ಹೇಳಿಕೆಗೆ ಸ್ಪಷ್ಟನೆ ನೀಡಿದ ಶಾಸಕ ಆರಗ ಜ್ಞಾನೇಂದ್ರ ʼನಾವು ಯಾರೂ ಪ್ರಾಣಿಗಳ ಕೊಲೆ ಮಾಡಬೇಕು ಅಂತ ಹೇಳಲ್ಲ. ಬೆಳೆ ಕೈಗೆ ಬರುವ ಹೊತ್ತಿಗೆ ಪ್ರಾಣಿಗಳಿಂದ ನಾಶವಾಗುತ್ತವೆ. ಸರಕಾರ ಪರಿಹಾರ ಕೊಡುವುದು ಏನಕ್ಕೂ ಸಾಲಲ್ಲ. ಕ್ಷೇತ್ರದ ಉಂಬಳೆಬೈಲು, ಶಿವಮೊಗ್ಗದಲ್ಲೂ ಪ್ರಾಣಿಗಳ ಹಾವಳಿ ಇದೆ. ಅರಣ್ಯ ಇಲಾಖೆ ವೆಚ್ಚ ಮಾಡುವುದು ಏನೂ ಅಲ್ಲ. ಕಾಡು ಮನುಷ್ಯರಿಗೂ ಬೇಕು, ಪ್ರಾಣಿಗಳಿಗೂ ಬೇಕು, ಪ್ರಾಣಿಗಳಿಗೆ ಮಾತ್ರ ಇರಲಿ ಎಂದರೆ ಆಗುವಂತದ್ದಲ್ಲ ಎಂದು ಹೇಳಿದರು.

ಟಾಪ್ ನ್ಯೂಸ್

Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್‌

Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್‌

Priyank Kharge: ಮಾಣಿಪ್ಪಾಡಿ ಬಾಯಿ ಮುಚ್ಚಿಸಲು 150 ಕೋಟಿ ರೂ. ಆಮಿಷ ಒಡ್ಡಿದ್ದ ವಿಜಯೇಂದ್ರ

Priyank Kharge: ಮಾಣಿಪ್ಪಾಡಿ ಬಾಯಿ ಮುಚ್ಚಿಸಲು 150 ಕೋಟಿ ರೂ. ಆಮಿಷ ಒಡ್ಡಿದ್ದ ವಿಜಯೇಂದ್ರ

Udupi-DC-Dr.-Vidya-kumari

Udupi: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೇಗ ಹೆಚ್ಚಿಸಿ: ಜಿಲ್ಲಾಧಿಕಾರಿ ಸೂಚನೆ

ನೀವೊಬ್ಬರೇ ಗೆದ್ದು ಬಂದವರಾ: ಆಶೋಕ್‌ಗೆ ಸಿಎಂ ತಿರುಗೇಟು

Assembly Session: ನೀವೊಬ್ಬರೇ ಗೆದ್ದು ಬಂದವರಾ: ಆಶೋಕ್‌ಗೆ ಸಿಎಂ ತಿರುಗೇಟು

Assembly Session; ವಕ್ಫ್ ವಿವಾದ ಜಟಾಪಟಿ; ಅರಣ್ಯ ಇಲಾಖೆ, ಶಿಕ್ಷಣ ಸಂಸ್ಥೆಗಳಿಗೂ ನೋಟಿಸ್‌

Assembly Session; ವಕ್ಫ್ ವಿವಾದ ಜಟಾಪಟಿ; ಅರಣ್ಯ ಇಲಾಖೆ, ಶಿಕ್ಷಣ ಸಂಸ್ಥೆಗಳಿಗೂ ನೋಟಿಸ್‌

Reservation ಮಿತಿ ಶೇ. 69ಕ್ಕೆ ಹೆಚ್ಚಿಸಿದರೆ ಅನುಕೂಲ: ಸಚಿವ ಶಿವರಾಜ ಎಸ್‌. ತಂಗಡಗಿ

Reservation ಮಿತಿ ಶೇ. 69ಕ್ಕೆ ಹೆಚ್ಚಿಸಿದರೆ ಅನುಕೂಲ: ಸಚಿವ ಶಿವರಾಜ ಎಸ್‌. ತಂಗಡಗಿ

1-qeqeqweqwe

Rajya Sabha; ರೈತನ ಮಗ vs ಕಾರ್ಮಿಕನ ಮಗ: ಧನ್‌ಕರ್‌-ಖರ್ಗೆ ಮಧ್ಯೆ ಜಟಾಪಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Assembly Session; ವಕ್ಫ್ ವಿವಾದ ಜಟಾಪಟಿ; ಅರಣ್ಯ ಇಲಾಖೆ, ಶಿಕ್ಷಣ ಸಂಸ್ಥೆಗಳಿಗೂ ನೋಟಿಸ್‌

Assembly Session; ವಕ್ಫ್ ವಿವಾದ ಜಟಾಪಟಿ; ಅರಣ್ಯ ಇಲಾಖೆ, ಶಿಕ್ಷಣ ಸಂಸ್ಥೆಗಳಿಗೂ ನೋಟಿಸ್‌

“ಉತ್ತಮ ಸಂಶೋಧಕನಿಗೆ ಉದಾಹರಣೆ ಬನ್ನಂಜೆ’

“ಉತ್ತಮ ಸಂಶೋಧಕನಿಗೆ ಉದಾಹರಣೆ ಬನ್ನಂಜೆ’

Karnataka Govt: 9 ಪ್ರತಿಷ್ಠಾನ, ಟ್ರಸ್ಟ್‌ಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ

Karnataka Govt: 9 ಪ್ರತಿಷ್ಠಾನ, ಟ್ರಸ್ಟ್‌ಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ

ಕೃಷ್ಣರಿಗೆ ಸಂತಾಪ ವೇಳೆ ವಡ್ಡ ಪದ ಬಳಕೆಗೆ ಡಿಕೆಶಿ ವಿಷಾದ

ಕೃಷ್ಣರಿಗೆ ಸಂತಾಪ ವೇಳೆ ವಡ್ಡ ಪದ ಬಳಕೆಗೆ ಡಿಕೆಶಿ ವಿಷಾದ

DKS-Congress

Belagavi: ಕಾಂಗ್ರೆಸ್‌ ಅಧಿವೇಶನಕ್ಕೆ ನೂರು ವರ್ಷ; ಮೈಸೂರು ದಸರಾ ಮಾದರಿ ಸಿಂಗಾರ!: ಡಿಕೆಶಿ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

BJP 2

West Bengal; ಮಸೀದಿಗೆ ಪ್ರತಿಯಾಗಿ ಬಿಜೆಪಿಯಿಂದ ಮಂದಿರ ನಿರ್ಮಾಣ ಘೋಷಣೆ

accident

Palakkad: ಲಾರಿ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾ*ವು

Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್‌

Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್‌

Priyank Kharge: ಮಾಣಿಪ್ಪಾಡಿ ಬಾಯಿ ಮುಚ್ಚಿಸಲು 150 ಕೋಟಿ ರೂ. ಆಮಿಷ ಒಡ್ಡಿದ್ದ ವಿಜಯೇಂದ್ರ

Priyank Kharge: ಮಾಣಿಪ್ಪಾಡಿ ಬಾಯಿ ಮುಚ್ಚಿಸಲು 150 ಕೋಟಿ ರೂ. ಆಮಿಷ ಒಡ್ಡಿದ್ದ ವಿಜಯೇಂದ್ರ

hijab

Thane; ಒಬ್ಬಳೇ ವಾಕಿಂಗ್‌ ಹೋದ ಪತ್ನಿಗೆ ತಲಾಖ್‌: ಪತಿ ವಿರುದ್ಧ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.