Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವ : 3,500 ವಿದ್ಯಾರ್ಥಿಗಳು ಭಾಗಿ
Team Udayavani, Dec 10, 2023, 12:13 AM IST
ಬಂಟ್ವಾಳ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿ ರ ಲೋಕಾರ್ಪಣೆಯ ಸಂಭ್ರಮ, ಚಂದ್ರಯಾನ-3ರಲ್ಲಿ ಭಾರತದ ಸಾಧನೆ ಸೇರಿದಂತೆ ಹತ್ತಾರು ಬಗೆಯ ಮೈನವಿರೇಳಿಸುವ ಕವಾಯತುಗಳಿಗೆ ಶನಿವಾರ ಸಂಜೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನ ಸಾಕ್ಷಿಯಾಯಿತು. ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ 3,500ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನ ನಡೆಸಿದರು.
ಕತ್ತಲಾವರಿಸುತ್ತಿದ್ದಂತೆ ಪಥಸಂಚಲನದ ಮೂಲಕ ಕ್ರೀಡಾಕೂಟ ಆರಂಭ ಗೊಂಡಿತು. ಮುಂದೆ ಒಂದನ್ನೊಂದು ಮೀರಿಸುವ ರೀತಿಯ ಸುಮಾರು 20 ಬಗೆಯ ಪ್ರದರ್ಶನಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು. ಶಿಶು ನೃತ್ಯ, ಘೋಷ್, ಜಡೆ ಕೋಲಾಟ, ದೀಪಾರತಿ, ನಿಯುದ್ಧ, ಯೋಗಾಸನ, ಪ್ರಾಥಮಿಕ ಸಾಮೂಹಿಕ, ನೃತ್ಯ ಭಜನೆ, ಮಲ್ಲಕಂಬ, ಕೋಲ್ಮಿಂಚು ಪ್ರದರ್ಶನ, ಘೋಷ್ ಟಿಕ್ ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ಏಕಚಕ್ರ, ದ್ವಿಚಕ್ರ ಸಮತೋಲನ, ಬೆಂಕಿ ಸಾಹಸ, ಕಾಲ್ಚಕ್ರ, ಕೂಪಿಕಾ ಸಮತೋಲನ, ಪ್ರೌಢ ಸಾಮೂಹಿಕ ಪ್ರದರ್ಶನಗಳು ಗಮನ ಸೆಳೆದವು. 40 ಮಂದಿ ವಿಶೇಷ ಚೇತನ ವಿದ್ಯಾರ್ಥಿಗಳು ಕೂಡ ಕೂಡ ಸಾಹಸ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ವೀರಯೋಧ ಪ್ರಾಂಜಲ್ ಸೇರಿದಂತೆ ಹಲವು ಯೋಧರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ತುಳುನಾಡ ವೈಭವ, ಸೈಕಲ್ ರೇಸ್, ಬೈಕ್ ರೇಸ್, ಬೆಂಕಿ ಸಾಹಸಗಳು, ಚೆಂಡೆ ಕುಣಿತ ವಿಶೇಷ ಗಮನ ಸೆಳೆದವು.
ಶ್ರೀರಾಮ ವಿದ್ಯಾಕೇಂದ್ರ ಮಾದರಿ: ಕುಮಾರಸ್ವಾಮಿ
ಬಂಟ್ವಾಳ: ಗುರುಕುಲ ಪರಂ ಪರೆ, ಸಂಸ್ಕೃತ ಕಲಿಕೆ, ಹೆತ್ತವರಿಗೆ ಗೌರವ ನೀಡುವುದನ್ನು ಕಲಿಸುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಂತಹ ಸಂಸ್ಥೆಗಳು ಪ್ರತೀ ಹಳ್ಳಿ ಹಳ್ಳಿಗಳಲ್ಲೂ ಆರಂಭಗೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಶನಿವಾರ ವಿದ್ಯಾಕೇಂದ್ರದಲ್ಲಿ ಆಯೋ ಜನೆಗೊಂಡಿದ್ದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹಿಂದೆ ನಮಗೂ ಪ್ರಭಾಕರ ಭಟ್ ಅವರಿಗೂ ಅಭಿಪ್ರಾಯ ಭೇದ ಗಳಿದ್ದು, ಹೀಗಾಗಿ ಕೆಲವು ಟೀಕೆ, ಟಿಪ್ಪಣಿ ಮಾಡಿದ್ದು, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ಸೇಡಂ ಶ್ರೀ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು.
ಪುತ್ತೂರು ವಿವೇಕಾನಂದ ವಿದ್ಯಾವ ರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಪ್ರಸ್ತಾವನೆಗೈದರು. ಎಚ್. ಡಿ. ದೇವೇಗೌಡ ಕುಟುಂಬ ದೇಶಕ್ಕಾಗಿ ಕೆಲಸ ಮಾಡಿದ್ದು, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಾವು ಜತೆಯಾಗಿಯೇ ಜೈಲುವಾಸ ಅನುಭವಿಸಿದ್ದೆವು ಎಂದರು.
ಶಾಸಕ ಬಸವನಗೌಡ ಆರ್. ಪಾಟೀ ಲ್ ಯತ್ನಾಳ್, ಶಾಸಕರಾದ ರಾಜೇಶ್ ನಾಯ್ಕ… ಉಳಿಪ್ಪಾಡಿಗುತ್ತು, ಗುರುರಾಜ್ ಗಂಟಿಹೊಳೆ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಡಿ. ವೇದವ್ಯಾಸ ಕಾಮತ್, ಯಶ್‌ಪಾಲ್ ಸುವರ್ಣ, ಧೀರಜ್ ಮುನಿರಾಜು, ಕೋಟ ಶ್ರೀನಿವಾಸ ಪೂಜಾರಿ, ಎಸ್.ಎಲ್. ಭೋಜೇಗೌಡ, ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಕೃಷ್ಣ ಪಾಲೆಮಾರ್, ಪ್ರಮೋದ್ ಮಧ್ವರಾಜ್, ಗಣ್ಯರಾದ ಕ| ಅಶೋಕ್ ಕಿಣಿ, ಪ್ರೊ| ನಾಗೇಂದ್ರಯ್ಯ, ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಯದುನಾರಾಯಣ ಶೆಟ್ಟಿ, ಕೋಡಿ ವಿಜಯಕುಮಾರ್, ಸುಖಾನಂದ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಜಿತೇಂದ್ರ ಕುಂದೇಶ್ವರ, ರಘುನಾಥ ಸೋಮಯಾಜಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.