ಶಿಶಿಲ: ಕಪಿಲಾ ನದಿ ಸ್ವಚ್ಛತಾ ಅಭಿಯಾನ
80 ಸ್ವಯಂಸೇವಕರಿಂದ 100ಕ್ಕೂ ಅಧಿಕ ಮರ, ತ್ಯಾಜ್ಯ ತೆರವು
Team Udayavani, May 19, 2020, 5:38 AM IST
ಬೆಳ್ತಂಗಡಿ: ಶಿಶಿಲೇಶ್ವರ ದೇವರ ಸನ್ನಿಧಾನದಲ್ಲಿ ಹರಿಯುವ ಜೀವನದಿ ಕಪಿಲೆಯಲ್ಲಿ ಕಳೆದ ವರ್ಷ ಪ್ರವಾಹ ಎರಗಿದ್ದರಿಂದ ಕಿಂಡಿ ಅಣೆಕಟ್ಟು ಸಹಿತ ನದಿ ಪಾತ್ರದಲ್ಲಿ ತುಂಬಿದ್ದ ಮರಗಳು ಹಾಗೂ ತ್ಯಾಜ್ಯವನ್ನು ಅರಣ್ಯ ಇಲಾಖೆ ಸಹಯೋಗದೊಂದಿಗೆ ಶಿಶಿಲೇಶ್ವರ ಭಕ್ತ ವೃಂದ, ಯುವಕ ಮಂಡಲದ ಸಹಾಯದಿಂದ ಸುಮಾರು 80 ಮಂದಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡರು.
ಶಿಶಿಲೇಶ್ವರನ ಸನ್ನಿಧಿಯ ಸಮೀಪದ ಕಿಂಡಿ ಅಣೆಕಟ್ಟಿನಲ್ಲಿ ಮರದ ದಿಮ್ಮಿಗಳು ಸೇರಿವೆ. ಮಳೆಗಾಲಕ್ಕೆ ಮುನ್ನ ತೆರವುಗೊಳಿಸದೇ ಹೋದಲ್ಲಿ ಮತ್ತಷ್ಟು ಸಮಸ್ಯೆಯಾಗಬಹುದೆಂದು ಮನಗಂಡು ಗ್ರಾಮಸ್ಥರು ಜತೆ ಸೇರಿ ಚಿಕ್ಕಮಗಳೂರು ಅರಣ್ಯ ಪ್ರದೇಶದ ಗಡಿ ಭಾಗದಲ್ಲಿರುವ ಹೊಳೆಗಂಡಿ ಎಂಬಲ್ಲಿಂದ ಪ್ರಾರಂಭಿಸಿ ಶಿಶಿಲ ದೇವಸ್ಥಾನದವರೆಗೆ 8 ಕಿ.ಮೀ. ದೂರ ನದಿ ಸ್ವಚ್ಛಗೊಳಿಸಲಾಯಿತು.
100ಕ್ಕೂ ಹೆಚ್ಚು ಮರ ತೆರವುಗೊಳಿಸುವ ಜತೆಗೆ, 10 ಚೀಲಗಳಷ್ಟು ಮದ್ಯದ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕಪಿಲಾ ನದಿ ಸ್ವಚ್ಛತಾ ಅಭಿಯಾನ ಯಶಸ್ವಿಗೊಳಿಸಿದ್ದಾರೆ.ಅರಣ್ಯಾಧಿಕಾರಿ ಪ್ರಶಾಂತ್, ಅರಣ್ಯ ರಕ್ಷಕರಾದ ನಾಗಲಿಂಗ, ಸುನಿಲ್, ನಾಗಪ್ಪ ಸಹಕರಿಸಿದರು. ಸ್ವಚ್ಛತಾ ಕಾರ್ಯ ನಡೆಸಿದವರಿಗೆ ಶಿಶಿಲ ಪಂಚಾಯತ್ ವತಿಯಿಂದ ಮಾಸ್ಕ್ ಪೂರೈಸಲಾಗಿತ್ತು.
ಶಾಸಕರಿಂದ ಪರಿಶೀಲನೆ
ಸ್ವಚ್ಛತಾ ಕಾರ್ಯ ಮಾಹಿತಿ ತಿಳಿದು ಶಾಸಕ ಹರೀಶ್ ಪೂಂಜ ಸ್ಥಳಕ್ಕಾಗಮಿಸಿ ಗ್ರಾಮಸ್ಥರನ್ನು ಅಭಿನಂದಿಸಿ ಶಿಶಿಲೇಶ್ವರ ದೇವಸ್ಥಾನದ ಸಮೀಪದ ಕಿಂಡಿ ಅಣೆಕಟ್ಟಿನ ಸ್ಥಳ ಪರಿಶೀಲಿಸಿ ಮಳೆಗಾಲದ ಮುನ್ನ ಕಸಕಡ್ಡಿ ತೆರವಿಗೆ ಹಿಟಾಚಿ ನಿಯೋಜಿಸುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.