ಬೆಳ್ತಂಗಡಿ: ಸೊರಗಿದ ಸೋಮಾವತಿ ನದಿ ಒಡಲು
Team Udayavani, Apr 23, 2020, 5:19 AM IST
ಬೆಳ್ತಂಗಡಿ: ಬಿರು ಬೇಸಗೆ ಯಿಂದ ತಾಲೂಕಿನ ಬಹುತೇಕ ನದಿ ಗಳು ಬತ್ತಲಾರಂಭಿಸಿದ್ದು, ಕೆಲವು ಪ್ರದೇಶಗಳಲ್ಲಿ ಸಾಂಪ್ರದಾಯಿಕ ಒಡ್ಡು ನಿರ್ಮಿಸಿರುವುದರಿಂದ ಅಲ್ಪಸ್ವಲ್ಪ ನೀರು ಶೇಖರಣೆಯಾಗಿದೆ. ಇದರ ಹೊರತಾಗಿ ಬೆಳ್ತಂಗಡಿ ಪ.ಪಂ. ವ್ಯಾಪ್ತಿಯ 11 ವಾರ್ಡ್ ಗಳಿಗೆ ನೀರು ಒದಗಿಸುತ್ತಿದ್ದ ಸೋಮಾವತಿಯ ಒಡಲು ಸಂಪೂರ್ಣ ಬತ್ತಿಹೋಗಿದೆ.
ವರ್ಷದಿಂದ ವರ್ಷಕ್ಕೆ ನಳ್ಳಿನೀರಿನ ಸಂಪರ್ಕ ಹೆಚ್ಚಾಗುತ್ತಿರುವುದರಿಂದ ಸೋಮಾ ವತಿ ನದಿಯ ಸಾಂಪ್ರದಾಯಿಕ ಕಟ್ಟ ದಲ್ಲಿ ಶೇಖರಣೆಯಾಗುತ್ತಿರುವ ನೀರು ಜೂನ್ ಆರಂಭದವರೆಗೆ ಸಾಲುತ್ತಿಲ್ಲ. ಇದನ್ನು ಮನಗಂಡು 2018-19ರಲ್ಲಿ ನದಿಗೆ ಸಣ್ಣ ನೀರಾವರಿ ಇಲಾಖೆಯಿಂದ 1.15 ಕೋ.ರೂ. ವೆಚ್ಚದಲ್ಲಿ ಕಿಂಡಿ ಅಣೆ ಕಟ್ಟು ನಿರ್ಮಾಣ ಮಾಡಲಾಗಿದೆ. ಈ ವರ್ಷ ನೀರು ಪೂರೈಕೆ ಸ್ವಲ್ಪಮಟ್ಟಿಗೆ ಆಧಾರವಾದರೂ ಪ್ರಸಕ್ತ ಬೇಸಗೆಯ ಕಾವು ಹೆಚ್ಚಾಗಿರುವುದರಿಂದ ಎಪ್ರಿಲ್‌ಗೆ ಸಂಪೂರ್ಣ ನೀರು ಬತ್ತಿದೆ.
7 ಲಕ್ಷ ಲೀ. ನೀರಿನ ಆವಶ್ಯಕತೆ
ನಗರಕ್ಕೆ ಪ್ರತಿನಿತ್ಯ 1.05 ಎಂಎಲ್‌ಡಿ ಅಂದರೆ 7 ಲಕ್ಷ ಲೀ. ನೀರಿನ ಆವಶ್ಯಕತೆಯಿದೆ. ನದಿಯಿಂದ 0.6 ಎಂಎಲ್‌ಡಿ ಪಡೆದು ಉಳಿದ 0.45 ಎಂಎಲ್‌ಡಿ ನೀರನ್ನು 17 ಕೊಳವೆಬಾವಿಗಳಿಂದ ಪಡೆಯಲಾಗುತ್ತಿದೆ.
11 ನೀರಿನ ಟ್ಯಾಂಕ್
ಪಟ್ಟಣ ಪಂ. ವ್ಯಾಪ್ತಿಯಲ್ಲಿ ಕಲ್ಲಗುಡ್ಡೆಯಲ್ಲಿ 1 ಲಕ್ಷ ಲೀ. ಮತ್ತು 5 ಲಕ್ಷ ಲೀ ಸಾಮರ್ಥ್ಯದ 2 ಟ್ಯಾಂಕ್, ಹಳೆಕೋಟೆ -1.75 ಲಕ್ಷ ಲೀ., ಕೋಟ್ಲಗುಡ್ಡೆ-2.30ಲಕ್ಷ ಲೀ.,
ಜೂನಿಯರ್ ಕಾಲೇಜು-2 ಲಕ್ಷ ಲೀ., ಕೆಲ್ಲಗುತ್ತು-1ಲಕ್ಷ ಲೀ., ರೆಂಕೆದಗುತ್ತು-1 ಲಕ್ಷ ಲೀ., ಹುಣ್ಸೆಕಟ್ಟೆ -1ಲಕ್ಷ ಲೀ., ಸುದೆಮುಗೇರು-50 ಸಾವಿರ ಲೀ., ಸಂಜಯನಗರ-2.30 ಲಕ್ಷ ಲೀ., ಗುಂಪಲಾಜೆ-25 ಸಾವಿರ ಲೀ. ಸಾಮರ್ಥ್ಯದ ನೀರಿನ ಓವರ್ ಹೆಡ್ ಟ್ಯಾಂಕ್‌ಗಳಿವೆ.
ಸಮಗ್ರ ಕುಡಿಯುವ ನೀರಿನ ಯೋಜನೆ
ಕರ್ನಾಟಕ ಅರ್ಬನ್ ವಾಟರ್ ಸಪ್ಲೈ ಆ್ಯಂಡ್ ಡ್ರೈನೇಜ್ ಬೋರ್ಡ್, ಯೋಜನೆಯಡಿ 13 ಕೋ.ರೂ. ಅನುದಾನದಲ್ಲಿ 2016-17ರಲ್ಲಿ ಕಲ್ಲಗುಡ್ಡೆಯಲ್ಲಿ 5 ಲಕ್ಷ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್, ಸಂಜಯನಗರ ಕೋರ್ಟ್ ಆವರಣದಲ್ಲಿ 2.30 ಲಕ್ಷ ಲೀ. ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಜತೆಗೆ ಇತರ ಓವರ್ ಹೆಡ್ ಟ್ಯಾಂಕ್‌ಗಳಿಗೂ ಪೈಪ್‌ಲೈನ್ ಕಾಮಗಾರಿ, ವಿದ್ಯುತ್ ಸಂಪರ್ಕ, ಜಾಕ್‌ವೆಲ್ ಕಾಮಗಾರಿ ನಡೆಸಲಾಗಿದೆ.
ಸಮಸ್ಯೆ ಬಾರದು
ಬೆಳ್ತಂಗಡಿಯ ಸೋಮಾವತಿ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ 17 ಕೊಳವೆಬಾವಿಗಳನ್ನು ಆಶ್ರಯಿಸಲಾಗಿದ್ದು, ಬೇಸಗೆಯಲ್ಲಿ ಯಾವುದೇ ಸಮಸ್ಯೆಬಾರದು.
- ಎಂ.ಎಚ್. ಸುಧಾಕರ್, ಪ.ಪಂ. ಮುಖ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Deepawali: ಸುಳ್ಯದಲ್ಲಿ ಗಮನ ಸೆಳೆದ ಬಲೀಂದ್ರ ಅಲಂಕಾರ ಸರ್ಧೆ
Bantwala ತಾಲೂಕು ಮಟ್ಟದ ಚಿಣ್ಣರ ಬಣ್ಣ ಮಕ್ಕಳ ಚಿತ್ರಕಲಾ ಸ್ಪರ್ಧೆ
Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!
ಮರ ಬಿದ್ದು ಸವಾರ ಸಾವು; ಅಪಾಯಕಾರಿ ಮರ ತೆರವಿಗೆ ಅಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.