ಅನಾರೋಗ್ಯದ ನಡುವೆ 625 ಕ್ಕೆ 624!; ಎಲ್ಲರಿಗೂ ಸ್ಫೂರ್ತಿ ಈ ಸಾಧಕಿ
ದೇಶವೇ ತಿರುಗಿ ನೋಡುವಂತಹ ಸಾಧನೆ ಮಾಡಿದ ಪುತ್ತೂರಿನ ಸಿಂಚನಾ ಲಕ್ಷ್ಮೀ
Team Udayavani, Apr 30, 2019, 3:46 PM IST
ಪುತ್ತೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಪುತ್ತೂರಿನ ವಿದ್ಯಾರ್ಥಿನಿ ಮಾತ್ರ ತನ್ನ ಅಸಮಾನ್ಯ ಸಾಧನೆಯಿಂದ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಹೌದು, ಸಾಧನೆಗೆ ತಡೆ ಎನ್ನುವಂತಹ ದೇಹವನ್ನು ಬಾಧಿಸುತ್ತಿರುವ ಅನಾರೋಗ್ಯವಿದ್ದರೂ ಎಲ್ಲವನ್ನೂ ಮೆಟ್ಟಿ ನಿಂತು 625ಕ್ಕೆ 624 ಅಂಕಗಳನ್ನು ಪಡೆದ ಮಹಾ ಸಾಧನೆಯನ್ನು ಸಿಂಚನಾ ಲಕ್ಷ್ಮೀ ಮಾಡಿದ್ದಾಳೆ.
ಸಾಧಿಸಿದರೆ ಸಬಳ ನುಂಗಬಹದು ಎನ್ನುವುದನ್ನು ಸಿಂಚನಾ ಸಾಬೀತುಪಡಿಸಿದ್ದಾರೆ. ಬೆನ್ನುಹುರಿಯ ಸಮಸ್ಯೆಯಾಗಿರುವ ಸ್ಕೋಲಿಯೋಸಿಸ್‌ನಿಂದ ಬಳಲುತ್ತಿರುವ ಛಲದಂಕೆ ಸಿಂಚನಾ 624 ಅಂಕ ಪಡೆಯುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಪುತ್ತೂರಿನ ಕೋಡಂಕೇರಿ ಬಂಗಾರಡ್ಕ ನಿವಾಸಿ ಕೃಷಿಕರಾಗಿರುವ ಮುರಳೀಧರಮತ್ತು ಶೋಭಾ ದಂಪತಿಯ ಪುತ್ರಿಯಾಗಿರುವ ಸಿಂಚನಾ , ವಿವೇಕಾನಂದ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‌ನ ವಿದ್ಯಾರ್ಥಿನಿ .
ಅಚ್ಚರಿಯೆಂದರೆ, ಸಿಂಚನಾಗೆ ಸ್ಕೋಲಿಯೋಸಿಸ್‌ಗಾಗಿ ಈಗಾಗಲೆ 6 ಬಾರಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಬೆನ್ನು ಹುರಿಯ ಕಸಿ ಮಾಡಲಾಗಿದ್ದು, ಚಿಕಿತ್ಸಾ ವೆಚ್ಚವಾಗಿ 25 ಲಕ್ಷಕ್ಕೂ ಹೆಚ್ಚು ಹಣವನ್ನು ವ್ಯಯಿಸಲಾಗಿದೆ. ದೈಹಿಕವಾಗಿ ಇತರರಿಗಿಂತ ಸಣಕಲಾಗಿರುವ ಈಕೆಯ ಸಾಧನೆ ಮಾತ್ರ ಬಹಳ ಎತ್ತರದ್ದು.
ಸಾಧಿಸುವ ಛಲವಿದ್ದರೆ ಯಾವುದೂ ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಸಿಂಚನಾ ಸಾಬೀತು ಮಾಡುವ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾಳೆ.
ಅಕ್ಕ ಸಿಂಧೂರ ಸರಸ್ವತಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ.
ನಾನೂ ಎಲ್ಲರಂತೆ!
ಮೊದಲ ಮಹಡಿಯಲ್ಲಿ ಇದ್ದ ತರಗತಿ ಯನ್ನು ಕೆಳಗೆ ವ್ಯವಸ್ಥೆ ಮಾಡುವುದಾಗಿ ಹೇಳಿದಾಗ, ಬೇಡ ನಾನು ಎಲ್ಲರಂತೆಯೇ ಮೇಲಿನ ಕೊಠಡಿಗೆ ತೆರಳಿ ಕಲಿಯುತ್ತೇನೆ ಎಂದು ವಿಶ್ವಾಸದ ನುಡಿಗಳನ್ನು ಸಿಂಚನಾ ಹೇಳಿದ್ದನ್ನು ಶಿಕ್ಷಕರು ನೆನೆಪಿಸಿಕೊಳ್ಳುತ್ತಾರೆ.
ಶಾಸಕರಿಂದ ಅಭಿನಂದನೆ
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಸಿಂಚನಾ ಅವರ ಸಾಧನೆಯನ್ನುಕೊಂಡಾಡಿ ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.