ಜಾರಿದರೆ ಕೆಸರಿನ ಹೊಂಡಕ್ಕೆ, ಆಯ ತಪ್ಪಿದರೆ ಕೇಬಲ್ ಗುಂಡಿಗೆ!
Team Udayavani, Jul 6, 2019, 5:00 AM IST
ಬೆಳ್ಳಾರೆ: ಖಾಸಗಿ ಟೆಲಿಕಾಂ ಕಂಪನಿಯೊಂದು ಕಲ್ಮಡ್ಕ ಸಂಪರ್ಕಿಸುವ ಮುಖ್ಯ ರಸ್ತೆಯ ಬದಿಗಳಲ್ಲಿ ಗುಂಡಿಗಳನ್ನು ಅಗೆದ ಪರಿಣಾಮ ರಸ್ತೆ ಹಾಳಾಗಿದ್ದು, ಸವಾರರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ.
ಕಲ್ಮಡ್ಕದಿಂದ ಕಾಪಡ್ಕದ ವರೆಗೆ ಖಾಸಗಿ ಕಂಪೆನಿಯೊಂದು ಜಿ.ಪಂ. ಎಂಜಿನಿಯರಿಂಗ್ ಇಲಾಖೆಯ ಅನುಮತಿ ಪಡೆದು ಕೇಬಲ್ ಅಳವಡಿಸಲು ರಸ್ತೆ ಬದಿಯಲ್ಲಿ ಗುಂಡಿ ತೋಡಿದೆ. ಮಳೆಗಾಲದ ಸಂದರ್ಭ ದಲ್ಲೂ ಗುಂಡಿಗಳನ್ನು ಮುಚ್ಚದ ಕಾರಣ ಅವುಗಳಲ್ಲಿ ಚರಂಡಿ ನೀರು ನಿಂತು, ರಸ್ತೆಯಲ್ಲೂ ಹರಿಯುತ್ತಿದೆ. ಇದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿ ದ್ದು, ಸಂಚಾರವೇ ದುಸ್ತರವಾಗಿದೆ.
ಮೋರಿಗೂ ಹಾನಿ
ಕಲ್ಮಡ್ಕ ಮುಖ್ಯ ರಸ್ತೆಯ ನಾಲ್ಕು ಮೋರಿಗಳಿಗೆ ಈ ಗುಂಡಿಗಳಿಂದ ಹಾನಿಯಾಗಿದ್ದು, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯ ವಾಗುತ್ತಿಲ್ಲ. ಕುಲಾಯಿ ತೋಡಿಯಲ್ಲಿ ತಡೆಗೋಡೆಗೂ ಹಾನಿಯಾಗಿದೆ. ಸಾರ್ವಜನಿಕ ಮೋರಿಯನ್ನು ಹಾಳು ಗೆಡವಿದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ಸಭೆಯಲ್ಲೂ ಪ್ರಸ್ತಾವ
ಕಲ್ಮಡ್ಕ ರಸ್ತೆ ಹೊಂಡ ಬಿದ್ದಿದ್ದು, ಸಂಚಾರಕ್ಕೆ ಕಷ್ಟವಾಗುತ್ತಿದೆ. ಈ ಮಧ್ಯೆ ಮೊಬೈಲ್ ಕಂಪೆನಿ ಅಗೆದಿರುವ ಗುಂಡಿಗಳಿಂದ ಅದು ಮತ್ತಷ್ಟು ಹದಗೆಟ್ಟಿದೆ ಎಂದು ಗ್ರಾಮಸ್ಥರು ಗ್ರಾಮ ಸಭೆಯಲ್ಲೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ರಸ್ತೆ ಕೆಸರು ಮಯವಾಗಿ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ಚರಂಡಿಯಲ್ಲಿ ಸರಿಯಾಗಿ ನೀರು ಹೋಗದೆ ಈ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಗುಂಡಿಯನ್ನು ಮುಚ್ಚಿ ರಸ್ತೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದರು.
700 ಮೀ. ರಸ್ತೆಯೇ ಹಾಳು
ದುರಸ್ತಿಯಾಗಿ ಮರು ಡಾಮರು ಕಂಡಿದ್ದ ಕಲ್ಮಡ್ಕ ರಸ್ತೆಯ ಸುಮಾರು 700 ಮೀ. ಭಾಗ ಹಾಳಾಗಿ ಹೋಗಿದೆ. ಕಾನೂನು ಪ್ರಕಾರ ರಸ್ತೆಯ ಚರಂಡಿಯಿಂದ ದೂರದಲ್ಲಿ ಗುಂಡಿ ತೆಗೆಯಬೇಕಿತ್ತು. ಆದರೆ ಜೆಸಿಬಿ ಮೂಲಕ ರಸ್ತೆ ಬದಿಯಲ್ಲೇ ಗುಂಡಿ ತೆಗೆದು ಮಣ್ಣನ್ನು ಚರಂಡಿಗೆ ಹಾಕಿದ್ದೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಹಾಳಾದ ರಸ್ತೆ ಸರಿಪಡಿಸಿ
ರಸ್ತೆ ಬದಿಯೇ ಗುಂಡಿ ತೆಗೆದು ಚರಂಡಿಗೆ ಮಣ್ಣು ಹಾಕಿದ ಕಾರಣ ರಸ್ತೆಯೆಲ್ಲ ಹಾಳಾಗಿ ಹೋಗಿದೆ. ದ್ವಿಚಕ್ರ ವಾಹನ ಸವಾರರು ಸಹಿತ ಇತರ ವಾಹನಗಳಿಗೆ ಸಂಚರಿಸಲು ತೋದರೆಯಾಗಿದೆ. ಚರಂಡಿ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿ, ಹಾಳುಗೆಡವಿದ ರಸ್ತೆ ಹಾಗೂ ಮೋರಿಯನ್ನು ಶೀಘ್ರ ದುರಸ್ತಿಗೊಳಿಸಿ. – ಜಯರಾಜ್ ನಡ್ಕ, ಗ್ರಾಮಸ್ಥರು
ಸರಿಪಡಿಸುತ್ತಿದ್ದೇವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.