ಉದ್ಘಾಟನೆಯಾಗಿ 5 ತಿಂಗಳು ಕಳೆದರೂ ಉರಿಯದ ಬೀದಿ ದೀಪ
ಬಿ.ಸಿ.ರೋಡ್-ಜಕ್ರಿಬೆಟ್ಟು ಚತುಷ್ಪಥ ಹೆದ್ದಾರಿ
Team Udayavani, Jul 30, 2022, 10:35 AM IST
ಬಂಟ್ವಾಳ: ಬಿ.ಸಿ.ರೋಡ್- ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೊಂಡು 5 ತಿಂಗಳು ಕಳೆದರೂ ಕೂಡ ಬಿ.ಸಿ.ರೋಡ್- ಜಕ್ರಿಬೆಟ್ಟು ಚತುಷ್ಪಥ ಕಾಂಕ್ರೀಟ್ ಹೆದ್ದಾರಿಯ ಮಧ್ಯೆ ಅಳವಡಿಸಲಾಗಿರುವ ಸುಮಾರು 80 ಬೀದಿದೀಪಗಳಿಗೆ ಇನ್ನೂ ಕೂಡ ಉರಿಯುವ ಭಾಗ್ಯ ದೊರಕಿಲ್ಲ.
ಹೆದ್ದಾರಿಯ ಒಟ್ಟು 19.85 ಕಿ.ಮೀ. ಅಂತರದ ಹೆದ್ದಾರಿ ಅಭಿವೃದ್ಧಿ ಸಂದರ್ಭ 3.85 ಕಿ.ಮೀ.ಹೆದ್ದಾರಿಯನ್ನು ಜಕ್ರಿಬೆಟ್ಟು ತನಕ ಚತುಷ್ಪಥ ಹೆದ್ದಾರಿಯಾಗಿ ಅಭಿವೃದ್ಧಿ ಪಡಿಸಲಾಗಿದೆ. ಮಧ್ಯಕ್ಕೆ ಡಿವೈಡರ್ ನಿರ್ಮಿಸಿ ಎರಡೂ ಬದಿ ತಲಾ 7 ಮೀ. ಅಗಲದ ಕಾಂಕ್ರೀಟ್ ರಸ್ತೆ ನಿರ್ಮಿಸಿ ಡಿವೈಡರ್ ಮಧ್ಯೆ ಈ ಬೀದಿದೀಪಗಳನ್ನು ಅಳವಡಿಸಲಾಗಿದೆ.
ಪ್ರಸ್ತುತ ಹೆದ್ದಾರಿ ಕಾಮಗಾರಿ ಪೂರ್ಣ ಗೊಂಡು ಇಷ್ಟು ಸಮಯ ವಾದರೂ ಬೀದಿ ದೀಪಗಳು ಯಾಕೆ ಉರಿಯುತ್ತಿಲ್ಲ ಎಂಬ ಪ್ರಶ್ನೆ ಸಾರ್ವ ಜನಿಕರನ್ನು ಕಾಡುತ್ತಿದ್ದು, ಇದರ ಜತೆಗೆ ಒಂದಷ್ಟು ಬಾಕಿ ಇರುವ ಕಾಮಗಾರಿಯನ್ನೂ ಪೂರ್ಣಗೊಳಿಸುವ ಕುರಿತು ಕ್ರಮಕೈಗೊಳ್ಳಬೇಕಿದೆ.
ವಿವಿಧ ಹೆದ್ದಾರಿ ಕಾಮಗಾರಿಗಳ ಶಿಲಾನ್ಯಾಸಕ್ಕಾಗಿ ಫೆ. 28ರಂದು ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಘಡ್ಕರಿ ಮಂಗಳೂರಿನಿಂದಲೇ ಬಿ.ಸಿ.ರೋಡ್- ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನೂ ಉದ್ಘಾಟಿಸಿದ್ದರು. ಆದರೆ ಆ ಸಂದರ್ಭದಲ್ಲಿ ಹೆದ್ದಾರಿಯ ಕಾಮಗಾರಿ ಕೂಡ ಪೂರ್ಣಗೊಂಡಿರಲಿಲ್ಲ.
ಈ ಹೆದ್ದಾರಿ ಕಾಮಗಾರಿ ಉದ್ಘಾಟನೆ ಗೊಂಡ ಬಳಿಕ ಅದರ ಮುಂದುವರಿದ ಕಾಮಗಾರಿಯೂ ನಿಧಾನಗತಿಯಲ್ಲಿತ್ತು. ಈಗಲೂ ಕೆಲವೊಂದು ಕಾಮಗಾರಿ ಬಾಕಿ ಇದ್ದು, ಅದರ ಭಾಗವಾಗಿ ಬೀದಿದೀಪಗಳು ಉರಿಯುತ್ತಿಲ್ಲ. ಜತೆಗೆ ಡಿವೈಡರ್ ಮಧ್ಯೆ ಅಳವಡಿಸಿರುವ ತಡೆಬೇಲಿಯ ಬಣ್ಣ ಬಳಿಯುವ ಕಾಮಗಾರಿ ಸೇರಿ ಕೆಲವೆಡೆ ತಡೆ ಬೇಲಿ ಅಳವಡಿಕೆಯೂ ಬಾಕಿಯಾಗಿದೆ.
ಸುಸಜ್ಜಿತ ಎಲ್‌ಇಡಿ ಲೈಟ್
ಬಿ.ಸಿ.ರೋಡ್-ಜಕ್ರಿಬೆಟ್ಟು ಹೆದ್ದಾರಿಯ ಡಿವೈಡರ್ ಮಧ್ಯೆ ಸುಮಾರು 80ಕ್ಕೂ ಅಧಿಕ ಬೀದಿದೀಪಗಳನ್ನು ಅಳವಡಿಸಲಾಗಿದ್ದು, ಒಂದೊಂದು ಕಂಬದಲ್ಲಿ ಹೆದ್ದಾರಿ ಎರಡೂ ಬದಿಗಳಿಗೂ ಕಾಣುವಂತೆ ಪ್ರತ್ಯೇಕ ಲೈಟ್ ಗಳಿವೆ. ಈ ಲೈಟ್‌ಗಳು ಗುಣಮಟ್ಟದ ಎಲ್ ಇಡಿ ಲೈಟ್‌ಗಳಾಗಿವೆ.
ಪ್ರಸ್ತುತ 79 ಬೀದಿ ದೀಪಗಳನ್ನು ಅಳ ವಡಿಸಲಾಗಿದ್ದು, ಬಂಟ್ವಾಳ ಬೈಪಾಸ್ ಜಂಕ್ಷನ್ ಹಾಗೂ ಭಂಡಾರಿಬೆಟ್ಟು ಜಂಕ್ಷನ್ ನಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಜತೆಗೆ ಕಾಂಕ್ರೀಟ್ ಕಾಮಗಾರಿ ವಿಳಂಬ ವಾಗಿ ನಡೆದಿರುವ ಬಂಟ್ವಾಳ ಬೈಪಾಸ್, ಭಂಡಾರಿಬೆಟ್ಟು ಹಾಗೂ ಕಾಮಾಜೆ ಕ್ರಾಸ್ ಬಳಿ ಡಿವೈಡರ್ ಮಧ್ಯೆ ಬೀದಿದೀಪ ಅಳವಡಿಕೆಗೂ ಬಾಕಿಯಿದೆ.
ಸಂಪರ್ಕ ನೀಡಿ ಹಸ್ತಾಂತರ: ಬೀದಿದೀಪಗಳಿಗೆ ವಿದ್ಯುತ್ ಸಂಪರ್ಕ ನೀಡಿ ಪುರಸಭೆಗೆ ಹಸ್ತಾಂತರ ಮಾಡು ತ್ತೇವೆ. ಅಂದರೆ ಅದರ ನಿರ್ವಹಣೆ ಹಾಗೂ ವಿದ್ಯುತ್ ಬಿಲ್ ಪಾವತಿಗೆ ನಮ್ಮಲ್ಲಿ ಅವಕಾಶವಿಲ್ಲ. ಇದರ ಕುರಿತು ಪುರಸಭೆಗೆ ಪತ್ರವನ್ನೂ ಬರೆದಿದ್ದೇವೆ. –ಕೃಷ್ಣ ಕುಮಾರ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.