ಆರೋಗ್ಯ, ವಿದ್ಯುತ್‌, ನಿವೇಶನ ಸಮಸ್ಯೆ ಪರಿಹರಿಸಿ

Team Udayavani, Jul 3, 2019, 5:00 AM IST

23

ಬೆಳ್ಳಾರೆ: ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ, ಕಿರಿಯ ಆರೋಗ್ಯ ಸಹಾಯಕಿಯ ಕೊರತೆ, ಜಿಯೋ ಗುಂಡಿಯಿಂದ ಹದಗೆಟ್ಟ ರಸ್ತೆ, ಸಾರ್ವಜನಿಕ ರಸ್ತೆಗೆ ಬೇಲಿ, ಕಸದ ಸಮಸ್ಯೆ ಸೋಮವಾರ ನಡೆದ ಕಲ್ಮಡ್ಕ ಗ್ರಾಮಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.

ಕಲ್ಮಡ್ಕ ಗ್ರಾಮ ಪಂಚಾಯತ್‌ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಪಡ್ಪಿನಂಗಡಿಯ ಶಿವ ಗೌರಿ ಕಲಾಮಂದಿರದಲ್ಲಿ ಗ್ರಾ.ಪಂ. ಅಧ್ಯಕ್ಷ ಧರ್ಮಣ್ಣ ನಾಯ್ಕ ಜಿ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಕ್ಕುಪತ್ರಕ್ಕೆ ಆಗ್ರಹ

ಧರ್ಮಡ್ಕ ಕಾಲನಿಯ ಕೆಲವು ಮನೆಗಳಲ್ಲಿ ಫ‌ಲಾನುಭವಿಗಳಲ್ಲದವರು ಬಂದು ವಾಸ ಮಾಡುತ್ತಿದ್ದಾರೆ. ಕೆಲವು ಮನೆಗಳು ಮಾರಾಟವಾಗಿವೆ. ನಿವೇಶನದ ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಹಕ್ಕುಪತ್ರ ನೀಡಿ ಎಂದು ಜಯರಾಜ ನಡ್ಕ ಆಗ್ರಹಿಸಿದರು. ಇದಕ್ಕೆ ತಾ.ಪಂ. ಸದಸ್ಯ ಗಫ‌ೂರ್‌ ಸಾಹೇಬ್‌ ಉತ್ತರಿಸಿ, ಧರ್ಮಡ್ಕ ಕಾಲನಿಯಲ್ಲಿ 13 ಮನೆಗಳಿವೆ. ಇವುಗಳ ಪೈಕಿ 8 ಮನೆಗಳಲ್ಲಿ ಫ‌ಲಾನುಭವಿಗಳಲ್ಲದವರು ಇದ್ದಾರೆ. ತಾ.ಪಂ. ಸಭೆಯಲ್ಲೂ ಇದನ್ನು ಗಮನಕ್ಕೆ ತಂದಿದ್ದೇನೆ. ಇಲ್ಲಿ ವಾಸ ಇರುವವರಿಗೆ ಮಾತ್ರ ಹಕ್ಕುಪತ್ರ ನೀಡಬೇಕು ಎಂದು ತಹಶೀಲ್ದಾರರಿಗೂ ಹೇಳಿದ್ದೇನೆ. ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಮಂಚಿಕಟ್ಟೆಯಲ್ಲೂ ಹಕ್ಕುಪತ್ರ ನೀಡಿಲ್ಲ. ಹಕ್ಕುಪತ್ರವಿಲ್ಲದೆ ಉದ್ಯೋಗ ಖಾತರಿಗೂ ಅರ್ಜಿ ಸಲ್ಲಿಸಲಾಗುತ್ತಿಲ್ಲ ಎಂದು ಮಹಿಳೆಯೊಬ್ಬರು ಹೇಳಿದರು. ನಿವೇಶನಕ್ಕೆ ಅರ್ಜಿ ಕೊಟ್ಟು ಎಷ್ಟು ವರ್ಷವಾದರೂ ಸಿಗುತ್ತಿಲ್ಲ. ಮುಂದಿನ ಗ್ರಾಮಸಭೆಗೆ ಮೊದಲು ನಿವೇಶನ ನೀಡಿ ಎಂದು ಗ್ರಾಮಸ್ಥ ಹಮೀದ್‌ ಆಗ್ರಹಿಸಿದರು.

ಜಿಯೋ ಗುಂಡಿಯಿಂದ ಹಾಳಾದ ರಸ್ತೆ
ಕಲ್ಮಡ್ಕದಿಂದ ಕಾಪಡ್ಕದ ವರೆಗೆ ಜಿಯೋ ಸಂಸ್ಥೆ ಗುಂಡಿ ತೆಗೆದು ರಸ್ತೆ ಹಾಗೂ ಮೋರಿಯನ್ನು ಹಾಳುಗೆಡವಿದೆ. ರಸ್ತೆ ಬದಿಯ ಗುಂಡಿಯನ್ನೂ ಮುಚ್ಚದೆ ಸಂಚಾರವೇ ದುಸ್ತರವಾಗಿದೆ. ರಸ್ತೆಗೆ ಹಾಕಿರುವ ನಾಲ್ಕು ಮೋರಿಗಳನ್ನು ಹಾಳು ಮಾಡಿದ್ದಾರೆ ಎಂದು ಜಯರಾಜ್‌ ನಡ್ಕ ಹೇಳಿದರು. ಇದಕ್ಕೆ ತಾ.ಪಂ. ಸದಸ್ಯ ಗಫ‌ೂರ್‌ ಧ್ವನಿಗೂಡಿಸಿ, ಅವೈಜ್ಞಾನಿಕವಾಗಿ ಗುಂಡಿ ತೆಗೆಯಲು ಅವಕಾಶ ನೀಡಬಾರದೆಂದು ಹೇಳಿದ್ದೆ. ಜಿ.ಪಂ. ಎಂಜಿನಿಯರಿಂಗ್‌ ಇಲಾಖೆ ಸ್ಪಂದಿಸದ ಕಾರಣ 700 ಮೀಟರ್‌ ರಸ್ತೆಯೇ ಹಾಳಾಗಿ ಹೋಗಿದೆ. ಕಾನೂನು ಪ್ರಕಾರ ಯಾವುದನ್ನೂ ಮಾಡಿಲ್ಲ. ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳಲು ದಾಕ್ಷಿಣ್ಯ ಏಕೆ? ಎಂದು ಜಿ.ಪಂ. ಎಂಜಿನಿಯರ್‌ ಸುಳ್ಯ ಉಪವಿಭಾಗದ ಎಚ್.ಎಸ್‌. ಹುಕ್ಕೇರಿ ಅವರನ್ನು ಪ್ರಶ್ನಿಸಿದರು.

ಜಿಯೋ ಸಂಸ್ಥೆಗೆ ಬೇಸಗೆಯಲ್ಲಿ ಗುಂಡಿ ತೆಗೆಯಲು ಅನುಮತಿ ನೀಡಿದ್ದೇವೆ. ಮಳೆಗಾಲದಲ್ಲೂ ಅವರು ಕಾಮಗಾರಿ ನಡೆಸುತ್ತಿದ್ದು, ನೋಟಿಸ್‌ ಮಾಡಿದ್ದೇನೆ. ಕಾರ್ಯ ನಿರ್ವಾಹಕ ಅಭಿಯಂತರರಲ್ಲೂ ಮಾತನಾಡಿದ್ದೇನೆ ಎಂದು ಹುಕ್ಕೇರಿ ಉತ್ತರಿಸಿದರು.

ಬೇಲಿ ತೆರವುಗೊಳಿಸಿಕೊಳ್ಸಿಗೆ ಎನ್ನುವಲ್ಲಿ 5-6 ಮನೆಗಳನ್ನು ಸಂಪರ್ಕಿಸುವ ರಸ್ತೆಯನ್ನು

ಖಾಸಗಿ ವ್ಯಕ್ತಿಯೊಬ್ಬರು ಬೇಲಿ ಹಾಕಿ ಮುಚ್ಚಿದ್ದಾರೆ. ಇದರಿಂದ ಸುತ್ತುಬಳಸು ದಾರಿಯೇ ಗತಿಯಾಗಿದೆ. ಕೂಡಲೇ ಬೇಲಿ ತೆರವುಗೊಳಿಸಬೇಕೆಂದು ಗ್ರಾಮಸ್ಥ ಸೋಮಪ್ಪ ಗೌಡ ಆಗ್ರಹಿಸಿದರು. ಈ ಮಧ್ಯೆ ಪೊಲೀಸ್‌ ದೂರಿನ ಪ್ರತಿ ಹಿಡಿದು ವೇದಿಕೆ ಏರಿ ಮನವಿ ಸಲ್ಲಿಸಿದ ಸೋಮಪ್ಪ ಗೌಡ ಹಾಗೂ ಸದಸ್ಯ ಲೋಕೇಶ್‌ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ನೋಡಲ್ ಅಧಿಕಾರಿ ನ್ಯಾಯ ಸಮಿತಿಯಲ್ಲಿ ಒಂದು ವಾರದೊಳಗೆ ಸಮಸ್ಯೆ ಪರಿಹರಿಸಲು ಸೂಚನೆ ನೀಡಿ ಚರ್ಚೆ ಮುಗಿಸಿದರು.

ಪರಿಹಾರದ ಮೊತ್ತದ ಅನುಪಾತ ಹೇಗೆ?

ತೋಟಗಾರಿಕಾ ಇಲಾಖೆಯವರು ಮಾಹಿತಿ ನೀಡಿದಾಗ, ಗ್ರಾ.ಪಂ. ಸದಸ್ಯ ಲೋಕೇಶ್‌ ಅಕ್ರಿಕಟ್ಟೆ ಒಂದು ಎಕ್ರೆಗೆ 7,199.50 ರೂ. ಪರಿಹಾರ, 2 ಎಕ್ರೆಗೆ 2,500 ರೂ. ಪರಿಹಾರ ನೀಡಲಾಗಿದೆ. ಬೆಳೆ ನಷ್ಟ ಪರಿಹಾರದ ಅನುಪಾತ ಹೇಗೆ? ಎಂದು ಪ್ರಶ್ನಿಸಿದರು. 4 ಎಕ್ರೆಗೆ 5,000 ರೂ. ಪರಿಹಾರ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳಿದರು.

ನೀರಿಂಗಿಸಲು ಅವಕಾಶ ಕೊಡಿ

ನೀರಿಂಗಿಸುವಿಕೆಯನ್ನು ಆದಷ್ಟು ಬೇಗ ಮಾಡಬೇಕು. ಸರಕಾರಿ ಜಾಗದಲ್ಲಿ ನೀರಿಂಗಿಸುವಿಕೆ ಮಾಡಿದರೆ ಅನುದಾನವಿಲ್ಲ ಎಂದು ಹೇಳುತ್ತಿದ್ದಾರೆ. ಎಲ್ಲಿ ಬೇಕಾದರೂ ನೀರಿಂಗಿಸಲು ಅವಕಾಶ ಕೊಡಿ. ಪ್ರತಿ ಗ್ರಾಮದಲ್ಲೂ ನೀರಿಂಗಿಸುವ ಮಾಹಿತಿ ಕೊಡಲು ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಜಯರಾಜ ನಡ್ಕ ಕೃಷಿ ಇಲಾಖೆ ಅಧಿಕಾರಿಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಪಂಚಾಯತ್‌ ನಿರ್ಣಯ ಮಾಡಲು ನಿರ್ಧರಿಸಲಾಯಿತು.

ಕರಿಕ್ಕಳದಲ್ಲಿ ಮೆಸ್ಕಾಂ ಚರಂಡಿಯಲ್ಲೇ ಕಂಬ ಹಾಕಿದೆ. ಇದು ಅಪಾಯಕಾರಿಯಾಗಿದ್ದು, ಕೆಲವೆಡೆ ಬೀಳುವ ಸ್ಥಿತಿಯಲ್ಲಿವೆ ಎಂದು ಹಮೀದ್‌ ಹೇಳಿದರು. ಕಂಬ ತೆಗೆದ ಗುಂಡಿಗಳನ್ನೂ ಮುಚ್ಚದೆ ಹಲವು ಕಡೆ ಹೊಂಡಗಳು ನಿರ್ಮಾಣವಾಗಿವೆ ಎಂದು ಗ್ರಾಮಸ್ಥರು ದೂರಿದರು.

ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ನೋಡಲ್ ಅಧಿಕಾರಿ, ಸುಳ್ಯ ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ಲಕ್ಷಿ ್ಮೕಶ ರೈ, ತಾ.ಪಂ. ಸದಸ್ಯ ಗಫ‌ೂರ್‌ ಸಾಹೇಬ್‌, ಗ್ರಾ.ಪಂ. ಉಪಾಧ್ಯಕ್ಷೆ ವಾರಿಜಾ ಪಿ.ಎಸ್‌., ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಪ್ರವೀಣ್‌ ಕುಮಾರ್‌ ಸ್ವಾಗತಿಸಿದರು.

ಕಲ್ಲೇರಿ ಸೇತುವೆಯ ಮೇಲಿಂದ ಹೊಳೆಗೆ ನಿರಂತರವಾಗಿ ಕಸ ಎಸೆಯುತ್ತಿದ್ದಾರೆ. ಅಲ್ಲಿ ಸಿಸಿ ಕೆಮರಾ ಅಳವಡಿಸಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸುರೇಶ್‌ ಕುಮಾರ್‌ ಮನವಿ ಮಾಡಿದರು. ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಿ ಜೀವ ಹಾನಿಯಿಂದ ರಕ್ಷಿಸಬೇಕೆಂದು ಗ್ರಾಮಸ್ಥ ಜಿ.ಎ. ಮಹಮ್ಮದ್‌ ಮನವಿ ಮಾಡಿದರು. ಮೋಟಾರು ವಾಹನ ಕಾಯ್ದೆ ಹಾಗೂ ಅಪಘಾತ ರಹಿತ ವಾಹನ ಚಾಲನೆಗೆ ಸಹಕರಿಸುವಂತೆ ಬೆಳ್ಳಾರೆ ಠಾಣೆಯ ಪ್ರೊಬೆಷನರಿ ಪಿಎಸ್‌ಐ ಆಂಜನೇಯ ರೆಡ್ಡಿ ಮನವಿ ಮಾಡಿದರು. ಮನೆ ಕಟ್ಟುವ ಉದ್ದೇಶಕ್ಕೆ ಮರಳು ಸಾಗಾಣಿಕೆಗೆ ಅವಕಾಶ ನೀಡಬೇಕೆಂದು ಎಂ.ಕೆ. ಹನೀಫ್ ಮನವಿ ಮಾಡಿದರು.

ಕಲ್ಮಡ್ಕ ಹಾಗೂ ಪಂಬೆತ್ತಾಡಿಗೆ ಒಬ್ಬರೇ ಆರೋಗ್ಯ ಸಹಾಯಕಿ ಇದ್ದಾರೆ. ಇನ್ನೊಬ್ಬರು ಕಿರಿಯ ಆರೋಗ್ಯ ಸಹಾಯಕಿಯ ನೇಮಕಕ್ಕೆ ನಿರ್ಣಯ ಮಾಡಬೇಕು. ತಿಂಗಳಿಗೆ ಎರಡು ದಿನವಾದರೂ ಸಂಚಾರಿ ಆಸ್ಪತ್ರೆ ಬರಬೇಕು ಎಂದು ಹಮೀದ್‌ ಆಗ್ರಹಿಸಿದರು. ಗ್ರಾಮಸಭೆಯಲ್ಲಿ ಡೆಂಗ್ಯೂ ಜ್ವರದ ಮುನೆ‌್ನಚ್ಚರಿಕೆಯ ಬಗ್ಗೆ ಮಾಹಿತಿ ನೀಡಬೇಕೆಂದು ಎಂ.ಕೆ. ಹನೀಫ್ ಹೇಳಿದರು. ಬಳಿಕ ಪಂಜ ಆರೋಗ್ಯಾಧಿಕಾರಿ ಮಂಜುನಾಥ್‌ ಮಾಹಿತಿ ನೀಡಿದರು.

ಹೊಳೆಗೆ ಕಸ ಎಸೆಯುತ್ತಾರೆ

ಆರೋಗ್ಯ ಸಹಾಯಕಿ ನೇಮಿಸಿ

ಕಲ್ಮಡ್ಕ ಹಾಗೂ ಪಂಬೆತ್ತಾಡಿಗೆ ಒಬ್ಬರೇ ಆರೋಗ್ಯ ಸಹಾಯಕಿ ಇದ್ದಾರೆ. ಇನ್ನೊಬ್ಬರು ಕಿರಿಯ ಆರೋಗ್ಯ ಸಹಾಯಕಿಯ ನೇಮಕಕ್ಕೆ ನಿರ್ಣಯ ಮಾಡಬೇಕು. ತಿಂಗಳಿಗೆ ಎರಡು ದಿನವಾದರೂ ಸಂಚಾರಿ ಆಸ್ಪತ್ರೆ ಬರಬೇಕು ಎಂದು ಹಮೀದ್‌ ಆಗ್ರಹಿಸಿದರು. ಗ್ರಾಮಸಭೆಯಲ್ಲಿ ಡೆಂಗ್ಯೂ ಜ್ವರದ ಮುನೆ‌್ನಚ್ಚರಿಕೆಯ ಬಗ್ಗೆ ಮಾಹಿತಿ ನೀಡಬೇಕೆಂದು ಎಂ.ಕೆ. ಹನೀಫ್ ಹೇಳಿದರು. ಬಳಿಕ ಪಂಜ ಆರೋಗ್ಯಾಧಿಕಾರಿ ಮಂಜುನಾಥ್‌ ಮಾಹಿತಿ ನೀಡಿದರು.

ಟಾಪ್ ನ್ಯೂಸ್

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

18-aranthodu

Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ

3

Bantwal: ಬಿ.ಸಿ.ರೋಡ್‌ನ‌ ರೈಲ್ವೇ ಇಲಾಖೆಯ ಜಾಗದಲ್ಲಿ ಕೊಳೆತ ತ್ಯಾಜ್ಯ

2

Puttur: ಸಂಚಾರ ದಟ್ಟಣೆ ತಡೆಗೆ ಮಾಸ್ಟರ್‌ ಪ್ಲ್ಯಾನ್‌

1

Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ

MUST WATCH

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

ಹೊಸ ಸೇರ್ಪಡೆ

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.