Kadaba ತಾಲೂಕಿನಲ್ಲಿ ಸೋಲಾರ್‌ ಪಾರ್ಕ್‌?

ಕಡಬದಲ್ಲಿ ಅಹವಾಲು ಸ್ವೀಕಾರ ಸಭೆಯಲ್ಲಿ ಸಂಸದ ಕ್ಯಾ| ಚೌಟ ಸ್ಪಂದನೆ

Team Udayavani, Jan 14, 2025, 1:02 PM IST

2

ಕಡಬ: ಸವಣೂರು, ನೆಲ್ಯಾಡಿ, ಸುಬ್ರಹ್ಮಣ್ಯ ಹಾಗೂ ಕಡಬದಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಿಸಲು ಅಗತ್ಯ ವಾದ ಜಮೀನನ್ನು ಗುರುತಿಸಿ ಕಾದಿರಿಸು ವಂತೆ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಕಡಬ ತಹಶೀಲ್ದಾರ್‌ ಪ್ರಭಾಕರ ಖಜೂರೆ ಅವರಿಗೆ ಸೂಚಿಸಿದರು.

ಅವರು ಸೋಮವಾರ ಕಡಬ ತಾಲೂಕು ಆಡಳಿತ ಸೌಧಕ್ಕೆ ಭೇಟಿ ನೀಡಿ ವಿವಿಧ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ಪ್ರಮುಖರೊಂದಿಗೆ ಚರ್ಚಿಸುತ್ತಿರುವ ವೇಳೆ ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಅವರು ಕಡಬ ತಾಲೂಕಿನ ವ್ಯಾಪ್ತಿಯಲ್ಲಿ ವಿದ್ಯುತ್‌ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಸೋಲಾರ್‌ ವಿದ್ಯುತ್‌ ಉತ್ಪಾದನೆ ಯೋಜನೆಯಡಿ ಸೋಲಾರ್‌ ಪಾರ್ಕ್‌ ನಿರ್ಮಿಸಬೇಕೆಂದು ಬೇಡಿಕೆ ಸಲ್ಲಿಸಿದರು. ಅದಕ್ಕೆ ಅವರು ಸ್ಪಂದಿಸಿ ಬೇಡಿಕೆಯ ಕುರಿತು ಕೇಂದ್ರ ಸರಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದೊಂದಿಗೆ ವ್ಯವಹರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಂಸದರು ಭರವಸೆ ನೀಡಿದರು.

ಕಡಬ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್‌ ಎನ್‌.ಕೆ. ನೇತೃತ್ವದ ನಿಯೋಗವು ಕೋಡಿಂಬಾಳ ರೈಲು ನಿಲ್ದಾಣ ವನ್ನು ಮೇಲ್ದರ್ಜೆಗೇರಿಸಿ ಮಂಗಳೂರು- ಬೆಂಗಳೂರು ನಡುವೆ ಸಂಚರಿಸುವ ರೈಲು ಬಂಡಿಗಳಿಗೆ ಕೋಡಿಂಬಾಳ ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ಒದಗಿಸುವಂತೆ ಮನವಿ ಸಲ್ಲಿಸಿದರು. ರೈಲ್ವೇ ಅಧಿಕಾರಿಗಳ ಜತೆಗೆ ಚರ್ಚಿಸುವುದಾಗಿ ಹೇಳಿದರು. ಹಲವು ಮಂದಿ ಸಾರ್ವಜನಿಕರು ವೈಯಕ್ತಿಕ ಹಾಗೂ ಸಾರ್ವಜನಿಕ ಬೇಡಿಕೆಗಳನ್ನು ಸಂಸದರಿಗೆ ಸಲ್ಲಿಸಿದರು.

ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್‌ ವಳಲಂಬೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ ರೈ ಮನವಳಿಕೆ, ಪ್ರಮುಖರಾದ ಪುಲಸ್ತ್ಯಾ ರೈ, ಸುರೇಶ್‌ ದೇಂತಾರು, ಮಧುಸೂಧನ್‌ ಕೊಂಬಾರು, ಸುವರ್ಣಿನಿ ಪಂಜ, ಮೇದಪ್ಪ ಗೌಡ ಡೆಪ್ಪುಣಿ, ಕೇಶವ ಬೇರಿಕೆ, ಶಿವಪ್ರಸಾದ್‌ ನಡೊ¤àಟ, ವಾಡ್ಯಪ್ಪ ಗೌಡ ಎರ್ಮಾಯಿಲ್‌, ಚಂದ್ರಶೇಖರ ಹಳೆನೂಜಿ, ಉಮೇಶ್‌ ಶೆಟ್ಟಿ ಸಾಯಿರಾಂ, ಅಶೋಕ್‌ಕುಮಾರ್‌ ಪಿ. ಮುಂತಾದವರು ಉಪಸ್ಥಿತರಿದ್ದರು.

ನೆಲ್ಯಾಡಿ ಪೇಟೆ ಇಬ್ಭಾಗ ತಪ್ಪಿಸಿ: ಮನವಿ
ನೆಲ್ಯಾಡಿ ಪೇಟೆಯ ಮೂಲಕ ಹಾದುಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಕಾರಣದಿಂದಾಗಿ ನೆಲ್ಯಾಡಿ ಹಾಗೂ ಕೌಕ್ರಾಡಿ ಗ್ರಾಮಕ್ಕೆ ಸೇರಿದ ಪೇಟೆ ಇಬ್ಭಾಗವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಅಲ್ಲಿ ಪಿಲ್ಲರ್‌ಗಳನ್ನು ಬಳಸಿ ಮೇಲ್ಸೇತುವೆ ನಿರ್ಮಿಸಿ ಪೇಟೆಯನ್ನು ಉಳಿಸಿಕೊಡಬೇಕೆಂದು ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಯ ನಿಯೋಗವು ಸಂಸದರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್‌, ಜತೆ ಕಾರ್ಯದರ್ಶಿ ಉಷಾ ಅಂಚನ್‌, ಕೋಶಾಧಿಕಾರಿ ಸತೀಶ್‌ ಕೆ.ಎಸ್‌., ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್‌, ಪ್ರಮುಖರಾದ ಸರ್ವೋತ್ತಮ ಗೌಡ, ಕೆ.ಪಿ.ತೋಮಸ್‌, ಎಂ.ಕೆ.ಇಬ್ರಾಹಿಂ, ನಾಜಿಂ ಸಾಹೇಬ್‌, ರವಿಪ್ರಸಾದ್‌ ಶೆಟ್ಟಿ, ರವಿಚಂದ್ರ ಹೊಸವಕ್ಲು, ಮಹೇಶ್‌, ಮಹಮ್ಮದ್‌ ಹನೀಫ್‌ ಮುಂತಾದವರು ನಿಯೋಗದಲ್ಲಿದ್ದರು.

ಟಾಪ್ ನ್ಯೂಸ್

da

BBK11: ದೈತ್ಯರನ್ನೇ ಮಣ್ಣು ಮುಕ್ಕಿಸಿ ಮಹತ್ವದ ಟಾಸ್ಕ್ ನಲ್ಲಿ ಮಿಂಚಿದ ಧನರಾಜ್

Women’s Ashes: Another win for Australia

Women’s Ashes: ಆಸ್ಟ್ರೇಲಿಯಕ್ಕೆ ಮತ್ತೊಂದು ಗೆಲುವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Mulki: ಟಿಪ್ಪರ್‌ ಯದ್ವಾತದ್ವಾ ಚಾಲನೆ; ಹಲವರಿಗೆ ಗಾಯ

Kadaba ಮರ್ದಾಳ: ಮನೆಗೆ ನುಗ್ಗಿ ಕಳ್ಳತನ

Kadaba ಮರ್ದಾಳ: ಮನೆಗೆ ನುಗ್ಗಿ ಕಳ್ಳತನ

Sabarimala: Over 2 lakh devotees watch Makar Jyoti

Sabarimala: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಮಕರ ಜ್ಯೋತಿ ವೀಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Kadaba ಮರ್ದಾಳ: ಮನೆಗೆ ನುಗ್ಗಿ ಕಳ್ಳತನ

Kadaba ಮರ್ದಾಳ: ಮನೆಗೆ ನುಗ್ಗಿ ಕಳ್ಳತನ

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Australian Open-2025: Wawrinka out; Fritz wins

Australian Open-2025: ವಾವ್ರಿಂಕ ಔಟ್‌; ಫ್ರಿಟ್ಜ್  ಗೆಲುವು

da

BBK11: ದೈತ್ಯರನ್ನೇ ಮಣ್ಣು ಮುಕ್ಕಿಸಿ ಮಹತ್ವದ ಟಾಸ್ಕ್ ನಲ್ಲಿ ಮಿಂಚಿದ ಧನರಾಜ್

Women’s Ashes: Another win for Australia

Women’s Ashes: ಆಸ್ಟ್ರೇಲಿಯಕ್ಕೆ ಮತ್ತೊಂದು ಗೆಲುವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Aranthodu: ಪೈಂಬೆಚಾಲ್‌; ಗಾಯಾಳು ಮಹಿಳೆ ಸಾವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Guttigaru: ಅಂಗಡಿ, ದೇವಸ್ಥಾನದಿಂದ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.