ಶಾಸಕರಿಂದ ಸೋಲಾರ್ ಘಟಕ ಉದ್ಘಾಟನೆ
Team Udayavani, Dec 16, 2018, 2:11 PM IST
ಬೆಳ್ತಂಗಡಿ : ಕೇಂದ್ರ ಸರಕಾರದ ಸಮಗ್ರ ಇಂಧನ ಅಭಿವೃದ್ಧಿ ಯೋಜನೆ (ಐಪಿಡಿಎಸ್) ಮೂಲಕ ಬೆಳ್ತಂಗಡಿ ತಾ.ಪಂ.ನ ಸಾಮರ್ಥ್ಯ ಸೌಧದಲ್ಲಿ ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ಮೆಸ್ಕಾಂ (ನೋಡಲ್ ಏಜೆನ್ಸಿ)ಅನುಷ್ಠಾನಗೊಳಿಸಿದ 24.32 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕವನ್ನು ಶನಿವಾರ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.
ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್, ಸದಸ್ಯರಾದ ವಿಜಯ ಗೌಡ, ಜೋಯೆಲ್ ಮೆಂಡೊನ್ಸಾ, ಸುಧೀರ್ ಸುವರ್ಣ, ಗೋಪಿನಾಥ್ ನಾಯಕ್, ಕೃಷ್ಣಯ್ಯ ಆಚಾರ್ಯ, ಕೊರಗಪ್ಪ ಗೌಡ, ಓಬಯ್ಯ ಹೊಸಂಗಡಿ, ವಸಂತಿ ಲಕ್ಷ್ಮಣ, ಅಮಿತಾ ಗೌಡ, ಕೇಶವತಿ, ಸುಶೀಲಾ, ಜಯಶೀಲ, ವಿನಿಷಾ ಪ್ರಕಾಶ್ ಉಪಸ್ಥಿತರಿದ್ದರು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್ ಬಿ. ಸ್ವಾಗತಿಸಿ, ಸಂಯೋಜಕ ಜಯಾನಂದ ವಂದಿಸಿದರು. ಸಹಾಯಕ ಲೆಕ್ಕಾಧಿಕಾರಿ ಗಣೇಶ ಪೂಜಾರಿ ನಿರೂಪಿಸಿದರು.
35,000 ಯೂನಿಟ
ಬೆಳ್ತಂಗಡಿ ಮೆಸ್ಕಾಂನ ಎಇಇ ಶಿವಶಂಕರ್ ಅವರು ಸೋಲಾರ್ ಘಟಕದ ಕುರಿತು ಮಾಹಿತಿ ನೀಡಿ, 24.32 ಕಿಲೋವ್ಯಾಟ್ ಸಾಮರ್ಥ್ಯದ ಈ ಘಟಕದ ಮೂಲಕ ವಾರ್ಷಿಕವಾಗಿ 35 ಸಾವಿರ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಅದನ್ನು ಸಾಮರ್ಥ್ಯ ಸೌಧದಲ್ಲಿ ಬಳಕೆ ಮಾಡಿ, ಹೆಚ್ಚುವರಿ ವಿದ್ಯುತ್ತನ್ನು ಮೆಸ್ಕಾಂ ಗ್ರಿಡ್‌ಗೆ ಪಡೆಯಲಾಗುತ್ತದೆ ಎಂದರು.