ಶತಮಂಗಳ ಅಡಿಕೆ ತಳಿಗೆ ಬೇಡಿಕೆ ದುಪ್ಪಟ್ಟು !


Team Udayavani, Jul 27, 2021, 1:11 AM IST

ಶತಮಂಗಳ ಅಡಿಕೆ ತಳಿಗೆ ಬೇಡಿಕೆ ದುಪ್ಪಟ್ಟು !

ಪುತ್ತೂರು: ಐದು ವರ್ಷಗಳ ಹಿಂದೆ ಕರಾವಳಿಯಲ್ಲಿ ಪರಿಚಯಿಸ್ಪಟ್ಟ ಶತಮಂಗಳ ಅಡಿಕೆ ಗಿಡ ತಳಿಗೆ ಕೃಷಿಕರಿಂದ ಭರ್ಜರಿ ಬೇಡಿಕೆ ವ್ಯಕ್ತವಾಗಿದ್ದು ಉತ್ಪಾದನೆಗಿಂತ 20 ಪಟ್ಟು ಅಧಿಕ ಬೇಡಿಕೆ ಕಂಡು ಬಂದಿದೆ..!

ವಿಟ್ಲ ಸಿಪಿಸಿಆರ್‌ಐನಲ್ಲಿ 2016ರಲ್ಲಿ ಈ ತಳಿಯನ್ನು ಸಂಶೋಧಿಸಿ ಬಿಡುಗಡೆ ಮಾಡಲಾಗಿತ್ತು. ವರ್ಷದಿಂದ ವರ್ಷಕ್ಕೆ ಈ ತಳಿ ನಾಟಿ ಮಾಡುವವರ ಸಂಖ್ಯೆ ಹೆಚ್ಚಾದ ಕಾರಣ ಬೇಡಿಕೆ ವೃದ್ಧಿಸಿದೆ. ಇಳುವರಿ ಸಹಿತ ಹಲವು ದೃಷ್ಟಿಯಿಂದ ಹೆಚ್ಚು ಲಾಭದಾಯಕ ಎನ್ನುವ ಕಾರಣದಿಂದ ಬೇಡಿಕೆ ಸೃಷ್ಟಿಯಾಗಿದೆ.

ಶತಮಂಗಳ ತಳಿ..!:

ಶತಮಂಗಳ ಅಡಿಕೆ ಗಿಡವು 3.98 ಕೆ.ಜಿ. ಇಳುವರಿ ನೀಡುವ ತಳಿಯಾಗಿದೆ. ಮರಗಳು ಕ್ರಮಬದ್ದ ಇಳುವರಿಯನ್ನು ಕೊಡುವ ಕಾರಣ ಇದರ ವಾರ್ಷಿಕ ಇಳುವರಿಯಲ್ಲಿನ ವ್ಯತ್ಯಾಸ ಕಡಿಮೆ. ಅಡಿಕೆ ಮರಗಳು ಮಧ್ಯಮ ದಪ್ಪದ ಕಾಂಡವನ್ನು ಹೊಂದಿದ್ದು ಮಧ್ಯಮ ಎತ್ತರದ ತಳಿ ಇದಾಗಿದೆ. ಹಣ್ಣಡಿಕೆ ದುಂಡಾಕಾರವಾಗಿದ್ದು ಉತ್ತಮ ಗುಣಮಟ್ಟವನ್ನು ಹೊಂದಿದೆ. ಹಣ್ಣಡಿಕೆಯಿಂದ ಗೋಟು ಅಡಿಕೆ ಸಿಗುವ ಪ್ರಮಾಣ ಈ ತಳಿಯಲ್ಲಿ ಹೆಚ್ಚು. ಕರಾವಳಿ ಜಿಲ್ಲೆಯ ಜತೆಗೆ ಕೆಂಪಡಿಕೆ ಬೆಳೆಯುವ ಇತರ ಜಿಲ್ಲೆಗಳಲ್ಲಿಯೂ ಬೆಳೆಯುವುದು ಇದರ ಇನ್ನೊಂದು ವಿಶೇಷ ಗುಣ ಎನ್ನುತ್ತಾರೆ ವಿಜ್ಞಾನಿಗಳು.

25 ಶೇ.ಇಳುವರಿ ಅಧಿಕ..!:

ಉಳಿದ ತಳಿಗಿಂತ ಇದು ದುಪ್ಪಟ್ಟು ಇಳುವರಿ ಕೊಡುತ್ತದೆ. ಉಳಿದ ಅಡಿಕೆ ತಳಿಗಳ ಫಸಲಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚು ಇಳುವರಿ ನೀಡುವ ಸಾಮರ್ಥ್ಯವು ಶತಮಂಗಳ ತಳಿಗೆ ಇದೆ ಅನ್ನುವುದು ದೃಢಪಟ್ಟಿದೆ. ಇದಲ್ಲದೆ ಮಧ್ಯಮ ಎತ್ತರ, ಮಂಗಳಕ್ಕಿಂತ ಅ ಧಿಕ ಇಳುವರಿ ಮತ್ತು ಅಡಿಕೆಯ ಉತ್ತಮ ಗುಣಮಟ್ಟ, ಆಕರ್ಷಕವಾಗಿ ಕಾಣುವ ತೋಟ ಮತ್ತು ಗೊನೆಗಳು – ಇವು ಕಡಿಮೆ ಅವ ಧಿಯಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಸಲು ಕಾರಣವಾದ ಪ್ರಮುಖ ಅಂಶಗಳು ಎನ್ನುತ್ತಾರೆ ವಿಜ್ಞಾನಿ ಡಾ| ಜೋಸೆ.

20 ಪಟ್ಟು ಬೇಡಿಕೆ ಹೆಚ್ಚಳ..!:

ಕೃಷಿಕರಿಗೆ ವಿತರಣೆಗೆಂದು ವಿಟ್ಲ ಸಿಪಿಸಿಆರ್‌ಐನಲ್ಲಿ ಪ್ರತಿ ವರ್ಷ 20,000ದಿಂದ 28,000 ಶತಮಂಗಳ ಸಸಿಗಳನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಬೇಡಿಕೆ ಪ್ರಮಾಣವು ಉತ್ಪಾದನೆಗಿಂತ 15ರಿಂದ 20 ಪಟ್ಟು ಹೆಚ್ಚಿದೆ. ಅಂದರೆ ಒಟ್ಟು ಅರ್ಜಿ ಗಮನಿಸಿದರೆ ವಾರ್ಷಿಕ 2 ಲಕ್ಷಕ್ಕಿಂತ ಅಧಿಕ ಗಿಡಗಳು ಪೂರೈಕೆಗಾಗಿ ಬೇಕಾಗಬಹುದು. ಆದರೆ ಉತ್ಪಾದನೆ ಪ್ರಮಾಣಕ್ಕೆ ಆಧರಿಸಿ ಪ್ರತಿ ಅರ್ಜಿದಾರರಿಗೆ 50 ಗಿಡಗಳನ್ನಷ್ಟೇ ವಿತರಿಸಲಾಗುತ್ತಿದೆ.

ಅಡಿಕೆ ಕೃಷಿ ಹೆಚ್ಚಳ..! :

ಕಳೆದ ಎರಡು ವರ್ಷಗಳಿಂದ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ದಾಖಲೆ ಪ್ರಮಾಣದಲ್ಲಿ ಏರಿಕೆಯ  ಜತೆಗೆ ಕೋವಿಡ್‌ ಕಾರಣದಿಂದ ಮಹಾನಗರ ತೊರೆದವರು ಊರಿನಲ್ಲಿ ಹಡಿಲು ಬಿದ್ದ ಜಮೀನುಗಳಲ್ಲಿ ಅಡಿಕೆ ಕೃಷಿಯತ್ತ ಮುಖ ಮಾಡಿರುವ ಕಾರಣ ನರ್ಸರಿ ಸೇರಿದಂತೆ ಸಂಶೋಧನಾ ಕೇಂದ್ರಗಳಲ್ಲಿ ಅಡಿಕೆ ಗಿಡಗಳಿಗೆ ಅಪಾರ ಪ್ರಮಾಣದ ಬೇಡಿಕೆ ಕಂಡು ಬಂದಿದೆ. ಹೊಸ ತೋಟ ಮಾಡುವವರು, ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಮತ್ತು ದೀರ್ಘ‌ಕಾಲದ ತನಕ ಫಸಲು ನೀಡಬಲ್ಲ ಗಿಡಗಳ ಖರೀದಿಗೆ ಆದ್ಯತೆ ನೀಡಿದ್ದು ಅದರಲ್ಲಿ ಶತಮಂಗಳ ತಳಿ ಮುಂಚೂಣಿಯಲ್ಲಿದೆ.

ಶತಮಂಗಳ ತಳಿಯನ್ನು 2016ರಲ್ಲಿ ಪರಿಚಯಿಸಲಾಗಿತ್ತು. ವರ್ಷದಿಂದ ವರ್ಷಕ್ಕೆ ಇದರ ಬೇಡಿಕೆ ಪ್ರಮಾಣ ಏರಿಕೆ ಕಂಡಿದೆ. ಉತ್ತಮ ಫಲಿತಾಂಶ ದೊರೆಯುತ್ತಿರುವ ಕಾರಣ ಕೃಷಿಕರು ಈ ಗಿಡದತ್ತ ಆಕರ್ಷಿತರಾಗಿದ್ದಾರೆ. ಎರಡು ವರ್ಷದಲ್ಲಿ ಫಸಲು ಬಂದಿರುವ ಬಗ್ಗೆ ಬೆಳೆಗಾರರು ತಿಳಿಸಿದ್ದಾರೆ.ಡಾ| ನಾಗರಾಜ್‌ ವಿಜ್ಞಾನಿ, ಸಿಪಿಸಿಆರ್‌ಐ, ವಿಟ್ಲ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

23-balindra

Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ

22-bantwala-5

Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ

21-ptr

Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!

20-kadaba

ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.