ಏಳೆಂಟು ಅವಳಿ ಹಲಸು!
Team Udayavani, Jul 13, 2019, 5:05 AM IST
ನಗರ: ಬಡಗನ್ನೂರು ಗ್ರಾಮದಲ್ಲಿರುವ ಅವಳಿ ವೀರರಾದ ಕೋಟಿ-ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಕೌತುಕವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಹಲಸಿನ ಮರವೊಂದರಲ್ಲಿ ಅವಳಿ ಹಲಸುಗಳು ಸಾಲು ಸಾಲಾಗಿ ಕಾಣಿಸಿಕೊಂಡಿರುವುದು ಕ್ಷೇತ್ರದ ಇತಿಹಾಸಕ್ಕೂ ಪೂರಕವಾಗಿರುವುದು ಕೌತುಕವಾಗಿದೆ.
ಸುಮಾರು ಐನೂರು ವರ್ಷಗಳ ಹಿಂದೆ ಕೋಟಿ-ಚೆನ್ನಯರು ವಾಸವಾಗಿದ್ದ, ಅವರ ತಾಯಿ ದೇಯಿ ಬೈದ್ಯೆತಿ ಮತ್ತು ಮಾವ ಸಾಯನ ಬೈದ್ಯರು ವಾಸವಾಗಿದ್ದ ಈ ಮನೆಯಲ್ಲಿ ಪ್ರಸ್ತುತ ಮೂಲಸ್ಥಾನ ಕ್ಷೇತ್ರ ನಿರ್ಮಾಣವಾಗುತ್ತಿದೆ. ದೇಯಿ ಬೈದ್ಯೆತಿ ಧರ್ಮಚಾವಡಿ ನಿರ್ಮಾಣ ಬಹುತೇಕ ಪೂರ್ಣಗೊಂಡು, ಮೂಲಸ್ಥಾನ ಗರಡಿ ನಿರ್ಮಾಣ ನಡೆಯುತ್ತಿದೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವಂತೆ ಇಲ್ಲಿನ ಹಲಸಿನ ಮರದಲ್ಲಿ ಅವಳಿ ಹಲಸುಗಳು ಮೂಡಿರುವುದು ಅಚ್ಚರಿ ಮೂಡಿಸಿದೆ.
ಒಂದೇ ತೊಟ್ಟಿನಲ್ಲಿ ಎರಡು ಹಣ್ಣುಗಳು ಒಂದಕ್ಕೊಂದು ಅಂಟಿಕೊಂಡೇ ಬೆಳೆದಿವೆ. ಈಗಾಗಲೇ ಎರಡು, ಮೂರು ಅವಳಿ ಹಣ್ಣುಗಳನ್ನು ಕೊಯ್ದು ಬಳಸಲಾಗಿದೆ. ಇನ್ನೂ ಮೂರ್ನಾಲ್ಕು ಜೋಡಿಗಳು ಮರದಲ್ಲಿವೆ. ಮರದಲ್ಲಿ ಈ ಬಾರಿ ಇದುವರೆಗೆ ಟಿಸಿಲೊಡೆದು ಬೆಳೆದಿರುವ ಸುಮಾರು 30ರಷ್ಟು ಹಲಸುಗಳ ಪೈಕಿ ಅರ್ಧದಷ್ಟು ಅವಳಿಗಳಾಗಿರುವುದು ವಿಶೇಷ. ಏಕಕಾಲದಲ್ಲಿ ಏಳೆಂಟು ಅವಳಿಗಳು ಒಡಮೂಡಿದ್ದು ವಿಶೇಷವಾಗಿದೆ.
ಒಂದೇ ಮರದಲ್ಲಿ ಏಳೆಂಟು ಅವಳಿ ಹಲಸುಗಳು ಕಾಣಿಸಿಕೊಂಡಿದೆ. ಪ್ರಾಕೃತಿಕವಾಗಿ ಇದು ಸ್ವಾರಸ್ಯಕರ ಘಟನೆ. ಅದರಾಚೆಗೆ ಕಾರಣವನ್ನು ವಿಮರ್ಶಿಸಲು ಸಾಧ್ಯವಿಲ್ಲ ಎಂದು ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.