ಪುತ್ತೂರು, ಸುಳ್ಯ, ಕಡಬ: 72ನೇ ಗಣರಾಜ್ಯೋತ್ಸವ ಆಚರಣೆ

Team Udayavani, Jan 27, 2021, 3:50 AM IST

ಪುತ್ತೂರು, ಸುಳ್ಯ, ಕಡಬ: 72ನೇ ಗಣರಾಜ್ಯೋತ್ಸವ ಆಚರಣೆ

ಪುತ್ತೂರು: ಭಾರತದ ಸಂವಿ ಧಾನವು ಹಲವು ದೇಶಗಳ ಸಂವಿಧಾನಗಳ ಅಧ್ಯಯನದ ಬಳಿಕ ಸಿದ್ಧಗೊಂಡ ಕಾರಣ ದಿಂದ ಪರಮಶ್ರೇಷ್ಠವಾಗಿ ಗುರುತಿಸಿ ಕೊಂಡಿದೆ. ಜನರಿಂದಲೇ ಆಯ್ಕೆಯಾದ ಸರಕಾರ ನಮ್ಮನ್ನು ಆಳುತ್ತಿದ್ದು, ಸಂವಿಧಾನ ನೀಡಿದ ಎಲ್ಲ ಸವಲತ್ತು ಹಾಗೂ ಜವಾಬ್ದಾರಿಗಳನ್ನು ನಾವು ನೆನಪು ಮಾಡ ಬೇಕಾದುದು ಅಗತ್ಯ ಎಂದು ಪುತ್ತೂರು ಸಹಾಯಕ ಕಮಿಷನರ್‌ ಡಾ| ಯತೀಶ್‌ ಉಳ್ಳಾಲ್‌ ಹೇಳಿದರು.

ಅವರು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಬಳಿಕ ಸಂದೇಶ ನೀಡಿದರು. ನಾವು ಶಾಂತಿಯುತವಾಗಿ ಬದುಕಬೇಕಾದರೆ ಸೈನಿಕರನ್ನು ನೆನಪಿ ಸಬೇಕು. ಜತೆಗೆ ಕೋವಿಡ್‌ ವಾರಿಯರ್ ಸೇವೆಯೂ ಅತ್ಯಮೂಲ್ಯವಾಗಿತ್ತು ಎಂದರು. ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ ಮತ್ತು ಗೃಹರಕ್ಷಕ ದಳದಿಂದ ಪಥ ಸಂಚಲನ ನಡೆಯಿತು. ಬಳಿಕ ಪುರಭವನದಲ್ಲಿ ಸರಳ ಸಭಾ ಕಾರ್ಯಕ್ರಮ ನಡೆಯಿತು.

ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ನಗರಸಭೆ ಅಧ್ಯಕ್ಷ ಜೀವಂಧರ ಜೈನ್‌, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್‌ ಶೆಣೈ, ಪುತ್ತೂರು ಡಿವೈಎಸ್‌ಪಿ ಡಾ| ಗಾನಾ ಪಿ. ಮಾತ ನಾಡಿದರು. ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡಿದ ಒಟ್ಟು ಏಳು ಇಲಾಖೆ/ ವಿಭಾಗಗಳ ಆಯ್ದ 35 ಸಿಬಂದಿಯನ್ನು ಗೌರವಿಸಲಾಯಿತು.

ಆರೋಗ್ಯ ಇಲಾಖೆ ವತಿಯಿಂದ ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್‌ಕುಮಾರ್‌ ರೈ, ಇಲಾಖೆ ಸಿಬಂದಿ ಗೀತಾ, ಪದ್ಮನಾಭ, ಗಾಯತ್ರಿ ಮತ್ತು ಚಂದ್ರಾವತಿ, ಕಂದಾಯ ಇಲಾಖೆಯ ವಿಜಯ ವಿಕ್ರಮ, ಮಹೇಶ್‌ ಎಸ್‌., ಕಾಶಪ್ಪ ನ್ಯಾಮೇಗೌಡ, ಚೈತ್ರಾ ಡಿ.ನಾಯಕ್‌, ಉಮೇಶ್‌ ನಾಯಕ್‌, ಪುತ್ತೂರು ನಗರಸಭೆ ಸಿಬಂದಿ ರಾಧಾಕೃಷ್ಣ, ಅಮಿತ್‌, ಜಯಂತ್‌, ಪುರುಷೋತ್ತಮ ಮತ್ತು ಲೋಕೇಶ್‌, ತಾ.ಪಂ. ವ್ಯಾಪ್ತಿಯ ರವಿಚಂದ್ರ ಯು., ಶರೀಫ್‌, ಪದ್ಮಕುಮಾರಿ, ಹೊನ್ನಪ್ಪ ಮತ್ತು ಇಸಾಕ್‌, ಶಿಕ್ಷಣ ಇಲಾಖೆಯಿಂದ ಶಿವಪ್ಪ ರಾಥೋಡ್‌, ತಾರಾನಾಥ ಪಿ., ರಾಕೇಶ್‌ ಡಿ., ಸ್ಮಿತಾ ಕೆ.ಎನ್‌., ಚಕ್ರಪಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸುಮಿತ್ರಾ, ಪ್ರಮೀಳಾ, ಅರುಣಾ, ಜಾನಕಿ ಮತ್ತು ರೇವತಿ, ಪೊಲೀಸ್‌ ಇಲಾಖೆಯಿಂದ ಕೃಷ್ಣಪ್ಪ ಎಂ., ದಿನೇಶ್‌, ಯೋಗೀಂದ್ರ, ನಾರಾಯಣ್‌, ಸುರೇಶ್‌ ಶರ್ಮಾ ಅವರನ್ನು ಸಮ್ಮಾನಿಸಲಾಯಿತು.

ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್‌ ಕುಮಾರ್‌ ಭಂಡಾರಿ ಉಪಸ್ಥಿತ ರಿದ್ದರು. ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ ಸಿ. ವಂದಿಸಿದರು.

ಸರ್ವ ಧರ್ಮಗಳ ಪವಿತ್ರ ಗ್ರಂಥ: ಮಠಂದೂರು :

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಂವಿಧಾನ ಶಿಲ್ಪಿ ಡಾ|ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ರಚನೆಯಾದ ನಮ್ಮ ಸಂವಿಧಾನ ಇವತ್ತಿಗೂ ಭಾರತದ ಸರ್ವ ಧರ್ಮಗಳ ಪಾಲಿಗೆ ಪವಿತ್ರ ಧರ್ಮಗ್ರಂಥವಿದ್ದಂತೆ ಎಲ್ಲರಿಗೂ ನ್ಯಾಯ ಕೊಡಲು ಇದು ಸಮರ್ಥವಾಗಿದೆ ಎಂದರು.

ಟಾಪ್ ನ್ಯೂಸ್

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Belthangady: ಸಂತ ಲಾರೆನ್ಸ್‌ ದೇವಾಲಯದಲ್ಲಿ ಕ್ರಿಸ್ಮಸ್‌ ಬಲಿಪೂಜೆ

Puttur: ಟೆಂಪೋ-ಬೈಕ್‌ ನಡುವೆ ಅಪಘಾತ

Puttur: ಟೆಂಪೋ-ಬೈಕ್‌ ನಡುವೆ ಅಪಘಾತ

Belthangady: ವಿದ್ಯುತ್‌ ಲೈನ್‌ ಮೇಲೆ ಬಿದ್ದ ಮರ: ಬೆಂಕಿ

Belthangady: ವಿದ್ಯುತ್‌ ಲೈನ್‌ ಮೇಲೆ ಬಿದ್ದ ಮರ: ಬೆಂಕಿ

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.