ರಾಮಕೃಷ್ಣ ಕಾಟುಕುಕ್ಕೆ ಅವರಿಂದ 12 ತಾಸು ಶ್ರೀರಾಮ ಸಂಕೀರ್ತನೆ
Team Udayavani, Aug 6, 2018, 1:35 PM IST
ಪುತ್ತೂರು: ರಾಮಾಯಣ ಮಾಸಾಚರಣೆಯ ಪ್ರಯುಕ್ತ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಿಯಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ, ನೀರು ಸೇವಿಸದೆ, ಕುಳಿತಲ್ಲಿಂದ ಏಳದೆ ಹರಿನಾಮ ಸಂಕೀರ್ತನಾಕಾರ ರಾಮಕೃಷ್ಣ ಕಾಟುಕುಕ್ಕೆ ಅವರು ಶ್ರೀರಾಮನ ನಾಮವನ್ನು ಸತತ 12 ಗಂಟೆಗಳ ಕಾಲ ಹಾಡಿ, ಭಕ್ತಿ ಸಾಧನೆ ಮೆರೆದರು.
‘ಸುಮ್ಮನೆ ದೊರಕುವುದೇ ಶ್ರೀರಾಮನ ದಿವ್ಯನಾಮ’ ಶೀರ್ಷಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಕ್ಷೇತ್ರ ಅರ್ಚಕ ರಾಮಚಂದ್ರ ಭಟ್ ದೀಪ ಪ್ರಜ್ವಲಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳಗ್ಗೆ 6ರಿಂದ ಸಂಧ್ಯಾಕಾಲದ ವರೆಗೆ ಅಖಂಡ ಶ್ರೀರಾಮನ ಸಂಕೀರ್ತನೆ ನಡೆಯಿತು.
ಭಜನೆ ತರಬೇತಿಗೆ ಹುಟ್ಟು
ದಾಸ ಸಂಕೀರ್ತನೆ, ದಾಸ ಸಾಹಿತ್ಯದ ಸಾಂಪ್ರದಾಯಿಕ ಭಜನ ಸಂಕೀರ್ತನೆಯನ್ನು ಬೆಳೆಸುವುದರ ಜತೆಗೆ ಕನ್ನಡವನ್ನು ಉಳಿಸುವ ಕಾಯಕವನ್ನೂ ಮಾಡುತ್ತಿರುವ ಭಜನ ಗುರು ರಾಮಕೃಷ್ಣ ಕಾಟುಕುಕ್ಕೆ ಅವರು ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮವಾಗಿ ಭಜನ ತರಬೇತಿಯನ್ನು ಹುಟ್ಟು ಹಾಕಿದವರು. ಹಲವೆಡೆ ಭಜನ ಸಂಘಗಳ ಸೃಷ್ಟಿಗೆ ಕಾರಣಕರ್ತರಾಗಿದ್ದಾರೆ.
ಯುವ ಪೀಳಿಗೆಗೆ ಭಜನೆಯನ್ನು ತಿಳಿಸಿ ಕೊಡುವ ಮೂಲಕ ನಮ್ಮ ಸಾಂಪ್ರದಾಯಿಕ, ಧಾರ್ಮಿಕ ನೆಲೆಗಟ್ಟನ್ನು ದೃಢಗೊಳಿಸುವುದು ಕರ್ತವ್ಯವೂ ಹೌದು. ಭಜನೆಯಲ್ಲಿ ಪ್ರಚಾರ, ಪ್ರತಿಷ್ಠೆಯ ವಸ್ತುವಾಗದೆ ದೇವರನ್ನು ಸಂತೃಪ್ತಿಪಡಿಸುವ ಉದ್ದೇಶ ಹೊಂದಿದ್ದರೆ ನಮ್ಮ ಸೇವೆಯನ್ನು ಭಗವಂತ ಸ್ವೀಕರಿಸಲು, ಭಕ್ತಿಯ ಪರಿಪೂರ್ಣತೆ ಸಾಕ್ಷಾತ್ಕಾರಗೊಳ್ಳಲು ಸಾಧ್ಯ. ರಾಮಾಯಣ ಮಾಸಾಚರಣೆಯ ವೇಳೆ ಇಂತಹ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಮಕೃಷ್ಣ ಕಾಟುಕುಕ್ಕೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.