ಕ್ರಿಸ್ತರ ತತ್ತ್ವಾದರ್ಶದಿಂದ ಜೀವನ ಪಾವನ: ವಂ| ಮ್ಯಾಥ್ಯೂ
Team Udayavani, Dec 22, 2018, 2:56 PM IST
ಕಡಬ : ಕಠಿನ ಪರಿಶ್ರಮ, ಸೇವೆ ಮತ್ತು ಶಾಂತಿಯ ಮಾರ್ಗದಲ್ಲಿ ಮುನ್ನಡೆದಾಗ ನಾವು ಯಶಸ್ಸು ಪಡೆಯಲು ಸಾಧ್ಯ. ಕ್ರಿಸ್ತರ ತತ್ತ್ವಾದರ್ಶ ಆಳವಡಿಸಿಕೊಂಡಾಗ ನಮ್ಮ ಜೀವನ ಪಾವನವಾಗುತ್ತದೆ ಎಂದು ಕೊಟ್ಟಾಯಂ ಮಹಾ ಧರ್ಮಕ್ಷೇತ್ರದ ಮಹಾ ಧರ್ಮಾಧ್ಯಕ್ಷ ರೈ|ರೆ| ಮ್ಯಾಥ್ಯೂ ಮೂಲಕ್ಕಾಟ್ ಹೇಳಿದರು.
ಆರೋಗ್ಯ ಮಾತಾ ಕ್ನಾನಾಯ ಕೆಥೋಲಿಕ್ ಚರ್ಚ್‌ನ ರಜತ ವರ್ಷಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಸಂದೇಶ ನೀಡಿದ ಅವರು, ಕ್ರೈಸ್ತ ಸಮುದಾಯ ಆರೋಗ್ಯ, ಶಿಕ್ಷಣ, ಸೇವೆ ಹಾಗೂ ಶಾಂತಿಯ ಸಂದೇಶವನ್ನು ಸಾರುತ್ತ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಯುವ ಸಮುದಾಯ ಇದೇ ಮಾರ್ಗದಲ್ಲಿ ಮುನ್ನಡೆದು ತಮ್ಮತನವನ್ನು ಉಳಿಸಿ ಬೆಳೆಸ ಬೇಕು ಎಂದವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ|ರೆ|ಡಾ| ಗೀ ವರ್ಗೀಸ್ ಮಾರ್ ಮಕ್ಕಾರಿಯೋಸ್ ಅವರು ಕೇರಳದಿಂದ ವಲಸೆ ಬಂದು ಕರ್ನಾಟಕದ ಈ ಭಾಗದಲ್ಲಿ ನೆಲೆಸಿರುವ ಮಲಯಾಳಿ ಕ್ರೈಸ್ತರು ಇಲ್ಲಿಗೆ ನೀಡಿರುವ ಕೊಡುಗೆ ಅಪಾರವಾದುದು.
ಒಗ್ಗಟ್ಟು ಶ್ಲಾಘನೀಯ
ಪರಿಶ್ರಮ ಪಟ್ಟು ಕೃಷಿ ಬದುಕಿನ ಮೂಲಕ ಇಲ್ಲಿನ ಮಣ್ಣಿನ ಮಕ್ಕಳಾಗಿ ತಮ್ಮ ಪಾರಂಪರಿಕ ಧಾರ್ಮಿಕ ಶ್ರದ್ಧೆಗೆ ಚ್ಯುತಿ ಬಾರದಂತೆ ಸ್ಥಳೀಯ ತೌಳವ ಸಂಸ್ಕೃತಿಯೊಂದಿಗೆ ಮಿಳಿತಗೊಂಡು ಸಾಮರಸ್ಯದ ಜೀವನ ನಡೆಸುತ್ತಿರುವ ಮಲಯಾಳಿ ಕ್ರೈಸ್ತರು ಬೇರೆ ಬೇರೆ ಪಂಗಡಗಳಲ್ಲಿ ಗುರುತಿಸಿಕೊಂಡಿದ್ದರೂ ದೇವರ ಮಾರ್ಗದಲ್ಲಿ ಒಗ್ಗಟ್ಟಿನಿಂದ ಸಾಗುತ್ತಿರುವುದು ಶ್ಲಾಘನೀಯ ಎಂದರು.
ಕಣ್ಣೂರು ಶ್ರೀಪುರಂ ಪಾಸ್ಟರಲ್ ಸೆಂಟರ್ ನ ನಿರ್ದೇಶಕ ವಂ| ಜೋಸ್ ನೆಡುಂಗಾಟ್, ಬೆಂಗಳೂರು ಫೂರೋನಾ ಧರ್ಮಗುರು ವಂ| ಜೋಸ್ ಕೊಚ್ಚುಪರಂಬಿಲ್, ಚುಂಗಂ ಫೂರೋನಾ ಧರ್ಮಗುರು ವಂ| ಜಾರ್ಜ್ ಪುದುಪರಂಬಿಲ್, ಮೆಮುರಿ ಚರ್ಚ್‌ನ ಧರ್ಮಗುರು ವಂ| ಲೂಕ್ ಕರಿಂಬಿಲ್, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಎಲ್ ಡಿಎಸ್‌ಜೆಜಿ ರೀಜನಲ್ ಸುಪೀರಿಯರ್ ಸಿಸ್ಟರ್ ಎಲನೋರಾ ಅತಿಥಿಗಳಾಗಿದ್ದರು. ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ. ಫಿಲಿಪ್ ಅವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮನೋರಂಜನ ಕಾರ್ಯಕ್ರಮಗಳು ಜರಗಿದವು. ವರ್ಷಾಚರಣೆಯ ಸವಿ ನೆನಪಿಗಾಗಿ ಹೊರತರಲಾದ ಸ್ಮರಣ ಸಂಚಿಕೆಯನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಚರ್ಚ್‌ನ ಧರ್ಮಗುರು ವಂ| ದೀಪು ಇರವುಪುರತ್ ಸ್ವಾಗತಿಸಿ, ಜಿಟ್ಟಿ ಜೋಸೆಫ್ ಚಂಪನ್ನಿಲ್ ವರದಿ ವಾಚಿಸಿದರು. ಸೌಮ್ಯಾ ಸ್ಟೀಫನ್ ನಿರೂಪಿಸಿ, ರಜತ ವರ್ಷಾ ಚರಣೆ ಸಮಿತಿಯ ಸಂಚಾಲಕ ಜೇಮ್ಸ್ ಕೋರ್ಮಡಂ ವಂದಿಸಿದರು. ಪಿ.ಟಿ. ಸೈಮನ್ ಸಮ್ಮಾನಿತರ ಪಟ್ಟಿ ವಾಚಿಸಿದರು.
ಸಮ್ಮಾನ
ಚರ್ಚ್ ಸ್ಥಾಪನೆ ಮತ್ತು ಅಭಿವೃದ್ಧಿಗೆ ಸಹಕರಿಸಿದ ಸಿ. ಫಿಲಿಪ್, ಬೇಬಿ ಕೋರ್ಮಡಂ, ಜೇಮ್ಸ್ ಕೋರ್ಮಡಂ, ಜೋಸ್ ಕೋರ್ಮಡಂ, ಚಿನ್ನಮ್ಮ ಜೋಸೆಫ್ ಚಂಪನ್ನಿಲ್, ಟ್ರಸ್ಟಿ ಕೆ.ಎಂ. ಜೋಸ್ ಕಲ್ಲಂತೊಟ್ಟಿಯಿಲ್, ಕಡಬ ಪರಿಸರಕ್ಕೆ ಕೇರಳದಿಂದ ಪ್ರಥಮವಾಗಿ ಬಂದು ನೆಲೆಸಿದ ಕ್ನಾನಾಯ ಕೆಥೋಲಿಕ್ ಕುಟುಂಬದ ಮಾಂಪಳ್ಳಿಲ್ ಕುರಿಯಾಕೋಸ್ ಮತ್ತು ಅನ್ನಮ್ಮ ದಂಪತಿ, ಕಡಬ ಆರೋಗ್ಯ ಮಾತಾ ಕ್ನಾನಾಯ ಕೆಥೋಲಿಕ್ ಚರ್ಚ್‌ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ವಂ| ಜಾರ್ಜ್ ಪುದುಪರಂಬಿಲ್, ವಂ| ಜೋಸ್ ಕಲ್ಲುವೀಟಿಲ್, ವಂ| ಸ್ಟೀಫನ್ ಕೊಳಕ್ಕಾಟ್, ವಂ| ಲೂಕ್ ಕರಿಂಬಿಲ್, ವಂ| ಶಾಜಿ ಮುಕಳೇಳ್, ವಂ| ಸ್ಟಿಜೋ ತೇಕುಂಕಾಟಿಲ್, ಕಡಬ ಚರ್ಚ್‌ನ ವ್ಯಾಪ್ತಿಯಿಂದ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿರುವ ವಂ| ಥಾಮಸ್ ಚಂಪಕ್ಕಾರ ಹಾಗೂ ಧರ್ಮಭಗಿನಿಯಾಗಿರುವ ಸಿಸ್ಟರ್ ಎಲಿಜಬೆತ್ ಮಾಂಪಳ್ಳಿಲ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಕೃತಜ್ಞತಾ ಬಲಿಪೂಜೆ
ಕೊಟ್ಟಾಯಂ ಮಹಾ ಧರ್ಮಕ್ಷೇತ್ರದ ಮಹಾ ಧರ್ಮಾಧ್ಯಕ್ಷ ರೈ|ರೆ| ಮ್ಯಾಥ್ಯೂ ಮೂಲಕ್ಕಾಟ್, ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ|ರೆ| ಡಾ| ಗೀ ವರ್ಗೀಸ್ ಮಾರ್ ಮಕ್ಕಾರಿಯೋಸ್, ಚುಂಗಂ ಫೂರೋನಾ ಧರ್ಮಗುರು ವಂ| ಜಾರ್ಜ್ ಪುದುಪರಂಬಿಲ್, ಮಿಯಾವ್ ಧರ್ಮಪ್ರಾಂತದ ವಂ| ಶೋಬಿ ಪುಳಿಕಪ್ಪಿನಾಟ್ ಹಾಗೂ ಕೊಟ್ಟಾಯಂ ಪುನ್ನತ್ತರ ಧರ್ಮಗುರು ವಂ| ಜೋಸೆಫ್ ಕೀಯಞಾಟ್ ಅವರು ಕೃತಜ್ಞತ ಬಲಿಪೂಜೆ ನೆರವೇರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.