ಅನಾರು ಸಂಪರ್ಕಕ್ಕೂ ಸ್ಟೀಲ್ ಬ್ರಿಡ್ಜ್ ಯೋಜನೆ
15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ; 75 ಕುಟುಂಬಕ್ಕೆ ಅನುಕೂಲ
Team Udayavani, Sep 12, 2019, 5:00 AM IST
ಪ್ರವಾಹಕ್ಕೆ ಸಿಲುಕಿ ಕುಸಿದ ಅನಾರು ಸೇತುವೆ. ಇಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣಗೊಳ್ಳಲಿದೆ.
ಬೆಳ್ತಂಗಡಿ: ನೆರೆಗೆ ಸಿಲುಕಿ ಆ. 9ರಂದು ಬಾಂಜಾರುಮಲೆ ಮತ್ತು ಅನಾರು ಸೇತುವೆ ಕೊಚ್ಚಿಹೋದ ಪರಿಣಾಮ ತಿಂಗಳೊಳಗೆ ತಾತ್ಕಾಲಿಕ ನೆಲೆಯಲ್ಲಿ ಸುರಕ್ಷಿತ ಹಾಗೂ ಬಲಿಷ್ಠ ಸಂಪರ್ಕ ಸೇತುವೆ ನಿರ್ಮಿಸುವಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಶಕ್ತವಾಗಿದೆ.
ಬಾಂಜಾರುಮಲೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣವಾದ ಬೆನ್ನಲ್ಲೇ ಅನಾರು ಸೇತುವೆಗೂ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಶಾಸಕ ಹರೀಶ್ ಪೂಂಜ ಅವರ ಸೂಚನೆಯಂತೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಇಲಾಖೆ ಸ್ಟೀಲ್ ಬ್ರಿಡ್ಜ್ ಅಳವಡಿಸಲು ಪೂರ್ವ ತಯಾರಿ ನಡೆಸಿದೆ.
50 ಮೀ. ಉದ್ದ, 4 ಅಡಿ ಅಗಲ
ಸುಮಾರು 50 ಮೀ. ಉದ್ದ, 4 ಅಡಿ ಅಗಲದ ಸ್ಟೀಲ್ ಬ್ರಿಡ್ಜ್ ನಿರ್ಮಾಣವಾಗಲಿದ್ದು, ಪಾದಚಾರಿಗಳಿಗೆ, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಮಾಸ್ಟರ್ ಪ್ಲಾನರಿಯಿಂದ ಯೋಜನೆ ಸಿದ್ಧಗೊಂಡಿದೆ. 3 ಪಿಲ್ಲರ್ ಅಳವಡಿಸಲಿದ್ದು, ಮಧ್ಯ ಭಾಗದಲ್ಲಿ ಬಂಡೆ ಕೊರೆದು ಪಿಲ್ಲರ್ ಅಳವಡಿಸಲಾಗುತ್ತದೆ. ಕಾರ್ಯಪಾಲಕ ಅಭಿಯಂತ ಯಶವಂತ್, ಶಾಸಕರು, ಸ. ಕಾರ್ಯ ಪಾಲಕ ಅಭಿಯಂತ ಶಿವಪ್ರಸಾದ್ ಅಜಿಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನೀರಿನ ಹರಿವು ಕಡಿಮೆಯಾದ ತತ್‌ಕ್ಷಣ ಸ್ಟೀಲ್ ಬ್ರಿಡ್ಜ್ ಅಳವಡಿಕೆ ಕಾಮಗಾರಿ ನಡೆಯಲಿದೆ.
ಸೇತುವೆ ಹಾನಿಯಿಂದ ಈ ಭಾಗದ ಸುಮಾರು 75 ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದಾರೆ. ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ 25 ಕಿ.ಮೀ. ಸುತ್ತುಬಳಸಿ ಬರಬೇಕಾದ ಕತ್ತರಿಗುಡ್ಡೆ, ಅನಾರು, ನಳ್ಳಿಲಿ, ಸಾತಿಲು ನಿವಾಸಿಗಳಿಗೆ ಅನುಕೂಲವಾಗಲಿದೆ. ಮಕ್ಕಳು ಶಾಲೆಗೆ ತೆರಳಲು ಅನುಭವಿಸುತ್ತಿರುವ ಸಮಸ್ಯೆ ಮನಗಂಡು ಶಾಸಕ ಹರೀಶ್ ಪೂಂಜ ಎರಡು ಹೊತ್ತು ಬಾಡಿಗೆ ನೆಲೆಯಲ್ಲಿ ಜೀಪ್ ವ್ಯವಸ್ಥೆಗೊಳಿಸಿದ್ದು, ಇದರಿಂದ ಮಕ್ಕಳು ಶಾಲೆಗೆ ತೆರಳಲು ಅನುಕೂಲವಾಗಿದೆ.
ಶೀಘ್ರ ಕಾಮಗಾರಿ
ಅನಾರು ಸೇತುವೆ ಹಾನಿಗೊಳಗಾದ ಸ್ಥಳದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ 3 ಪಿಲ್ಲರ್ ಸಹಿತ ಸ್ಟೀಲ್ ಬ್ರಿಡ್ಜ್ ನಿರ್ಮಾಣವಾಗಲಿದೆ. ನೀರು ಕಡಿಮೆಯಾದ ತತ್‌ಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು.
– ಶಿವಪ್ರಸಾದ್ ಅಜಿಲ
ಸಹಾಯಕ ಕಾರ್ಯಪಾಲಕ ಅಭಿಯಂತ, ಪಿಡಬ್ಲ್ಯುಡಿ, ಬೆಳ್ತಂಗಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.